ಇತ್ತೀಚಿನ ಸುದ್ದಿ
ಕರ್ನಾಟಕ ಪವಿತ್ರ ಭೂಮಿ: ಸುತ್ತೂರಲ್ಲಿ ಬಸವಣ್ಣನ ನೆನಪಿಸಿ ಪೀಠಾಧಿಪತಿಗಳಿಗೆ ನಮಿಸಿದ ಗೃಹ ಸಚಿವ ಅಮಿತ್ ಶಾ
11/02/2024, 17:37
ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ಕರ್ನಾಟಕ ಪುಣ್ಯಭೂಮಿಯಲ್ಲಿ ಬಸವಣ್ಣರನ್ನ ನೆನೆಸುತ್ತೇನೆ.
ಬಸವಣ್ಣನವರ ಕೊಡುಗೆ, ಸೇವೆ ಸ್ಮರಿಸುವಂತದ್ದು. ಸುತ್ತೂರು ಮಠ 24 ಪೀಠಾಧಿಪತಿಗಳನ್ನ ಕಂಡಿದೆ.ಅವರೆಲ್ಲರಿಗೂ ನನ್ನ ಪ್ರಣಾಮಗಳು.
ಕರ್ನಾಟಕದಂತಹ ಪವಿತ್ರ ಭೂಮಿಯಲ್ಲಿ ನಿಂತು ಎಲ್ಲರಿಗೂ ನಮಸ್ಕರಿಸುತ್ತೇನೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ನಂಜನಗೂಡು ಸಮೀಪದ ಸುತ್ತೂರು ಮಠದ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸುತ್ತೂರು ಕ್ಷೇತ್ರದಲ್ಲಿ ಇವತ್ತಿನ ಮಠಾಧೀಶರವರೆಗೂ ಅಧ್ಬುತವಾದ ಸೇವೆ ಮಾಡಿದ್ದಾರೆ.ಅವರ ಸೇವೆಯನ್ನ ಬಿಜೆಪಿ ಗೌರವಿಸುತ್ತೆ.ನಾನು ನಿನ್ನೆಯೇ ಬರಬೇಕಿತ್ತು.ಒಂದು ದಿನ ಕ್ಯಾಬಿನೆಟ್ ವಿಸ್ತರಣೆಯಾಯಿತು. ಅದ್ರಿಂದ ಬರಲಾಗಿಲಿಲ್ಲ.ಜತೆಗೆ ಅಹಮದ್ ಕಾರ್ಯಕ್ರಮ ರದ್ದು ಮಾಡಿ ಸುತ್ತೂರು ಮಠಕ್ಕೆ ಬಂದೆ.
ಆಗ ಪತ್ರಕರ್ತರು ಅಹಮದ್ ಕಾರ್ಯಕ್ರಮ ಬಿಟ್ಟು ಮೈಸೂರಿಗೆ ಹೋಗ್ತಿದ್ದೀರಿ ಅಂತಾ ಕೇಳಿದ್ರು.
ನಾನು ಕಟ್ಟಡ ಉದ್ಘಾಟನೆಗೆ ಹೋಗುತ್ತಿದ್ದೆನೆ ಎನ್ನಲಿಲ್ಲ.
ನಾನು ಸುತ್ತೂರು ಸ್ವಾಮಿಜೀಯವರ ದರ್ಶನಕ್ಕೆ ಹೋಗುತ್ತುದ್ದೇನೆ ಅಂತಾ ಹೇಳಿ. ಬಂದೆ ಎಂದರು.
ಇಷ್ಟು ದಿನಗಳ ಸುತ್ತೂರು ಜಾತ್ರ ಮಹೋತ್ಸವದಲ್ಲಿ ಹಲವು ಕಾರ್ಯಕ್ರಮಗಳು ನಡೆದಿವೆ.ಜನರನ್ನ ಜಾಗೃತಗೊಳಿಸುವ ಕಾರ್ಯವಾಗಿದೆ.
ಈ ಮೂಲಕ ಸುತ್ತೂರು ಮಠ ಸಮಾಜ ಸೇವೆ ಸಲ್ಲಿಸಲಾಗುತ್ತಿದೆ.
350 ಕ್ಕೂ ಹೆಚ್ಚು ಸಂಸ್ಥೆಗಳು, 20 ಸಾವಿ ಕೆಲಸಗಾರರು, ಸಾವಿರ 1 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ.ಇದಲ್ಲವನ್ನೂ ಮೀರಿ ವಿಶೇಷ ಚೇತನರಿಗೆ, ಅಂಗವಿಕಲರಿಗೆ ಸಲ್ಲಿಸುತ್ತಿರುವ ಕೆಲಸ ಆದರ್ಶವಾಗಿದೆ.
ಅಂತಹ ಪುಣ್ಯದ ಕೆಲಸವನ್ನ ಸ್ವಾಮಿಜಿ ಮಾಡುತ್ತಿದ್ದಾರೆ.
ಅವರಿಗೆ ನನ್ನ ವಿಶೇಷ ಪ್ರಣಾಮಗಳು ಎಂದು ಅಮಿತ್ ಶಾ ನುಡಿದರು.ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠೆ ಆಗಿದೆ.
ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್‌ಗೆ ಸನ್ಮಾನವಾಗಿದೆ.
ಇದು ಸಂತಸದ ವಿಚಾರ.ಸುತ್ತೂರು ಶ್ರೀಗಳು ಅಯೋಧ್ಯೆಯಲ್ಲಿ ಸುತ್ತೂರು ಶಾಖಾ ಮಠ ಮಾಡುವ ಮನಸ್ಸು ಮಾಡಿದ್ದಾರೆ.ಅವರಿಗೆ ನಾನು ಪ್ರಣಾಮ ಸಲ್ಲಿಸುತ್ತೇನೆ.
ಪ್ರಧಾನಿ ಮೋದಿಯವರು ಅಯೋಧ್ಯೆಯಲ್ಲಿ ರಾಮಮಂದಿರ, ಕಾಶಿಯಲ್ಲಿ ಕಾಶಿ ಕಾರಿಡಾರ್, ಉಜ್ಜಯಿನಿಯಲ್ಲಿ ಕಾರಿಡಾರ್ ಸೇರಿ ಹಲವು ಕೊಡುಗೆ ಕೊಟ್ಟಿದ್ದಾರೆ.
ನರೇಂದ್ರ ಮೋದಿಯವರು ದೇಶದ ಸಂಸ್ಕೃತಿ ಬೆಳೆಸುವಲ್ಲಿ, ದೇಶ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.
ಈ ನಮ್ಮ ಕಾರ್ಯ ಎಂದಿನಂತೆ ಮುಂದುವರೆಯಲಿದೆ.
ಅಂತಿಮವಾಗಿ ಸುತ್ತೂರು ಮಠದ ಸೇವೆಯನ್ನ ನಾನು ಸ್ಮರಿಸುತ್ತೇವೆ.
ನಮ್ಮ ಅಭಿವೃದ್ಧಿ, ಸಂಸ್ಕೃತಿ ಪರಂಪರೆ ಉಳಿವಿಗಾಗಿ ಅದರಂತೆ ಚುನಾವಣೆಗೆ ಹೋಗುತ್ತಿವೆ ಎಂದು ಅವರು ನುಡಿದರು.