ಇತ್ತೀಚಿನ ಸುದ್ದಿ
ಕಾರ್ಕಳದಿಂದ ಬಿಜೆಪಿ ಸ್ಪರ್ಧಿಸದಂತೆ ಚಿಕ್ಕಮಗಳೂರು ಶ್ರೀರಾಮ ಸೇನೆ ಕಮಲ ನಾಯಕರಿಗೆ ಆಗ್ರಹ
04/02/2023, 12:18

ಚಿಕ್ಕಮಗಳೂರು(reporterkarnataka.com): ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾರ್ಕಳದಿಂದ ಸ್ಪರ್ಧಿಸುವ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಕಾರ್ಕಳದಲ್ಲಿ ಅಭ್ಯರ್ಥಿ ಹಾಕದಂತೆ ಚಿಕ್ಕಮಗಳೂರು ಶ್ರೀರಾಮ ಸೇನೆ ಆಗ್ರಹಿಸಿದೆ.
ಬಿಜೆಪಿ ಪ್ರಮುಖ ನಾಯಕರಿಗೆ ಚಿಕ್ಕಮಗಳೂರು ಶ್ರೀರಾಮಸೇನೆಯು ಈ ಆಗ್ರಹವನ್ನು ಮಾಡಿದೆ.
ಕಾರ್ಕಳದಲ್ಲಿ ಬಿಜೆಪಿಯು ಅಭ್ಯರ್ಥಿ ಹಾಕಿದ್ದಲ್ಲಿ ಚಿಕ್ಕಮಗಳೂರಿನಲ್ಲಿಯೂ ಶ್ರೀರಾಮಸೇನೆ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ಎಚ್ಚರಿಕೆ ನೀಡಿದೆ. ಇದನ್ನು ಹಿಂದೂ ಸಂಘಟನೆಗಳು ಗಂಭೀರ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ಶ್ರೀರಾಮಸೇನೆ ಎಚ್ಚರಿಸಿದೆ.
ಬಿಜೆಪಿ ಬೆಳವಣಿಗೆಗೆ ಪ್ರಮೋದ್ ಮುತಾಲಿಕ್ ಮಹತ್ತರ ಪಾತ್ರವಿರುವುದು ಜಗಜ್ಜಾಹಿರು.ಉತ್ತರ ಕರ್ನಾಟಕ, ಕರಾವಳಿಯಲ್ಲಿ ಬಿಜೆಪಿ ನೆಲೆಯೂರಲು ಮುತಾಲಿಕ್ ಕಾರಣಿಕರ್ತರು ಎಂದು ಚಿಕ್ಕಮಗಳೂರು ಶ್ರೀರಾಮಸೇನೆ ರಾಷ್ಟ್ರ ಹಾಗೂ ರಾಜ್ಯ ಬಿಜೆಪಿ ನಾಯಕರಿಗೆ ತಿಳಿಸಿದೆ.