ಇತ್ತೀಚಿನ ಸುದ್ದಿ
ಕರ್ನಾಟಕ ರಾಜ್ಯ ಮುಕ್ತ ವಿವಿ ಅಂತಿಮ ಎಂಬಿಎ ಪರೀಕ್ಷೆ; ಸೀಮಾ ಪ್ರಭುಗೆ 7ನೇ Rank
26/02/2024, 22:42

ಮಂಗಳೂರು(reporterkarnataka.com): ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ 2023ನೇ ಜೂನ್ ಸಾಲಿನಲ್ಲಿ ನಡೆಸಿದ ಅಂತಿಮ ಎಂಬಿಎ ಪರೀಕ್ಷೆಯಲ್ಲಿ ಸೀಮಾ ಪ್ರಭು ಎಸ್ ಅವರು ಏಳನೇ rank ಗಳಿಸಿದ್ದಾರೆ.
ಅವರು ನಗರದ ಕೆನರಾ ಕಾಲೇಜು ಹಾಗೂ ಕೆನರಾ ಸಂಧ್ಯಾ ಕಾಲೇಜಿನಲ್ಲಿ ವಾಣಿಜ್ಯ ಹಾಗೂ ನಿರ್ವಹಣಾ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿಯಾಗಿ ಹಾಗೂ ಅದೇ ಕಾಲೇಜಿನ ರಾಷ್ಟ್ರೀಯ ಸೇವಾಯೋಜನೆಯ ಯೋಜನಾಧಿಕಾರಿಯಾಗಿಯು ಕಳೆದ ಹಲವಾರು ವರುಷಗಳಿಂದ ಸೇವೆ ಸಲ್ಲಿಸುತ್ತಿದ್ದೂ ಕೆನರಾ ಕಾರ್ಕಳದ ಶ್ರೀ ವೆಂಕಟರಮಣ ಮಹಿಳಾ ಕಾಲೇಜಿನ ಹಳೆ ವಿದ್ಯಾರ್ಥಿನಿಯಾಗಿರುವ ಇವರು ತೆಳ್ಳಾರಿನ ಸಿಂಡಿಕೇಟ್ ಬ್ಯಾಂಕಿನ ನಿವ್ರತ್ತ ಉದ್ಯೋಗಿ ಕೆ.ಪಿ. ಸತ್ಯೇಂದ್ರ ಪ್ರಭು ಮತ್ತು ಪುಷ್ಪ ಪ್ರಭು ಇವರ ಪುತ್ರಿ ಹಾಗೂ ಪ್ರೊಟೊ ಕೊನ್ಸೆಟ್ ಹಾಗೂ ಕ್ರಿಯೇಟೆವ್ಸ್ ಇದರ ಮಾಲೀಕರಾದ ಶ್ರೀ ಗುರುದತ್ತ ಬಂಟ್ವಾಳಕರ್ ಇವರ ಪತ್ನಿ. ಕಾರ್ಕಳದ ವೆಂಕಟರಮಣ ಮಹಿಳಾ ಕಾಲೇಜಿನ ಹಳೆ ವಿದ್ಯಾರ್ಥಿನಿ.