6:48 PM Monday21 - April 2025
ಬ್ರೇಕಿಂಗ್ ನ್ಯೂಸ್
DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ…

ಇತ್ತೀಚಿನ ಸುದ್ದಿ

ಕರ್ಫ್ಯೂ ಹೆಸರಿನಲ್ಲಿ ಹೊಟ್ಟೆಗೆ ಹೊಡೆಯಬೇಡಿ ಸ್ವಾಮಿ: ಕೊರೊನಾಕ್ಕಿಂತಲೂ ಹಸಿವು ಭಯಾನಕ ನೆನಪಿರಲಿ

08/01/2022, 09:43

ಸಾಂದರ್ಭಿಕ ಚಿತ್ರ
ಮಂಗಳೂರು(reporterkarnataka.com): ರಾಜ್ಯದಲ್ಲಿ ಒಮಿಕ್ರೋನ್ ಹಾವಳಿ ಹೆಚ್ಚಾಗುತ್ತಿರುದರ ಪರಿಣಾಮ ಮುನ್ನೆಚ್ಚರಿಕಾ ಕ್ರಮವಾಗಿ ಶುಕ್ರವಾರ ರಾತ್ರಿಯಿಂದ ನೈಟ್ ಕರ್ಫ್ಯೂ ಮಂಗಳೂರಿನಲ್ಲಿಯೂ ಜಾರಿಗೊಳಿಸಲಾಗಿದ್ದು, ಹೊಟ್ಟೆಪಾಡಿಗಾಗಿ ದುಡಿಯುವ ಮಂದಿಗೆ ಯಾವುದೇ ತೊಂದರೆ ಕೊಡದಂತೆ ಸಾರ್ವಜನಿಕರು ಪೊಲೀಸ್ ಇಲಾಖೆಗೆ ವಿನಂತಿಸಿದ್ದಾರೆ.

ಕೆಲವು ಕಡೆಗಳಲ್ಲಿ ಅನಗತ್ಯ ವಾಹನಗಳ ಓಡಾಟ ತಪಾಸಣೆ ಕಂಡು ಬಂತು. ಇದರ ಜತೆಯಲ್ಲೇ.ಹೋಟೆಲ್ ಗಳಲ್ಲಿ ರಾತ್ರಿ ಪಾಳಿಯಲ್ಲಿ ಪಾರ್ಸೆಲ್ ವ್ಯವಸ್ಥೆ ಮಾಡುವ ಹೋಟೆಲ್ ಸಿಬ್ಬಂದಿಗಳನ್ನು ಪೊಲೀಸರು ತಡೆದು, ನೈಟ್ ಕರ್ಫ್ಯೂ ವಿಧಿಸಲಾಗಿದೆ ಎಂದು ಗದರಿಸಲಾಗಿದೆ. ಒಂದೇ ಬೈಕ್ ನಲ್ಲಿ ಇದ್ದ ಇಬ್ಬರಲ್ಲಿ,( ಸಹ ಸವಾರನ್ನು ಡ್ರಾಪ್ ನೀಡಲು ಬಂದಿದ್ದು) ಒಬ್ಬನನ್ನು ನಡೆದಿಕೊಂಡು  ಹೋಗು ಎಂದು ಕಾನ್ಸ್ಟೇಬಲ್ ಎಂದು ಬೆದರಿಸಿದ್ದು, ಕೊನೆಗೂ. ಎ.ಎಸ್.ಐ ಯಲ್ಲಿ ಯುವಕರು ಬೇಡಿಕೊಂಡಿದ್ದು, ಕೊನೆಗೆ ಬಿಟ್ಟು ಬರಲು ಅನುಮತಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಅದಲ್ಲದೆ ನಾಳೆಯಿಂದ ಬೇಗಬರುವಂತೆ ತಾಕೀತು ಮಾಡಿದ್ದಾರೆ.ಪೊಲೀಸ್ ಕಾನ್ಸ್ಟೇಬಲ್ ಗಳೇ ನಿಮ್ಮಲ್ಲಿ ಕಿಂಚಿತ್ತೂ ಸೌಜನ್ಯತೆ ಇಲ್ಲವೇ? ಹೊಟ್ಟೆ ಪಾಡಿಗಾಗಿ ಕೆಲಸಕ್ಕೆ ತೆರಳುವವರ ಮೇಲೆ ನಿಮ್ಮ ದರ್ಪ ತೋರಿಸುವುದಲ್ಲ. ಎಲ್ಲರೂ ಅನಾವಶ್ಯಕವಾಗಿ ತಿರುಗಾಟ ಮಾಡುತ್ತಾರೆ ಎಂಬುದನ್ನು ಬಿಡಿ. ಹಾಗಿದ್ದರೆ ಹೋಟೆಲ್ ಗಳಿಗೆ ಸರಿಯಾದ ಸಮಯ ವಿಧಿಸಿ. ನಿಮ್ಮ ಹೊಟ್ಟೆಯನ್ನು ಕೂಡ ಅಂತಹದೇ ಹೋಟೆಲ್ ಗಳ ಪಾರ್ಸೆಲ್ ತಿಂಡಿ ತುಂಬಿಸುತ್ತದೆ ಎಂಬುದನ್ನು ಮರೆಯಬೇಡಿ… ಝೋಮಟೋ, ಸ್ವಿಗ್ಗಿ ಗಳ ಪಾರ್ಸೆಲ್ ವಿತರಕನ್ನು ಕಳ್ಳರಂತೆ ಟ್ರೀಟ್ ಮಾಡಬೇಡಿ. ಈ ಬಗ್ಗೆ ಪೊಲೀಸ್ ಕಮಿಷನರ್, ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿ.

ಇತ್ತೀಚಿನ ಸುದ್ದಿ

ಜಾಹೀರಾತು