9:23 AM Sunday8 - March 2026
ಬ್ರೇಕಿಂಗ್ ನ್ಯೂಸ್
ಕಂಬಳಕ್ಕೆ ರಾಜ್ಯ ಸರಕಾರದಿಂದ ಹಣಕಾಸಿನ ನೆರವು: ಬಂಟ್ವಾಳದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ಹೈಕಮಾಂಡ್ ಸೂಚಿಸಿದರೆ ಕ್ಷಣಾರ್ಧದಲ್ಲಿ ಕುರ್ಚಿ ಬಿಡಲು ಸಿದ್ಧ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ಜನಾಶೀರ್ವಾದವಿದ್ದರೆ ಮಾತ್ರ ಮುಖ್ಯಮಂತ್ರಿಯಾಗಲು ಸಾಧ್ಯ: ಮೈಸೂರಿನಲ್ಲಿ‌ ಸಿಎಂ ಸಿದ್ದರಾಮಯ್ಯ Kodagu | ಮಹಿಳೆಯ ಗರ್ಭಾಶಯದಲ್ಲಿ 7 ಕೆಜಿ ಗೆಡ್ಡೆ: ಶಸ್ತ್ರಚಿಕಿತ್ಸೆ ಮೂಲಕ ಹೊರಕ್ಕೆ Kodagu | ದೊಡ್ಡಕೊಡ್ಲಿ ಗ್ರಾಮದಲ್ಲಿ ಕೋವಿಯಿಂದ ಗುಂಡು ಸಿಡಿದು ಯುವಕ ಸಾವು ರಾಜ್ಯದ 17ನೇ ಬಜೆಟ್: ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರಮುಖ ಘೋಷಣೆ; ಡಾ. ಯು.… ಮತ್ತೆ ಮರಳಲಿದೆ ಕ್ಯಾಂಪಸ್ ಪಾಲಿಟಿಕ್ಸ್: ರಾಜ್ಯದ ಎಲ್ಲಾ ಕಾಲೇಜು, ವಿವಿಗಳಲ್ಲಿ ವಿದ್ಯಾರ್ಥಿ ಸಂಘಗಳ… ಮಂಗಳೂರು ಮೀನುಗಾರಿಕೆ ಮಹಾವಿದ್ಯಾಲಯ ಸ್ಥಾಪನೆ: ರಾಜ್ಯ ಬಜೆಟ್ ನಲ್ಲಿ‌ ಘೋಷಣೆ ಎಣ್ಣೆಪ್ರಿಯರಿಗೆ ಶಾಕ್ ನೀಡಿದ ಬಜೆಟ್‌: ಮದ್ಯದ ಮೇಲೆ ಹೊಸ ರೂಪದ ತೆರಿಗೆ ಕೋರ್ಟು ಅಲೆದಾಟ ತಪ್ಪಿಸಲು 10 ಕೋಟಿ ವೆಚ್ಚದಲ್ಲಿ ಇ ಕೋರ್ಟ್‌ ಸ್ಥಾಪನೆ

ಇತ್ತೀಚಿನ ಸುದ್ದಿ

ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷರಾಗಿ ತಾರನಾಥ ಗಟ್ಟಿ ಕಾಪಿಕಾಡ್ ಆಯ್ಕೆ

26/07/2023, 22:01

ಮಂಗಳೂರು(reporterkarnataka.com): ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಮಹಾಸಭೆಯು ಕೆ.ಜೆ.ಯು. ಜಿಲ್ಲಾ ಸಮಿತಿ ಅಧ್ಯಕ್ಷ ಹರೀಶ್ ಬಂಟ್ವಾಳ್ ಅವರ ಅಧ್ಯಕ್ಷತೆಯಲ್ಲಿ ಮಂಗಳೂರಿನ ವುಡ್ ಲ್ಯಾಂಡ್ ಹೋಟೆಲ್ ಸಭಾಂಗಣದಲ್ಲಿ ಜರುಗಿತು.

ಈ ಸಂದರ್ಭದಲ್ಲಿ ಮುಂದಿನ ಅವಧಿಗೆ ನೂತನ ಜಿಲ್ಲಾ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಜಿಲ್ಲಾ ಸಮಿತಿಯ ಗೌರವಾಧ್ಯಕ್ಷರಾಗಿ ಹರೀಶ್ ಬಂಟ್ವಾಳ್, ಗೌರವ ಸಲಹೆಗಾರರಾಗಿ ರಿಚರ್ಡ್ ಲಸ್ರಾದೋ, ನೂತನ ಅಧ್ಯಕ್ಷರಾಗಿ ತಾರಾನಾಥ್ ಗಟ್ಟಿ ಕಾಪಿಕಾಡ್, ಪ್ರಧಾನ ಕಾರ್ಯದರ್ಶಿಯಾಗಿ ಕೆನ್ಯೂಟ್ ಪಿಂಟೋ, ಕೋಶಾಧಿಕಾರಿಯಾಗಿ ಗಿರಿಧರ ಶೆಟ್ಟಿ , ಸಂಘಟನಾ ಕಾರ್ಯದರ್ಶಿಯಾಗಿ ಹಮೀದ್ ವಿಟ್ಲ ಆಯ್ಕೆಯಾದರು.
ಉಪಾಧ್ಯಕ್ಷರುಗಳಾಗಿ ಲಕ್ಷ್ಮಣ ಕುಂದರ್, ಮಂದಾರ ರಾಜೇಶ್ ಭಟ್, ಶರೀಫ್ ಜಟ್ಟಿಪಳ್ಳ, ಜ್ಯೋತಿ ಪ್ರಕಾಶ್ ಪುಣಚ ಆಯ್ಕೆಯಾದರು.
ಕಾರ್ಯದರ್ಶಿಗಳಾಗಿ ಶ್ರೀಮತಿ ಪೂಜಾಶ್ರೀ ವಿತೇಶ್ ಕೋಡಿ, ಶ್ರೀಮತಿ ಹೇಮಾ ಜಯರಾಮ ರೈ, ಗಣೇಶ್ ಕುಕ್ಕುದಡಿ ಆಯ್ಕೆಯಾದರು. ಸದಸ್ಯತ್ವ ಅಭಿಯಾನದ ಸಂಚಾಲಕರಾಗಿ ಈಶ್ವರ ವಾರಣಾಶಿಯವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕಾರಿ ಸಮಿತಿಯ ಸದಸ್ಯರುಗಳಾಗಿ ಗೋಪಾಲ ಅಂಚನ್, ಶಿವಪ್ರಸಾದ್ ಆಲೆಟ್ಟಿ, ರಾಮದಾಸ್ ವಿಟ್ಲ, ಯಶ್ವಿತ್ ಕಾಳಮ್ಮನೆ, ಶ್ರೀಮತಿ ಜಯಶ್ರೀ ಕೊಯಿಂಗೋಡಿ, ಶ್ರೀಧರ ಕಜೆಗದ್ದೆ, ರಮೇಶ್ ಪೆರ್ಲ, ಡೊನಾಲ್ಡ್ ಪಿರೇರಾ ,ರಮೇಶ್ ನೀರಬಿದಿರೆ, ವಿನಯ್ ಜಾಲ್ಸೂರು, ಕೆ.ಟಿ. ಬಾಗೀಶ್ ಕೊಯಿಕುಳಿ, ವಿನಯ್ ಕಲ್ಮಡ್ಕ, ಕುಶಾಂತ್ ಕೊರತ್ಯಡ್ಕ, ಧನರಾಜ್,ಅನುಷ್ ಪಂಡಿತ್ , ಶ್ರೀಮತಿ ರಮ್ಯಾ ಸತೀಶ್ ಕಳಂಜ, ಶ್ರೀಮತಿ ರೇಖಾ ಸುಭಾಷ್, ಫ್ಲಾಯ್ಡ್ ಜೀವನ್ ಫರ್ನಾಂಡೀಸ್, ಶಿವಪ್ರಸಾದ್ ಆಲೆಟ್ಟಿ, ರಾಮದಾಸ್ ವಿಟ್ಲ, ಅಶ್ವಿತ್ ಸುಳ್ಯ ಆಯ್ಕೆಯಾದರು.

ಇತ್ತೀಚಿನ ಸುದ್ದಿ

ಜಾಹೀರಾತು