5:01 AM Sunday8 - February 2026
ಬ್ರೇಕಿಂಗ್ ನ್ಯೂಸ್
ಎಚ್ ಡಿ ಕೋಟೆ | ಕಂಚಮಳ್ಳಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮೇಲೆ ಭಾರೀ… Kodagu | ಕುಶಾಲನಗರ: ರಸ್ತೆಯಲ್ಲೇ ಧಗಧಗನೆ ಹೊತ್ತಿ ಉರಿದ ಕ್ರೇಟಾ ಕಾರು; ಅದೃಷ್ಟವಶಾತ್… ಇ-ಸ್ವತ್ತು ತಂತ್ರಾಂಶದಲ್ಲಿ ಬದಲಾವಣೆ ಮೂಲಕ ಸಾರ್ವಜನಿಕರಿಗೆ ತ್ವರಿತ ಸೇವೆಗೆ ಕ್ರಮ: ಗ್ರಾಮೀಣಾಭಿವೃದ್ಧಿ ಸಚಿವ… ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕೃಷ್ಣಾ ನದಿ ನೀರು; ಶೀಘ್ರವೇ ಆಂಧ್ರ ಸಿಎಂ ಜತೆ… ರಾಜ್ಯ ಸರ್ಕಾರ ಎಲ್ಲ ರೈತರ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಲಿ: ಮಾಜಿ… NDPS ಕಾಯ್ದೆ: ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡಿದ್ದ 5.71 ಕೋಟಿ ಮೌಲ್ಯದ ಮಾದಕ ವಸ್ತುಗಳು… Mangaluru | ಮೆಟ್ರೋ ದರ ಏರಿಕೆ ಬಗ್ಗೆ ಕೇಂದ್ರ ನಮ್ಮ ಅಭಿಪ್ರಾಯ ಕೇಳಿಲ್ಲ:… ಕಾಂಗ್ರೆಸ್‌ನ ಲೂಟಿ ನೋಡಿ ಗಾಂಧೀಜಿಯ ಕೈಗೆ ಕೋಲು ಬಂದಿದೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ರಾಜ್ಯ ಆಹಾರ ಆಯೋಗದ ಅಧ್ಯಕ್ಷರ ತಂಡದಿಂದ ವಿವಿಧೆಡೆ ದಿಢೀರ್ ಭೇಟಿ: ಪರಿಶೀಲನೆ *ಕರಾವಳಿವರೆಗೆ ವಂದೇ ಭಾರತ್ ವಿಸ್ತರಿಸುವಂತೆ ರೈಲ್ವೆ ಸಚಿವರಿಗೆ ಸಂಸದ ಶ್ರೀನಿವಾಸ ಪೂಜಾರಿ ಮನವಿ*

ಇತ್ತೀಚಿನ ಸುದ್ದಿ

ಕಾರ್ಕಳ: 4 ತಾಸುಗಳಲ್ಲಿ ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ದಾಪ್ಯ ವೇತನವನ್ನು ಮಂಜೂರು ಗೊಳಿಸಿದ  ಕಾರ್ಕಳ ತಹಶೀಲ್ದಾರ್

19/02/2024, 10:23

ಕಾರ್ಕಳ(reporterkarnataka.com): ಸರಕಾರದ ಸವಲತ್ತುಗಳನ್ನು ಪಡೆಯಲು ಸರಕಾರದ ಕಚೇರಿಗಳಲ್ಲಿ  ಪಲಾನುಭವಿಗಳು  ಅಲೆಯಬೇಕಾದ ಸ್ಥಿತಿ ಇರುವ ಇಂದಿನ  ಕಾಲದಲ್ಲಿ ಫಲಾನುಭವಿಯನ್ನು ಗುರುತಿಸಿ ಕೇವಲ 4 ಘಂಟೆಗಳಲ್ಲಿ ಪರಿಹಾರ ಸೂಚಿಸಿದ ವಿದ್ಯಮಾನವು ಕಾರ್ಕಳ ಜನತೆಯ ಮೆಚ್ಚುಗೆ ಗೆ ಪಾತ್ರವಾಗಿದೆ.
ಆಧಾರ್ ಕಾರ್ಡ್ ಮೊಬೈಲ್ ನಂಬರ್  ಲಿಂಕ್ ಮಾಡಲು ಬಂದ ವೃದ್ದೆ ಯೋರ್ವರ ಸಮಸ್ಯೆಯನ್ನು ಆಲಿಸಿ  ವೃದ್ದಾಪ್ಯ ವೇತನವನ್ನು ಕೇವಲ 4 ಗಂಟೆಗಳಲ್ಲಿ ಕಲ್ಪಿಸಿ ಕೊಟ್ಟಿದ್ದಾರೆ.
ಕಾರ್ಕಳ ತಹಶೀಲ್ದಾರ್ ನರಸಪ್ಪ ಕಚೇರಿಗೆ ಆಗಮಿಸುವ ವೇಳೆ 70ರ ಹರೆಯದ ಶೀಲಾ ಮಲೆಕುಡಿಯ ಅವರ ಸಮಸ್ಯೆ ಆಲಿಸಿದರು.
ಶೀಲಾ ಅವರು ಕಾರ್ಕಳ ತಾಲೂಕಿನ ಕೆರುವಾಶೆಯ ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಒಬ್ಬಂಟಿ ಯಾಗಿದ್ದು, ಸರಕಾರದ ಯಾವುದೇ ಯೋಜನೆಯ ಫಲಾನುಭವಿಯಲ್ಲ. ರೇಷನ್ ಕಾರ್ಡ್ ಇದ್ದರೂ ಗೃಹಲಕ್ಷ್ಮಿ ಸೇರಿದಂತೆ ಯಾವ ಸವಲತ್ತುಗಳು ಸಿಕ್ಕಿಲ್ಲ. ಸವಲತ್ತುಗಳಿಂದ ವಂಚಿತರಾಗಿದ್ದಾರೆ. ಇದನ್ನರಿತ ತಹಶೀಲ್ದಾರ್ ನರಸಪ್ಪ ತಕ್ಷಣಕ್ಕೆ  ಅಜೆಕಾರಿನ ನಾಡ ಕಚೇರಿ ಉಪತಹಶೀಲ್ದಾರ್ ವೃದ್ದಾಪ್ಯ ವೇತನವನ್ನು ಮಂಜೂರು ಮಾಡಬೇಕೆಂದು ಅಜೆಕಾರು ಉಪತಹಶಿಲ್ದಾರ್ ಗೆ  ಆದೇಶ ಹೊರಡಿಸಿದರು.
ಉಪ ತಹಶೀಲ್ದಾರ್ ನೇತೃತ್ವ:  ಅಜೆಕಾರು ನಾಡಕಚೇರಿಯ ಉಪ ತಹಶೀಲ್ದಾರ್ ನಮಿತಾ ಬಿ. ಅರ್ಜಿಯನ್ನು ಸಲ್ಲಿಸಿ ಅವರ ನೇತೃತ್ವದಲ್ಲಿ  ಶಿರ್ಲಾಲು ಕರ್ನಾಟಕ ಬ್ಯಾಂಕ್ ಶಾಖೆಯಲ್ಲಿ ಫಲಾನುಭವಿ ಶೀಲಾವರ ಖಾತೆ ತೆರೆಸಿ  ಅಜೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಡಾ. ಅನುಷಾ ಅವರಿಂದ ವಯಸ್ಸಿನ ದೃಢಪ್ರತಿ ಪಡೆದು
ಕೆರುವಾಶೆ ಗ್ರಾಮ ಆಡಳಿತಾಧಿಕಾರಿ ರವಿಚಂದ್ರ ಪಾಟೀಲ್  ಕಂದಾಯ ನಿರೀಕ್ಷ  ಮೊಹಮ್ಮದ್ ರಿಯಾಜ್  ಸಂಬಂಧಿತ ಎಲ್ಲಾ ವರದಿಗಳನ್ನು ತರಿಸಿ  ಉಪ ತಹಶೀಲ್ದಾರ್  ತಾಲೂಕು ತಹಶೀಲ್ದಾರ್ ಗೆ ಹಸ್ತಾಂತರಿಸಿದರು.
ಕಾರ್ಕಳ ತಹಶೀಲ್ದಾರ್ ನರಸಪ್ಪ ಅವರು ಸಂಧ್ಯಾ ಸುರಕ್ಷಾ ಯೋಜನೆಯನ್ನು ಮಂಜೂರು ಗೊಳಿಸಿ  ಮಂಜೂರಾತಿ ಪತ್ರವನ್ನು ಶೀಲಾರವರಿಗೆ   ಹಸ್ತಾಂತರಿಸಿದರು.
ಶೀಲಾರವರ ಸುಮಾರು 22 ವರ್ಷಗಳಿಂದ ಖಾತೆ ಬದಲಾವಣೆಯಾಗಿರದ  ಪಹಣಿಯನ್ನು ಬದಲಾಯಿಸುವ ಬಗ್ಗೆ ಭರವಸೆ ನೀಡಿ,ಸಂಬಂಧಿತ ಇಲಾಖೆಗೆ ಮಾಹಿತಿ ನೀಡಿದರು.
ನರಸಪ್ಪ ತಹಶೀಲ್ದಾರ್  ರಾಯಚೂರು ಜಿಲ್ಲೆಯ ಸಿಂಧನೂರು ತಾಲುಕಿನ ಸಾಲಗುಂದ ಗ್ರಾಮದವರು.
ಕಾರ್ಕಳ ತಹಶೀಲ್ದಾರ್ 13 ವರ್ಷಗಳ ಕಾಲ ಶಿಕ್ಷಕರಾಗಿ, ಬಳಿಕ ಕೆಎಎಸ್ ಪರೀಕ್ಷೆ ಬರೆದು ಲಿಂಗಸೂರು ಪುರಸಭೆಯ ಮುಖ್ಯಾಧಿಕಾರಿ ಯಾಗಿ ಸೇವೆ ಸಲ್ಲಿಸಿ ಬಳಿಕ ಕಾರ್ಕಳ ತಹಶಿಲ್ದಾರ್ ಆಗಿ ನಿಯೋಜನೆ ಗೊಂಡವರು.
ಸೇವೆ ಒದಗಿಸುವಲ್ಲಿ ಕರ್ನಾಟಕ ಬ್ಯಾಂಕ್  ಸಿಬ್ಬಂದಿಗಳಾದ ಗಾಯತ್ರಿ ಶೆಣೈ,  ಮುಖ್ಯ ಪ್ರಬಂಧಕ ಉದಯ ಶಂಕರ್ , ಅಜೆಕಾರು ನೆಮ್ಮದಿ ಕೇಂದ್ರದ ಸುರೇಂದ್ರ ನಾಯ್ಕ್  ,ಭೋಜೆಗೌಡ  ಸಹಕಾರ ನೀಡಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು