ಇತ್ತೀಚಿನ ಸುದ್ದಿ
ನೋಡು ನೋಡುತ್ತಿದ್ದಂತೆ ಕೆಲವೇ ಕ್ಷಣಗಳಲ್ಲಿ ಕುಸಿದು ಬಿದ್ದ ಮನೆಯಂಗಳದ ಬಾವಿ!: ಕಾರ್ಕಳದ ನೆಲ್ಲಿಕಟ್ಟೆಯಲ್ಲಿ ನಡೆದ ಘಟನೆ
28/06/2024, 17:40
ಕಾರ್ಕಳ(reporterkarnataka.com): ಮನೆ ಮಂದಿ ನೋಡು ನೋಡುತ್ತಿದ್ದಂತೆ ಮನೆಯಂಗಳದ ಬಾವಿಯೊಂದು ಕೆಲವೇ ಕ್ಷಣಗಳಲ್ಲಿ ಕುಸಿದು ಬಿದ್ದ ಘಟನೆ ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ನೆಲ್ಲಿಕಟ್ಟೆ ಎಂಬಲ್ಲಿ ನಡೆದಿದೆ.
ವಸಂತಿ ಶೆಟ್ಟಿ ಎಂಬವರ ಮನೆಯಂಗಳದಲ್ಲಿ ಬಾವಿಯು ಗುರುವಾರ ಕುಸಿತ ಕಂಡಿದೆ.
ಸುಮಾರು 58 ಅಡಿ ಆಳವಾಗಿರುವ ಬಾವಿಯನ್ಮು ಸುಮಾರು 10 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿತ್ತು. ಸುಮಾರು ಮೂರು ವರ್ಷಗಳ ಹಿಂದೆ ಈ ಬಾವಿ ನಿರ್ಮಾಣ ಮಾಡಲಾಗಿತ್ತು. ರಾತ್ರಿ ವೇಳೆಗೆ ಬಾವಿಯನ್ನು ಮಣ್ಣು ಮುಚ್ಚಿಸಲಾಗಿದೆ. ಬಾವಿಯ ದಂಡೆ ಕುಸಿತವಾಗಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಗಲಿನಲ್ಲಿ ಬಾವಿ ಕುಸಿತ ವಾದ ಕಾರಣ ಮನೆಯವರ ಗಮನಕ್ಕೆ ಬಂದಿದೆ. ಬಾವಿಯ ಹತ್ತು ಅಡಿ ದೂರದಲ್ಲಿ ಮನೆಯಿದೆ. ಅದರ ಪಕ್ಕದಲ್ಲಿ ಅಂಗನವಾಡಿ ಕೇಂದ್ರ ವಿದೆ.