7:29 PM Wednesday14 - May 2025
ಬ್ರೇಕಿಂಗ್ ನ್ಯೂಸ್
Bangalore | ಗ್ರಾಹಕರ ದೂರು ನಿರ್ವಹಣೆಗೆ ಡಿಜಿಟಲ್ ಪೋರ್ಟಲ್: ಬೆಸ್ಕಾಂ ಎಂಡಿ ಡಾ.ಎನ್.… Bangalore | ಮೇ 15ರಂದು ಬಿಜೆಪಿಯಿಂದ ತಿರಂಗಾ ಯಾತ್ರೆ, ಪಕ್ಷದ ಚಿಹ್ನೆ ಪ್ರದರ್ಶನವಿಲ್ಲ Bangalore | ರಾಜ್ಯದ ಯೋಜನೆಗಳಿಗೆ ಕೇಂದ್ರ ಸರ್ಕಾರದ ಅನುದಾನ ಬಿಡುಗಡೆ: ಮಹತ್ವದ ಸಭೆ Bangalore | ಅಕ್ಟೋಬರ್ ನಲ್ಲಿ ಅಂಗನವಾಡಿ ಸುವರ್ಣ ಮಹೋತ್ಸವ ಆಚರಣೆ: ಸಚಿವೆ ಲಕ್ಷ್ಮೀ… ಮೋಸ್ಟ್‌ ವಾಂಟೆಡ್‌ ಉಗ್ರರನ್ನು ನಿರ್ನಾಮ ಮಾಡಿದ್ದೇವೆ: ಹುಬ್ಬಳ್ಳಿ ಎಬಿವಿಪಿ ಕಾರ್ಯಕ್ರಮದಲ್ಲಿ ಪ್ರಹ್ಲಾದ್ ಜೋಶಿ Chitradurga | ಕಂದಾಯ ಗ್ರಾಮ ರಚನೆ ಪ್ರಕ್ರಿಯೆ ಪೂರ್ಣಗೊಳಿಸಲು ಜೂನ್ 30ರ ಗಡುವು ಎಲ್ಲರನ್ನೂ ನಗಿಸುತ್ತಿದ್ದ ಆತ ಇಂದು ಎಲ್ಲರೂ ಅಳುವಂತೆ ಮಾಡಿದ: ನಗು ನಗುತಲೇ ಹೊರಟು… Bangalore | ಕ್ಯಾನ್ಸರ್ ತಡೆಗೆ ಪರಿಣಾಮಕಾರಿ ಕಾರ್ಯಕ್ರಮ ಅವಶ್ಯ: ಮಾಜಿ ಡಿಸಿಎಂ ಡಾ.… ಶ್ರೀನಗರದಲ್ಲಿ ಸಿಲುಕಿದ್ದ ರಾಜ್ಯದ 13 ಕೃಷಿ ವಿದ್ಯಾರ್ಥಿಗಳು ಸುರಕ್ಷಿತ ವಾಪಸ್: ಪ್ರಧಾನಿ ಸೂಚನೆ… Bangalore | ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಎನ್ಐಎ ತನಿಖೆಗೆ ಹಸ್ತಾಂತರ: ರಾಜ್ಯಪಾಲರ…

ಇತ್ತೀಚಿನ ಸುದ್ದಿ

ಕರ್ನಾಟಕದ ಜೋಡೆತ್ತು ಹೆಗಲಿಗೆ ಕಾಂಗ್ರೆಸ್ ರಥದ ಭಾರ: ಖರ್ಗೆ- ಸಿದ್ದು ಜೋಡಿ ಮಾಡುತ್ತಾ ಮ್ಯಾಜಿಕ್?

19/10/2022, 21:06

ಅಶೋಕ್ ಕಲ್ಲಡ್ಕ ಮಂಗಳೂರು
ಅನುಷ್ ಪಂಡಿತ್ ಮಂಗಳೂರು

info.reporterkarnataka@ gmail.com

ಎಲ್ಲರ ನಿರೀಕ್ಷೆಯಂತೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಆಯ್ಕೆಗೊಂಡಿದ್ದಾರೆ. ಎಐಸಿಸಿಗೆ ಎರಡನೇ ಕನ್ನಡಿಗ ಅಧ್ಯಕ್ಷ ಇವರಾಗಿದ್ದಾರೆ. ಒಂದು ಕಡೆ ಕಾಂಗ್ರೆಸ್ ಅಧ್ಯಕ್ಷ ಗಾದಿಗೆ ಖರ್ಗೆ ಆಯ್ಕೆಯಾದರೆ, ಇನ್ನೊಂದು ಕಡೆ ಕರ್ನಾಟಕದಲ್ಲಿ ಮುಂದಿನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರಿಗೆ ಮತ್ತೊಮ್ಮೆ ಪಟ್ಟಾಭಿಷೇಕ ಮಾಡಲು ಪಕ್ಷದ ಹೈಕಮಾಂಡ್ ಎಲ್ಲ ತಯಾರಿ ನಡೆಸಿದೆ.
ಮಲ್ಲಿಕಾರ್ಜುನ ಖರ್ಗೆ ಅವರು ಪ್ರಭಾವಿ ದಲಿತ ನಾಯಕನಾದರೆ, ಸಿದ್ದರಾಮಯ್ಯ ಅವರಿಗೆ ಅಹಿಂದ ಖ್ಯಾತಿ ಇದೆ. ಕಾಂಗ್ರೆಸ್ ಗೆ ಎಂಟ್ರಿ ಕೊಡುವ ಮೊದಲೇ ಸಿದ್ದರಾಮಯ್ಯ ಅವರು ಅಹಿಂದ ಸಂಘಟಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರಾಜ್ಯದಲ್ಲಿ ದೇವರಾಜ ಅರಸ್ ಬಳಿಕ ಕಾಂಗ್ರೆಸ್ ಕಂಡ ಓರ್ವ ಪ್ರಭಾವೀ ಮಾಸ್ ಲೀಡರ್ ಆಗಿ ಸಿದ್ದರಾಮಯ್ಯ ಹೊರ ಹೊಮ್ಮಿದ್ದಾರೆ. ಅರಸ್ ಬಳಿಕ 5 ವರ್ಷ ಅಧಿಕಾರಾವಧಿ ಪೂರೈಸಿದ ಹೆಗ್ಗಳಿಕೆ ಕೂಡ ಅವರಿಗಿದೆ. ಇತ್ತೀಚೆಗೆ ನಡೆದ ಸಿದ್ದರಾಮೋತ್ಸವದಲ್ಲಿ 10 ಲಕ್ಷಕ್ಕೂ ಹೆಚ್ಚು ಮಂದಿ ಸೇರಿರುವುದು ಅವರ ಜನಪ್ರಿಯತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಸಿದ್ದರಾಮೋತ್ಸವದಲ್ಲಿ ನೆರೆದ ಜನಸ್ತೋಮವನ್ನು ಕಂಡು ಸ್ವತಃ ರಾಹುಲ್ ಗಾಂಧಿ ಅವರೇ ದಂಗಾಗಿದ್ದರು. ಈ ಹಿನ್ನೆಲೆಯಲ್ಲೇ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಗೆಲ್ಲಿಸುವ ಹೊಣೆಯನ್ನು ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿದ್ದರಾಮಯ್ಯ ಅವರ, ಹೆಗಲಿಗೆ ವರ್ಗಾಯಿಸಿದೆ.
ಕರ್ನಾಟಕ ಒಂದು ಕಾಲದಲ್ಲಿ ಕಾಂಗ್ರೆಸ್ ನ ಭದ್ರಕೋಟೆ. 1977ರ ಚುನಾವಣೆಯಲ್ಲಿ ಇಡೀ ದೇಶವೇ ಇಂದಿರಾ ಗಾಂಧಿ ವಿರುದ್ಧ ಒಗ್ಗೂಡಿ ಕಾಂಗ್ರೆಸನ್ನು ಅಧಿಕಾರದಿಂದ ಕೆಳಗಿಳಿಸಿದರೂ ಕರ್ನಾಟಕದ ಜನತೆ ಮಾತ್ರ ಕಾಂಗ್ರೆಸ್ ಕೈಬಿಟ್ಟಿಲ್ಲ. ಬಳಿಕ ಇಂದಿರಾ ಅವರನ್ನು ಚಿಕ್ಕಮಗಳೂರು ಲೋಕಸಭೆ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಸಂಸತ್ತಿಗೆ ಮತ್ತೆ ಆರಿಸಿ ಕಳುಹಿಸಿದ್ದು ಕೂಡ ಕನ್ನಡಿಗರೇ ಆಗಿದ್ದಾರೆ. ಇದೇ ಕನ್ನಡಿಗರು ಮತ್ತೆ ಬಳ್ಳಾರಿ ಸಂಸತ್ ಕ್ಷೇತ್ರದಿಂದ ಇಂದಿರಾ ಅವರ ಸೊಸೆ ಸೋನಿಯಾ ಗಾಂಧಿ ಅವರನ್ನು ಗೆಲ್ಲಿಸಿದ್ದರು. ಹಾಗೆ 1982 ಮತ್ತು 1985ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋತು ಅಧಿಕಾರದಿಂದ ಹೊರಗುಳಿಯ ಬೇಕಾದ ಪ್ರಸಂಗ ಒದಗಿ ಬಂದಿರುವುದನ್ನು ಬಿಟ್ಟರೆ ರಾಜ್ಯದಲ್ಲಿ ಬಹುತೇಕ ಆಡಳಿತ ನಡೆಸಿರುವುದು ಕಾಂಗ್ರೆಸ್ ಪಕ್ಷವೇ ಆಗಿದೆ.

ಇದನ್ನೆಲ್ಲ ಗಮನದಲ್ಲಿಟ್ಟುಕೊಂಡೇ ಸೋನಿಯಾ ಗಾಂಧಿ ಅವರು ಸಿದ್ದು ಮತ್ತು ಖರ್ಗೆ ಅಸ್ತ್ರವನ್ನು ಕೈಗೆತ್ತಿಕೊಂಡಿದೆ. ಪಕ್ಷ ಸಂಘಟಿಸುವ ಜವಾಬ್ದಾರಿಯನ್ನು ಖರ್ಗೆ ಅವರಿಗೆ ನೀಡಿದರೆ, ಉತ್ತಮ ಆಡಳಿತದ ಹೊಣೆಯನ್ನು ಸಿದ್ದರಾಮಯ್ಯ ಅವರಿಗೆ ವಹಿಸಿದೆ.5 ವರ್ಷಗಳ ಆಡಳಿತದಲ್ಲಿ ಯಾವುದೇ ಭ್ರಷ್ಟಾಚಾರ, ಹಗರಣದ ಆರೋಪ ಸಿದ್ದರಾಮಯ್ಯ ಅವರ ಮೇಲಿಲ್ಲ. ಹಗರಣದ ಒಂದು ಸಣ್ಣ ವಾಸನೆ ಇರುತ್ತಿದ್ದರೂ ಕೇಂದ್ರ ಸರಕಾರ ಸಿದ್ದರಾಮಯ್ಯ ಅವರನ್ನು ಸುಮ್ಮನಿರಲು ಬಿಡುತ್ತಿರಲಿಲ್ಲ. ಇದೆಲ್ಲ ಕಾಂಗ್ರೆಸ್ ಗೆ ಪ್ಲಸ್ ಆಗಿದೆ.

ಹಾಗಾಗಿ ಮುಂಬರುವ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ದೇಶದುದ್ದಗಲಕ್ಕೂ ಈ ಜೋಡೆತ್ತುಗಳನ್ನು ಬಳಸುವುದು ಸ್ಪಷ್ಟವಾಗಿದೆ. ಸಿದ್ದರಾಮಯ್ಯ ಅವರನ್ನು ಆಂಧ್ರಪ್ರದೇಶ, ತಮಿಳುನಾಡು ಸಭೆಗಳಲ್ಲಿ ಈಗಾಗಲೇ ಬಳಸಲಾಗಿದೆ. ಮುಂದಿನ ದಿನಗಳಲ್ಲಿ ಯಾವೆಲ್ಲ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆಯೋ ಅಲ್ಲೆಲ್ಲ ಖರ್ಗೆ- ಸಿದ್ದು ಅವರನ್ನು ಪ್ರಚಾರಕ್ಕೆ ಕಾಂಗ್ರೆಸ್ ಉಪಯೋಗಿಸಲಿದೆ.

ಇತ್ತೀಚಿನ ಸುದ್ದಿ

ಜಾಹೀರಾತು