5:05 PM Friday21 - November 2025
ಬ್ರೇಕಿಂಗ್ ನ್ಯೂಸ್
ದ್ವಿಚಕ್ರ ವಾಹನದಲ್ಲಿ ಮಕ್ಕಳಿಗೂ ಹೆಲ್ಮೆಟ್‌ ಕಡ್ಡಾಯ: ರಾಜ್ಯ ಸರಕಾರಕ್ಕೆ ಹೈಕೋರ್ಟ್ ಆದೇಶ ಡಿ. 6ರಂದು ಹಾಸನಕ್ಕೆ ಸಿಎಂ ಭೇಟಿ: ನೂತನ ಕಂದಾಯ ಗ್ರಾಮಗಳ ನಿವಾಸಿಗಳಿಗೆ ಹಕ್ಕುಪತ್ರ… Bangalore | ನಾಯಿ ದಾಳಿಯಿಂದ ಸಾವನ್ನಪ್ಪಿದವರಿಗೆ ರಾಜ್ಯ ಸರ್ಕಾರ 5 ಲಕ್ಷ ರೂ.… ಕಲಾ ಗ್ರಾಮದಲ್ಲಿ ಸಾಲುಮರದ ತಿಮ್ಮಕ್ಕ ಜತೆಗೆ ಸಾಹಿತಿ ಯು.ಆರ್. ಅನಂತಮೂರ್ತಿ, ಕವಿ ಡಾ.… ಬಿಜೆಪಿಯಿಂದ ಭೀಮ ಸ್ಮರಣೆ ಕಾರ್ಯಕ್ರಮ; ಕಾಂಗ್ರೆಸ್‌ ಮಾಡಿದ ಅನ್ಯಾಯದ ಕುರಿತು ಜಾಗೃತಿ: ಪ್ರತಿಪಕ್ಷ… ಭಾರತದ ಅತ್ಯಂತ ವಿಶ್ವಾಸಾರ್ಹ ಹೂಡಿಕೆಯ ತಾಣ ಕರ್ನಾಟಕ: ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರು: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮದಿನಾಚರಣೆ ಚಾಲಕನ ಅಜಾಗರೂಕತೆ: ವಿದ್ಯಾರ್ಥಿಗಳಿಂದ ತುಂಬಿದ್ದ ಕೇರಳ ಮೂಲದ ಪ್ರವಾಸಿ ಬಸ್ ಪಲ್ಟಿ ಕೊಡಗಿನ ಪ್ರಮುಖ ಹಬ್ಬ ಪುತ್ತರಿಗೆ ದಿನಾಂಕ ನಿಗದಿ: ಪಾಡಿ ಶ್ರೀ ಇಗ್ಗುತ್ತಪ್ಪ ಸನ್ನಿಧಿಯಲ್ಲಿ… ಕೊಡಗಿನಲ್ಲಿ ಹೆಚ್ಚಾಗುತ್ತಿರುವ ಬೀದಿ ನಾಯಿ ಹಾವಳಿ ತಡೆಗೆ ಜಿಲ್ಲಾಡಳಿತ ಕ್ರಮ: ಶ್ವಾನಗಳ ಸ್ಥಳಾಂತರಕ್ಕಾಗಿ…

ಇತ್ತೀಚಿನ ಸುದ್ದಿ

ಖರ್ಗೆ, ಮುನಿಯಪ್ಪರ ಸೋಲಿಸಿದ್ದು ಯಾರು?: ಮಾಜಿ ಸಿಎಂ ಸಿದ್ದರಾಮಯ್ಯರಿಗೆ ಮಾಜಿ ಶಾಸಕ ವೆಂಕಟಶಿವಾರೆಡ್ಡಿ ಸವಾಲು

17/03/2022, 18:16

ಶಬ್ಬೀರ್ ಅಹ್ಮದ್ ಶ್ರೀನಿವಾಸಪುರ ಕೋಲಾರ

info.reporterkarnataka@gmail.com

ಮಾಜಿ ಸಿಎಂ ಸಿದ್ದರಾಮಯ್ಯರಿಗೆ ರಾಜಕೀಯ ಸಿದ್ಧಾಂತಗಳು , ಜೀವನದ ಮೌಲ್ಯಗಳಿದ್ದರೆ ಜೆಡಿಎಸ್ ಪಕ್ಷದ ಬಗ್ಗೆ ಮಾತನಾಡುವುದನ್ನು ಬಿಟ್ಟು ಕಾಂಗ್ರೆಸ್ ಪಕ್ಷದ ಹುಳುಕುಗಳನ್ನು ಸರಿಮಾಡಿಕೊಂಡು ತಮ್ಮ ಸ್ವಕ್ಷೇತ್ರದಲ್ಲಿ ಸ್ಪರ್ಧಿಸಿ ಶಾಸಕರಾಗಲಿ ಎಂದು ಮಾಜಿ ಶಾಸಕ , ಜೆಡಿಎಸ್ ಜಿಲ್ಲಾಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ ಸವಾಲು ಹಾಕಿದರು. 

ನಗರದ ಜೆಡಿಎಸ್ ತಾಲೂಕು ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಇತ್ತೀಚೆಗೆ ಕೋಲಾರಕ್ಕೆ ಭೇಟಿ ನೀಡಿದ್ದ ವೇಳೆ ತಾವು ಮಾತನಾಡಿ , ಜೆಡಿಎಸ್ ಪಕ್ಷವನ್ನು ಬಿಜೆಪಿ ಪಕ್ಷದ ಬಿ ಟೀಮ್ ಎಂದು ಹೇಳಿದ್ದೀರಿ. ಇದು ಹಾಸ್ಯಾಸ್ಪದ ಹಾಗೂ ರಾಜಕೀಯವಾಗಿ ತಾವು ಉಳಿದುಕೊಳ್ಳಲು ನೀಡಿರುವ ಹತಾಶೆಯ ಹೇಳಿಕೆ ಎಂದು ಟೀಕಿಸಿದರು. 

ಕಳೆದ ಲೋಕಸಭೆ ಚುನಾವಣೆ ಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ.ಎಚ್. ಮುನಿಯಪ್ಪರನ್ನು ಸೋಲಿಸಿದ್ದು , ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಲು ಷಡ್ಯಂತ್ರ ರೂಪಿಸಿದ್ದು ಯಾರು ಎನ್ನುವುದು ಎಲ್ಲರಿಗೂ ಗೊತ್ತಿದೆ. ಹೀಗಾಗಿ ಬಿಜೆಪಿಯ ಬಿ ಟೀಮ್ ಯಾರು ಎನ್ನುವುದನ್ನು ರಸ್ತೆಯಲ್ಲಿ ಓಡಾಡುವ ಸಾಮಾನ್ಯ ಪ್ರಜೆಯೂ ಹೇಳುತ್ತಾರೆ ಎಂದು ತಿರುಗೇಟು ನೀಡಿದರು. 

ತಮ್ಮ ರಾಜಕೀಯ ಉಳಿವಿಗಾಗಿ ರಾಜ್ಯದಲ್ಲಿ ಕ್ಷೇತ್ರದ ಹುಡುಕಾಟ ನಡೆಸುತ್ತಿದ್ದೀರಿ . 5 ವರ್ಷ ಸಿಎಂ ಆಗಿಸಿದ್ದ ಕಾಂಗ್ರೆಸ್ ಪಕ್ಷಕ್ಕೆ ನೀವು ಕೊಟ್ಟಿರುವುದು ಏನು 2018 ರ ವಿಧಾನಸಭ ? ಚುನಾವಣೆಯಲ್ಲಿ 80 ಕ್ಕಿಂತ ಕಡಿಮೆ ಶಾಸಕರು , 2019 ರ ಲೋಕಸಭೆ ಚುನಾವಣೆಯಲ್ಲಿ ಒಬ್ಬ ಸಂಸದರನ್ನು ಗೆಲ್ಲಿಸಿಕೊಂಡಿದ್ದೀರಿ . 

ನಿಮ್ಮ ಸ್ವಕ್ಷೇತ್ರದಲ್ಲಿ 46 ಸಾವಿರಕ್ಕೂ ಅಧಿಕ ಮತಗಳಿಂದ ಸೋತು , ಬಾದಾಮಿಯಲ್ಲಿ ಹಾಗೋ ಹೀಗೋ ಗೆದ್ದಿದ್ದೀರಿ . ಇದೀಗ ಅಲ್ಲಿಯೂ ಚೀತೂ ಎನಿಸಿಕೊಂಡು ಹೊರಕ್ಕೆ ತಳ್ಳಲ್ಪಟ್ಟಿದ್ದೀರಿ ಎಂದು ಲೇವಡಿ ಮಾಡಿದರು . 

ನಮ್ಮನ್ನು ಬಿಜೆಪಿಯ ಬಿ ಟೀಮ್ ಎಂದು ಈಗ ಹುಚ್ಚರಂತೆ ಹೇಳುವ ನೀವು , 2018 ರ ಚುನಾವಣೆಯಲ್ಲಿ ನಮ್ಮ ನಾಯಕರ ಮನೆ ಬಾಗಿಲಿಗೆ ಬಂದು ಸರಕಾರ ರಚಿಸುವಂತೆ ಮನವಿ ಮಾಡಿ ಮಂತ್ರಿ ಮಂಡಲದಲ್ಲಿ ಭಾಗಿಯಾಗಿದ್ದು , ತಾವಲ್ಲವೇ ಎಂದು ಪ್ರಶ್ನಿಸಿದರು . 

ಒಂದು ರಾಷ್ಟ್ರೀಯ ಪಕ್ಷದ ಸಿಎಲ್ ಪಿ ನಾಯಕರು ಎನಿಸಿಕೊಂಡಿರುವ ನಿಮ್ಮದು ಇಷ್ಟೆಲ್ಲಾ ಕಥೆಗಳಿವೆ . ಆದರೂ ಜೆಡಿಎಸ್ ಪಕ್ಷದ ಶಾಸಕರಾಗಿ ಮುಂದುವರೆಯುತ್ತಿರುವ ಶ್ರೀನಿವಾಸಗೌಡರ ಮನೆಯಲ್ಲಿ 

ಕುಳಿತು ಅದೇ ಪಕ್ಷದ ವಿರುದ್ಧ ಮಾತನಾಡುತ್ತೀರಿ ಎಂದರೆ ನೀವೊಬ್ಬ ಅವಕಾಶವಾದಿ , ಬ್ಲಾಕ್‌ಮೇಲ್ ರಾಜಕಾರಣ ಮಾಡಿಕೊಂಡು ಬದುಕುತ್ತಿರುವುದು ಅರ್ಥವಾಗುತ್ತಿದೆ . 

ಇನ್ನಾದರೂ ಸ್ವಕ್ಷೇತ್ರದಲ್ಲಿ ಸ್ಪರ್ಧಿಸಿ ಶಾಸಕರಾಗಿ , ಇಲ್ಲದಿದ್ದರೆ ಗೌರವವಾಗಿ ರಾಜಕೀಯ ನಿವೃತ್ತಿ ಪಡೆಯಿರಿ ಎಂದು ಸಲಹೆ ನೀಡಿದರು . 

ನಾವೇ ಪವರ್‌ಫುಲ್ , ಸಿದ್ಧರಾಮಯ್ಯರನ್ನು ಕೋಲಾರಕ್ಕೆ ಕರೆತರಲು ಶಾಸಕರಾದ ಕೆ.ಆರ್.ರಮೇಶ್‌ ಕುಮಾರ್‌ , ಕೆ.ಶ್ರೀನಿವಾಸಗೌಡ ಮೋಸ್ಟ್ ವೆಲ್‌ಕಂ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿದೆ . ಸಿದ್ದರಾಮಯ್ಯರೇ ಅಲ್ಲ , ಯಾರೇ ಬರಲಿ . ಸಿದ್ದರಾಮಯ್ಯರಿಗಿಂತ ಹೆಚ್ಚು ಮತಗಳು ಗಳಿಸುವಷ್ಟು ಶಕ್ತಿ ನಮಗೂ ಇದೆ ಎಂದು ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು . 

ನಮ್ಮ ಸ್ವಕ್ಷೇತ್ರದಲ್ಲಿ ಸ್ಪರ್ಧಿಸುತ್ತೇವೆ ಎನ್ನುವುದೇ ಮುಖ್ಯ ಎಂದ ಅವರು , ಮುಂಬರುವ ಚುನಾವಣೆಯಲ್ಲಿ ನಾವೆ ಪವರ್‌ಫುಲ್‌ ಆಗುತ್ತೇವೆ . ನಮ್ಮದ ಪಕ್ಷದ್ದೇ ನಿರ್ಣಾಯಕ ಆಗುತ್ತದೆ . ಶ್ರೀನಿವಾಸಗೌಡರು ಸೇರಿದಂತೆ ಯಾರು ಬೇಕಾದರೂ ಕಾಂಗ್ರೆಸ್‌ಗೆ ಹೋಗಲಿ , ಈಗಾಗಲೇ ಪಂಚರಾಜ್ಯ ಚುನಾವಣೆ ಫಲಿತಾಂಶದಿಂದಲೇ ಪರಿಸ್ಥಿತಿ ಅರ್ಥವಾಗಿದ್ದು , ಮುಂದೆ ಜೆಡಿಎಸ್‌ಗೆ ಒಳ್ಳೆಯ ಭವಿಷ್ಯ ಇದೆ ಎಂದು ತಿಳಿಸಿದರು . 

ತಾಲೂಕು ಅಧ್ಯಕ್ಷೆ ಕುರ್ಕಿ ರಾಜೇಶ್ವರಿ ಮಾತನಾಡಿ , ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲಲು ಸ್ವಂತ ಶಕ್ತಿ ಇಲ್ಲದ ಕೆಲವರು ಸಿದ್ದರಾಮಯ್ಯ ಕೋಲಾರಕ್ಕೆ ಬರುವಂತೆ ಆಹ್ವಾನ ನೀಡುತ್ತಿದ್ದಾರೆ . ಆ ಮೂಲಕ ತಮ್ಮ ಗೆಲುವಿಗೆ ಸಲೀಸು ಮಾರ್ಗ ಹುಡುಕಿಕೊ೦ಡು ಹೊರಟಿದ್ದಾರೆಂದು ಲೇವಡಿ ಮಾಡಿದರು .

ಸುದ್ದಿಗೋಷ್ಠಿಯಲ್ಲಿ ಜಿಪಂ ಮಾಜಿ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ , ಮಾಜಿ ಸದಸ್ಯ ಕಿತ್ತಂಡೂರು ನಂಜುಂಡಪ್ಪ , ತಾಪಂ ಮಾಜಿ ಸದಸ್ಯ ಗೋಪಾಲಗೌಡ , ನಗರಸಭೆ ಸದಸ್ಯ ವಡಗೂರು ರಾಕೇಶ್ , ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್ ಮತ್ತಿತರರಿದ್ದರು .

ಇತ್ತೀಚಿನ ಸುದ್ದಿ

ಜಾಹೀರಾತು