10:53 AM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಕಾರ್ಕಳ: ಬೆಂಕಿ ಅನಾಹುತ; ಕಂಬಳ ಕೋಣ ಥೊನ್ಸೆ ಮತ್ತು ಅಪ್ಪು ಬಲಿ

31/05/2025, 19:15

ಕಾರ್ಕಳ(reporterkarnataka.com): ಕಾರ್ಕಳ ತಾಲೂಕಿನ ಬೇಲಾಡಿ ಬಾವ ಕೃಷಿಕ ಅಶೋಕ್ ಶೆಟ್ಟಿಯವರ ಕನಹಲಗೆಯ ಎರಡು ಹೆಸರಾಂತ ಕಂಬಳ ಕೋಣಗಳು – ಥೊನ್ಸೆ ಮತ್ತು ಅಪ್ಪು – ಶುಕ್ರವಾರ ರಾತ್ರಿ ಸಂಭವಿಸಿದ ಭೀಕರ ಬೆಂಕಿಗೆ ಬಲಿಯಾಗಿವೆ.


ಈ ಕೋಣಗಳು ಸ್ಥಳೀಯ ಹಾಗೂ ಜಿಲ್ಲಾಮಟ್ಟದ ಕಂಬಳಗಳಲ್ಲಿ ಭಾರಿ ಬಹುಮಾನಗಳನ್ನು ಗೆದ್ದಿದ್ದವು.
ಘಟನೆ ರಾತ್ರಿ ಸಂಭವಿಸಿದ್ದು, ಹತ್ತಿರವಿದ್ದ ಹಟ್ಟಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದು, ತಕ್ಷಣವೇ ಅದರ ಬಿಳವಣಿಗೆ ತಡೆಗಟ್ಟಲಾಗಲಿಲ್ಲ. ಹಟ್ಟಿಗೆ ಸೇರ್ಪಡೆಯಾಗಿ ಇದ್ದ ಭತ್ತದ ಬಣವೆಗೆ ಬೆಂಕಿ ಬಿದ್ದ ಕಾರಣ, ಉರಿಯುವ ವ್ಯಾಪ್ತಿ ಹೆಚ್ಚಾಗಿ ಕಟ್ಟಿಹಾಕಿದ್ದ ಕೋಣಗಳ ಸಹಿತವು ಬೆಂಕಿಗೆ ಆಹುತಿಯಾಗಿವೆ.
ಸ್ಥಳೀಯರ ಪ್ರಕಾರ, ಬೆಂಕಿಯ ತೀವ್ರತೆಯಿಂದಾಗಿ ಥೊನ್ಸೆ ಮತ್ತು ಅಪ್ಪು ಸ್ಥಳದಲ್ಲೇ ಸಂಪೂರ್ಣವಾಗಿ ಸುಟ್ಟುಹೋಗಿವೆ. ಈ ಕಂಬಳ ಕೋಣಗಳನ್ನು ಸಾಕಲು ಮಾಲೀಕರಾದ ಅಶೋಕ್ ಶೆಟ್ಟಿ ವರ್ಷಗಳಿಂದ ಶ್ರಮಪಟ್ಟು ಬೆಳೆಸಿದ್ದರು. ಈ ಕಣ್ಮಣಿಗಳ ಸಾವಿಗೆ ಹಳ್ಳಿ ಜನತೆಯಲ್ಲಿ ಆಘಾತ ಮತ್ತು ದುಃಖದ ಛಾಯೆ ಹರಡಿದೆ.
“ಥೊನ್ಸೆ ಮತ್ತು ಅಪ್ಪು ಮಾತ್ರ ಕೋಣಗಳು ಅಲ್ಲ. ಅವು ನಮ್ಮ ಕುಟುಂಬದ ಸದಸ್ಯರಂತಾಗಿದ್ದವು. ಇಂತಹದು ಆಗಲಿದೆ ಅಂತ ಕನಸೂ ಕಂಡಿರಲಿಲ್ಲ,” ಎಂದು ದುಃಖಭರಿತ ಕಂಠದಲ್ಲಿ ಮಾಲಿಕ ಅಶೋಕ್ ಶೆಟ್ಟಿ ಹೇಳಿದರು.

ಇತ್ತೀಚಿನ ಸುದ್ದಿ

ಜಾಹೀರಾತು