12:00 AM Friday4 - July 2025
ಬ್ರೇಕಿಂಗ್ ನ್ಯೂಸ್
ಚಿಕ್ಕಮಗಳೂರು: ಶಾಲೆಗೆ ರಜೆ; ಕೆರೆಯಲ್ಲಿ ಈಜಲು ಹೋದ ಬಾಲಕ ದಾರುಣ ಸಾವು ನಾಪತ್ತೆಯಾಗಿದ್ದ ಕೊಡಗಿನ ಫಾರೆಸ್ಟ್ ಗಾರ್ಡ್ ಶವವಾಗಿ ಪತ್ತೆ: ಸಾವಿನ ಸುತ್ತ ಅನುಮಾನದ ಹುತ್ತ ಭೂ ಸ್ವಾಧೀನ; ಕಾನೂನು ತೊಡಕು ನಿವಾರಿಸಿ ರೈತರ ಸಭೆ: ಮುಖ್ಯಮಂತ್ರಿ ಸಿದ್ದರಾಮಯ್ಯ Virajpete | ಎರಡು ಮಕ್ಕಳ ತಾಯಿಯೊಂದಿಗೆ ಲಿವಿಂಗ್ ರಿಲೇಶನ್ ಶಿಪ್: ಯುವಕ ಆತ್ಮಹತ್ಯೆಗೆ… ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ದಿನ ದೂರವಿಲ್ಲ: ಬೀದರ್ ನಲ್ಲಿ ಸಚಿವೆ ಲಕ್ಷ್ಮೀ… ಕಡೂರು: 6 ದಿನಗಳ ಹುಡುಕಾಟದ ನಂತರವೂ ಸಿಗದ ಫಾರೆಸ್ಟ್ ಗಾರ್ಡ್ ಶರತ್‌ ಸುಳಿವು ಸೋರುತ್ತಿದೆ ಸೂರು; ಕೊಠಡಿ ತುಂಬಾ ನೀರು: ರಾಷ್ಟ್ರಕವಿ ಕುವೆಂಪು ಓದಿದೆ ಶಾಲೆಯ ಕೇಳುವವರೇ… ಮಲೆನಾಡಲ್ಲಿ ಮುಂದುವರಿದ ಮಳೆ: ಶೃಂಗೇರಿಯ ಗಾಂಧಿ ಮೈದಾನದ ರಸ್ತೆಗೆ ನುಗ್ಗಿ ನೆರೆ ನೀರು;… ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಪೈಪೋಟಿಯಿಲ್ಲ: ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ Accident | ಸುರತ್ಕಲ್ ಬಳಿ ಎರಡು ಖಾಸಗಿ ಬಸ್ಸುಗಳು ಮುಖಾಮುಖಿ ಡಿಕ್ಕಿ: 28…

ಇತ್ತೀಚಿನ ಸುದ್ದಿ

ಕಾರ್ಕಳ ಯುವತಿಯ ಅತ್ಯಾಚಾರ ಹಾಗೂ ಡ್ರಗ್ಸ್ ಪ್ರಕರಣ: ಬಂಧಿತ ಆರೋಪಿಗಳ ಸಂಖ್ಯೆ 5ಕ್ಕೇರಿಕೆ

30/08/2024, 10:31

ಕಾರ್ಕಳ(reporterkarnataka.com): ಯುವತಿಯ ಅತ್ಯಾಚಾರ ಹಾಗೂ ಮಾದಕ ವಸ್ತುಗಳ ಪ್ರಕರಣ ಸಂಬಂಧಿಸಿದಂತೆ ಕಾರ್ಕಳ ಪೋಲೀಸರು ಮತ್ತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಬಂಧಿತರ ಸಂಖ್ಯೆ 5ಕ್ಕೇರಿದೆ.
ಆಂಧ್ರಪ್ರದೇಶದ ಕಡಪ ಜಿಲ್ಲೆಯ ಗೋಚಿಂದ ಪಲ್ಲಿಯ ಗಿರಿರಾಜು ಜಗಾದಾಭಿ(31) ಹಾಗೂ ಕಾಪು ಶಂಕರಪುರದ ಜಾನ್ ನೊರೊನ್ಹಾ (30 ) ಮತ್ತಿಬ್ಬರು ಬಂಧಿತ ಆರೋಪಿಗಳು.
ಅತ್ಯಾಚಾರ ಆರೋಪಿ  ಬಂಗ್ಲೆಗುಡ್ಡೆಯ ಅಲ್ತಾಫ್ (34) ಮದ್ಯ ಪೂರೈಕೆ ಮಾಡಿದ  ರಂಗನ ಪಲ್ಕೆಯ ಸಾವಿವೋ ರಿಚರ್ಡ್‌ ಕ್ವಾಡ್ರಸ್(35), ಡ್ರಗ್ ಪೂರೈಕೆ ಮಾಡಿದ ಕಾರ್ಕಳ ಕೋರ್ಟ್ ರಸ್ತೆಯ  ಆರೋಪಿ ಅಭಯ್ (23) ಎಂಬವರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದರು. ಇದೀಗ ಒಟ್ಟು 5 ಜನರನ್ನು ಬಂಧಿಸಲಾಗಿದ್ದು, 4 ಮಂದಿ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಮದ್ಯ ಪೂರೈಕೆ ಮಾಡಿದ ರಂಗನ ಪಲ್ಕೆಯ ಸಾವಿವೋ ರಿಚರ್ಡ್‌ ಕ್ವಾಡ್ರಸ್ ಅವನನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.
ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಬುಧವಾರ ಕಾರ್ಕಳದ ಜೆಎಂಎಫ್ ಸಿ ನ್ಯಾಯಾಲಯದ ಮುಂದೆ ಸಂತ್ರಸ್ತ ಯುವತಿಯನ್ನು ಕಾರ್ಕಳ ಪೊಲೀಸರು ಹಾಜರು ಪಡಿಸಿದ್ದರು. ಸಿಆರ್ ಪಿಸಿ 164 ನಿಯಮದಂತೆ ಸಂತ್ರಸ್ತೆ ಹೇಳಿಕೆ ದಾಖಲಾಗಿದೆ.  ತನಿಖಾಧಿಕಾರಿ ಮಂಜಪ್ಪ ನೇತೃತ್ವದಲ್ಲಿ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಕಳೆದ ಶುಕ್ರವಾರ ಕಾರ್ಕಳ ಕುಕ್ಕುಂದೂರು ಗ್ರಾಮದ ಯುವತಿ ಯ ಮೇಲೆ  ಮಾದಕ ವಸ್ತು ನೀಡಿ ಅತ್ಯಾಚಾರ   ಗೈಯ್ಯಲಾಗಿತ್ತು.
ಕಾರ್ಕಳ ನಗರ ಠಾಣೆಯಲ್ಲಿ ಅ ಕ್ರ146/2024 ಕಲಂ  8(C), 22(b) NDPS ಹಾಗೂ  ಕಲಂ 111, 3(5)
ಬಿ.ಎನ್‌.ಎಸ್‌-2023ರಂತೆ ಪ್ರಕರಣ ದಾಖಲಾಗಿತ್ತು.
*ಆಂಧ್ರದ ಲಿಂಕ್ :* ಮಾದಕ ವಸ್ತುಗಳ ಮಾರಾಟಕ್ಕೆ ಸಂಬಂಧಿಸಿದಂತೆ ಕಾರ್ಕಳ ಕೋರ್ಟ್ ರಸ್ತೆಯ ಅಭಯ್ ಗೆ ಆಂಧ್ರಪ್ರದೇಶದ ಕಡಪ ಜಿಲ್ಲೆಯ ಗೋಚಿಂದ ಪಲ್ಲಿಯ ಗಿರಿರಾಜು ಜಗಾದಾಭಿ(31) ಕಾಪು ಶಂಕರಪುರದ ಜಾನ್ ನೊರೊನ್ಹಾ  (30 )  ಪೂರೈಕೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಇತ್ತೀಚಿನ ಸುದ್ದಿ

ಜಾಹೀರಾತು