ಇತ್ತೀಚಿನ ಸುದ್ದಿ
ಕರಾವಳಿಯ ಹಲವೆಡೆ ಭಾರೀ ಮಳೆ: ಕೋಟೆಕಾರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ದಾಖಲೆ ಪ್ರಮಾಣದ 100.5 ಮಿಮೀ. ವರ್ಷಧಾರೆ
22/03/2024, 11:37

ಮಂಗಳೂರು(reporterkarnataka.com): ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಾದ್ಯಂತ ಇಂದು ಮುಂಜಾನೆಯಿಂದ ಮೋಡ ಕವಿದ ವಾತಾವರಣ ನೆಲೆಸಿದ್ದು, ಕೋಟೆಕಾರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ದಾಖಲೆ ಪ್ರಮಾಣದ 100.5 ಮಿಮೀ. ಮಳೆಯಾಗಿದೆ.
ಉಳ್ಳಾಲ ಸಮೀಪದ ಕೋಟೆಕಾರಿನಲ್ಲಿ ಭಾರೀ ಪ್ರಮಾಣದ ವರ್ಷಧಾರೆಯಾಗಿದೆ. ಮಂಗಳೂರು- ಕಾಸರಗೋಡು ಗಡಿ ಪ್ರದೇಶವಾದ ತಲಪಾಡಿಯಲ್ಲಿ 58 ಮಿಮೀ. ಮಳೆ ಸುರಿದಿದೆ. ಕಿನ್ಯಾದಲ್ಲಿ 46.5 ಮಿಮೀ. ಮಳೆಯಾಗಿದೆ.
ಉಡುಪಿ ಜಿಲ್ಲೆಯ ಮಲ್ಲಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 54.5 ಮಿಮೀ. ಮಳೆ ಬಿದ್ದಿದೆ. ಉಳಿಯರಗೋಳಿಯಲ್ಲಿ 22.0 ಮಿಮೀ. ಮಳೆಯಾಗಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಹಲವೆಡೆ ಇಂದು ರಾತ್ರಿ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ. ಬೀದರ್, ಚಿಕ್ಕಬಳ್ಳಾಪುರ, ಮಂಡ್ಯ ಹಾಗೂ ಹಾಸನದಲ್ಲಿಯೂ ಸಾಧಾರಣ ಮಳೆಯಾಗಿದೆ.