8:59 PM Friday23 - January 2026
ಬ್ರೇಕಿಂಗ್ ನ್ಯೂಸ್
ಪ್ರೀತಿಯಲ್ಲಿ ಒಂದಾದ ಭಾರತ- ಚೀನಾ!: ಚೈನಾದ ಬೆಡಗಿಯ ಕೈ ಹಿಡಿದ ಕಾಫಿನಾಡ ಯುವಕ ಗೋಣಿಕೊಪ್ಪ- ತಿತಿಮತಿ ಮುಖ್ಯ ರಸ್ತೆಯಲ್ಲಿ‌ ರಾತ್ರಿ ವ್ಯಾಘ್ರನ ದರ್ಶನ; ಭಯಭೀತರಾದ ಗ್ರಾಮಸ್ಥರು ಸದನದ ಪಾವಿತ್ರ್ಯತೆ ಹಾಳು ಮಾಡುವ ಕೆಲಸ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಟೀಕೆ ನರೇಗಾ ಉಳಿಸಲು ಕಾಂಗ್ರೆಸ್ ಉಪವಾಸ ಸತ್ಯಾಗ್ರಹ ಕೋಲಾರದಲ್ಲಿ ಸರಕಾರದಿಂದಲೇ ವೈದ್ಯಕೀಯ ಕಾಲೇಜು: ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಘೋಷಣೆ ಶಿಕ್ಷಣ ಮತ್ತು ಕೈಗಾರಿಕೆ ಒಗ್ಗೂಡಿದರೆ ಮಾತ್ರ ನಾವೀನ್ಯತೆ ಹೆಚ್ಚಿನ ಅವಕಾಶ ಸಿಗಲಿದೆ: ಇಸ್ರೋ… ಹುಣಸೂರಿನ ಜುವೆಲ್ಲರಿ ದರೋಡೆ ಪ್ರಕರಣ: ಇಬ್ಬರು ಆರೋಪಿಗಳ ಬಿಹಾರದಲ್ಲಿ ಬಂಧನ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅನುಷ್ಠಾನದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ: ಕೃಷಿ… ಜನಾರ್ದನ ರೆಡ್ಡಿ, ಶ್ರೀರಾಮುಲು ಶಕ್ತಿ ಅಡಗಿಸಲು ಯಾರಿಂದಲೂ ಸಾಧ್ಯವಿಲ್ಲ: ಮಾಜಿ ಸಿಎಂ ಬಸವರಾಜ… ಕಾರು ಚಾಲಕನ ನಿರ್ಲಕ್ಷ್ಯ ಚಾಲನೆ: ಶ್ರಮಜೀವಿ ಶಿವರಾಜಪುರ ರಮೇಶ್ ದಾರುಣ ಸಾವು

ಇತ್ತೀಚಿನ ಸುದ್ದಿ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಎಂಬಿಎ ಪರೀಕ್ಷೆ: ಉಷಾ ನಾಯಕ್ ಪ್ರಥಮ Rank

27/02/2024, 19:33

ಮಂಗಳೂರು(reporterkarnataka.ccm):ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು ಕಳೆದ 2023ರ ಸಾಲಿನಲ್ಲಿ ನಡೆಸಿದ ಅಂತಿಮ ಎಂಬಿಎ ಪರೀಕ್ಷೆಯಲ್ಲಿ ಉಷಾ ನಾಯಕ್ ಅವರು ಪ್ರಥಮ Rank ಹಾಗೂ ನಗದು ಪುರಸ್ಕಾರ ಪಡೆದಿದ್ದಾರೆ.
ಬಾಲ್ಯದಿಂದಲೂ ತಂದೆಯ ಆಸೆಯನ್ನು ನೆರವೇರಿಸ ಬೇಕೆಂಬ ಛಲ, ಸತತ ಪ್ರಯತ್ನ, ಆತ್ಮ ವಿಶ್ವಾಸ ಹೊಂದಿರುವ ಈಕೆ ನಗರದ ಕೆನರಾ ಕಾಲೇಜು ಹಾಗೂ ಸಂಧ್ಯಾ ಕಾಲೇಜಿನಲ್ಲಿ ವಾಣಿಜ್ಯ ಹಾಗೂ ನಿರ್ವಹಣಾ ಶಾಸ್ತ್ರದ ಉಪನ್ಯಾಸಕಿಯಾಗಿ ಕಳೆದ 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಮೂಡುಬಿದಿರೆ ಒಂಟಿಕಟ್ಟೆಯ ರವೀಂದ್ರ ನಾಯಕ್ ಹಾಗೂ ಜಯಶ್ರೀ ನಾಯಕ್ ಅವರ ಪುತ್ರಿ. ಅವರು ಯೆನೋಪಯ ಕಾಲೇಜಿನ ನಿರ್ವಹಣಾ ವಿಭಾಗದ ಉಪನ್ಯಾಸಕ ಡಾ. ಪ್ರಶಾಂತ್ ಅವರ ಪತ್ನಿ. ಇದೇ ಬರುವ ಮಾರ್ಚ್ 3 ರಂದು ನಡೆಯಲಿರುವ ವಾರ್ಷಿಕ ಘಟಿಕೋತ್ಸವದಂದು ರಾಜ್ಯಪಾಲರು ಇವರನ್ನು rank ಪ್ರಮಾಣ ಪತ್ರ ಹಾಗೂ ನಗದು ಬಹುಮಾನವನ್ನು ನೀಡಲಿರುವರು.

ಇತ್ತೀಚಿನ ಸುದ್ದಿ

ಜಾಹೀರಾತು