ಇತ್ತೀಚಿನ ಸುದ್ದಿ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿಯ ಸದಸ್ಯತ್ವ ನೋಂದಾಯಿಸಿಕೊಳ್ಳಲು ಅಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ಸೂಚನೆ
09/02/2025, 15:58

ಮಸ್ಕಿ(reporterkarnataka.com): ಪತ್ರಕರ್ತ ಬಂಗ್ಲೆ ಮಲ್ಲಿಕಾರ್ಜುನ ಅವರ ಸಾರಥ್ಯದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿಯ ಸದಸ್ಯತ್ವ ನೋಂದಾಯಿಸಲು ಅಥವಾ ನವೀಕರಿಸಿ ಐಡಿ ಕಾರ್ಡ್ ಪಡೆಯಲು ಧ್ವನಿಯ ಮಸ್ಕಿ ತಾಲೂಕು ಅಧ್ಯಕ್ಷರಾದ ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ಅವರನ್ನು ಸಂಪರ್ಕಿಸಲು ಕೋರಲಾಗಿದೆ.
ಸರ್ಕಾರ ಈಗಾಗಲೇ ಆನ್ಲೈನ್ ಮೂಲಕ ಗ್ರಾಮೀಣ ಭಾಗದ ಪತ್ರಕರ್ತರಿಗೆ ಬಸ್ ಪಾಸ್ ವ್ಯವಸ್ಥೆ ಮಾಡಿದೆ ಇನ್ನು ಹಲವಾರು ಸರಕಾರದಿಂದ ಯೋಜನೆಗಳನ್ನು ಪಡೆಯುವ ನಿಟ್ಟಿನಲ್ಲಿ ಸರ್ಕಾರ ಮಾಧ್ಯಮದಲ್ಲಿ ಕೆಲಸ ಮಾಡುವ ವರದಿಗಾರರಿಗೆ ಇಷ್ಟೊಂದು ನಿಬಂಧನೆಗಳನ್ನು ಹಾಕುವುದು ಸರಿಯಲ್ಲ. ಮುಂದಿನ ದಿನಗಳಲ್ಲಿ ಎಲ್ಲಾ ಪತ್ರಕರ್ತರಿಗೂ ಸೌಲಭ್ಯ ಸಿಗುವ ಹಾಗೆ ಸರ್ಕಾರದ ವಿರುದ್ಧ ದೊಡ್ಡ ಹೋರಾಟ ಮಾಡಲಾಗುವುದು. ಸರ್ಕಾರ ಮಹಿಳೆಯರಿಗೆ ಆಧಾರ್ ಕಾರ್ಡ್ ಮೂಲಕ ರಾಜ್ಯ ತಿರುಗಾಡಲು ವ್ಯವಸ್ಥೆ ಮಾಡಿದೆ. ಸಾಮಾಜಿಕ ಸೇವೆ ಮಾಡುವ ವರದಿಗಾರರಿಗೆ ಇಷ್ಟೊಂದು ನಿಬಂಧನೆಗಳು ಏಕೆ ಮುಖ್ಯಮಂತ್ರಿಗಳೇ ಎಂದು ಕಾನಿಪ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ಪ್ರಶ್ನಿಸಿದ್ದಾರೆ.
ಪತ್ರಕರ್ತರಿಗೆ ಐಡಿ ಕಾರ್ಡ್ ಮೂಲಕ ಜಿಲ್ಲೆಯಲ್ಲಿ ವರದಿ ಮಾಡಲು ಬಸ್ ಪಾಸ್ ನೀಡಲು ಅನುಮತಿ ಮಾಡಿಕೊಳ್ಳಬೇಕೆಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.