ಇತ್ತೀಚಿನ ಸುದ್ದಿ
ಕಾರ್ಕಳದಿಂದಲೇ ಪಕ್ಷೇತರನಾಗಿ ಚುನಾವಣೆ ಸ್ಪರ್ಧಿಸುವೆ: ಪ್ರಮೋದ್ ಮುತಾಲಿಕ್ ಪುನರುಚ್ಚಾರ
24/01/2023, 11:54

ಕಾರ್ಕಳ(reporterkarnataka.com): ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ನಾನು ಕಾರ್ಕಳದಿಂದಲೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತಿದ್ದೇನೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಘೋಷಣೆ ಮಾಡಿದ್ದಾರೆ.
ಅವರು ಕಾರ್ಕಳದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನನಗೆ ಬಿಜೆಪಿ ಹಾಗೂ ಅದರ ಸಿದ್ದಾಂತದ ಬಗ್ಗೆ ವಿರೋಧವಿಲ್ಲ. ಪ್ರಧಾನಿ ಮೋದಿ ಹಾಗೂ ಯೋಗಿಯ ಮೇಲೆ ನನಗೆ ಅಪಾರ ನಂಬಿಕೆಯಿದೆ. ಆದರೆ ಬಿಜೆಪಿಯ ರಾಜ್ಯ ನಾಯಕರುಗಳ ವಿರುದ್ಧ ನನ್ನ ಅಸಮಾಧಾನವಿದೆ ಎಂದಿದ್ದಾರೆ.