9:39 AM Monday15 - December 2025
ಬ್ರೇಕಿಂಗ್ ನ್ಯೂಸ್
ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ ತಪ್ಪು ಕಲ್ಪನೆಯಿಂದ ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಮಾಜಿ ಸಿಎಂ… ಸಂವಿಧಾನ ಪ್ರತಿ ಹಿಡಿದು ಈಗದನ್ನೇ ಗಾಳಿಗೆ ತೂರುತ್ತಿದ್ದಾರೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಮಹಿಳೆಯರು ಅನ್ಯಾಯದ ವಿರುದ್ದ ಕಿತ್ತೂರು ಚೆನ್ನಮ್ಮ, ದುರ್ಗಾದೇವಿ ಆಗಬೇಕು: ಮಾಜಿ ಸಿಎಂ ಬಸವರಾಜ… ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ… ಮಡಿಕೇರಿಯಲ್ಲಿ ಆಂಧ್ರದ ನಕಲಿ ಪೊಲೀಸರ ಓಡಾಟ: ಪ್ರಕರಣ ದಾಖಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆಗೆ ಕ್ರಮ: ವಿಧಾನ ಸಭೆಯಲ್ಲಿ ಸಚಿವ ಬಿ.ಎಸ್.ಸುರೇಶ್ ದ್ವೇಷ ಭಾಷಣಕ್ಕೆ 10 ವರ್ಷ ಜೈಲು ಶಾಸನ ಕಾಂಗ್ರೆಸ್ ನ ಕ್ರೂರ ಸಂಪ್ರದಾಯದ… ಚಿಕ್ಕಮಗಳೂರಿನಲ್ಲಿ ಪಿಪಿಪಿ ಮಾದರಿಯಲ್ಲಿ ಸ್ಪೈಸ್ ಪಾರ್ಕ್ ಅಭಿವೃದ್ಧಿ: ವಿಧಾನ ಪರಿಷತ್ ನಲ್ಲಿ ಸರಕಾರ…

ಇತ್ತೀಚಿನ ಸುದ್ದಿ

ಕನ್ಯಾನದಲ್ಲಿ ಬಂಟ್ವಾಳ ಪ್ರಜಾಧ್ವನಿ 9ನೇ ದಿನದ ಯಾತ್ರೆ: ಅಪಪ್ರಚಾರದ ಮೂಲಕ ನನ್ನ ಸೋಲಿಸಲಾಯಿತು: ಮಾಜಿ ಸಚಿವ ರೈ

20/03/2023, 09:56

ವಿಟ್ಲ(reporterkarnataka.com):
ಬಂಟ್ವಾಳ ಪ್ರಜಾಧ್ವನಿ ಯಾತ್ರೆ 9ನೇ ದಿನದ ಸಮಾರೋಪ ಕನ್ಯಾನದ ಪೇಟೆಯಲ್ಲಿ ನಡೆಯಿತು.

ಸಾಲೆತ್ತೂರು, ಕರೋಪಾಡಿ, ಕನ್ಯಾನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಚಿವ ಬಿ. ರಮಾನಾಥ ರೈ ಅವರು, ಕಾಂಗ್ರೆಸ್ ಪಕ್ಷವು ನೀಡಿದ ಭರವಸೆಗಳಲ್ಲಿ ಶೇ 98 ರಷ್ಟನ್ನು ಪೂರೈಸಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಸ್ವಿಸ್ ಬ್ಯಾಂಕಿನ ಹಣವನ್ನು ಪ್ರತಿಯೊಬ್ಬರ ಖಾತೆಗೆ ಜಮೆ ಮಾಡುತ್ತೇವೆ ಎಂದರು. ಆದರೆ, ಜಮೆಯೇ ಆಗಲಿಲ್ಲ. ಅಡುಗೆ ಸಿಲಿಂಡರ್, ಪೆಟ್ರೋಲ್ ದರ ಇಳಿಕೆ ಮಾಡುವ ಭರವಸೆ ಕೂಡ ಹುಸಿ ಆಯಿತು ಎಂದು ನುಡಿದರು.
ಕ್ಷೇತ್ರದಲ್ಲಿ ಶಕ್ತಿ ಮೀರಿ ಕೆಲಸ ಮಾಡಿದ್ದರೂ, ಅಪಪ್ರಚಾರ ಮಾಡಿ ಕಳೆದ ಚುನಾವಣೆಯಲ್ಲಿ ನನ್ನನ್ನು ಸೋಲಿಸಲಾಯಿತು. ಇಲ್ಲ ಸಲ್ಲದ ಆರೋಪ ಮಾಡಿ, ಮತದಾರರ ದಿಕ್ಕು ತಪ್ಪಿಸಿದರು. ಪ್ರಾಮಾಣಿಕ ಸುದೀರ್ಘ ರಾಜಕೀಯ ಮಾಡಿದ್ದು, ತಾನು ಪಕ್ಷಕ್ಕೂ ಯಾವುದೇ ಕಳಂಕ ತಂದಿಲ್ಲ ಎಂದು ರೈ ಅವರು ಹೇಳಿದರು.
2017ರಲ್ಲಿ ನಾನು ಬಂಟ್ವಾಳ ಒಳಚರಂಡಿ ಯೋಜನೆಗೆ 56 ಕೋಟಿ ರೂಪಾಯಿ ಅನುದಾನ ತಂದಿದ್ದೇನೆ. ಈ ಕಾಮಗಾರಿಯನ್ನು ಬಿಜೆಪಿ ಸರಕಾರ ಮುಂದುವರಿಸಿಲ್ಲ. ಬೆಂಜನಪದವು ಕ್ರೀಡಾಂಗಣ, ಪಂಜೆ ಮಂಗೇಶರಾಯ ಭವನ, ಪಡೀಲು ಜಿಲ್ಲಾಧಿಕಾರಿ ಕಚೇರಿ ಕಾಮಗಾರಿಗಳನ್ನು ಬಿಜೆಪಿ ಸರಕಾರ ಪೂರ್ತಿ ಮಾಡಿಲ್ಲ. ಈಗ ಪಡಿತರ ಚೀಟಿ ಸಿಗುವುದಿಲ್ಲ. ಬಡವರಿಗೆ ಮನೆಗಳು ಬರುವುದಿಲ್ಲ. ಶವ ಸಂಸ್ಕಾರಕ್ಕೂ ಹಣ ಬರುವುದಿಲ್ಲ ಎಂದರು.
ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಮಾತನಾಡಿ, ರಮಾನಾಥ ರೈ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಅವಧಿಯಲ್ಲಿ ಸುಳ್ಯ, ಕಡಬ ಮತ್ತಿತರ ಪ್ರದೇಶಗಳಿಗೆ ಕೋಟಿ ಕೋಟಿ ಅನುದಾನ ಒದಗಿಸಿದ್ದರು. ಅವರ ಸಾಧನೆಯ ಮುಂದೆ ಬಿಜೆಪಿ ಸಾಧನೆ ಶೂನ್ಯ ಎಂದರು.
ಯಾತ್ರೆ ಸಂಚಾಲಕ ಪಿಯೂಸ್ ಎಲ್.ರಾಡ್ರಿಗಸ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಂ.ಎಸ್.ಮಹಮ್ಮದ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪಂಚಾಯಿತಿ ರಾಜ್ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು, ಕೆಪಿಸಿಸಿ ಮಹಿಳಾ ಕಾರ್ಯದರ್ಶಿ ಮಲ್ಲಿಕಾ ಪಕ್ಕಳ, ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹಾಜಿ ಎ.ಉಸ್ಮಾನ್ ಕರೋಪಾಡಿ, ಮಾಜಿ ಉಪಾಧ್ಯಕ್ಷ ಅಬ್ಬಾಸ್ ಅಲಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಬಂಟ್ವಾಳ ಬ್ಲಾಕ್ ಅಧ್ಯಕ್ಷ ಬೇಬಿ ಕುಂದರ್, ಕನ್ಯಾನ ಗ್ರಾ.ಪಂ.ಅಧ್ಯಕ್ಷ ಕೆ.ಪಿ. ಅಬ್ದುಲ್‌ ರಹಿಮಾನ್, ಕರೋಪಾಡಿ ಗ್ರಾಪಂ ಅಧ್ಯಕ್ಷ ಅನ್ವರ್ ಕರೋಪಾಡಿ, ಸಾಲೆತ್ತೂರು ಗ್ರಾಪಂ ಅಧ್ಯಕ್ಷ ಹಸೈನಾರ್, ಪೆರುವಾಯಿ ಗ್ರಾಪಂ ಅಧ್ಯಕ್ಷ ಬಾಲಕೃಷ್ಣ ಪೂಜಾರಿ, ವಿಟ್ಠಲ ಶೆಟ್ಟಿ, ವಲಯ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್‌ ಮಜೀದ್, ಯೂತ್ ಅಧ್ಯಕ್ಷ ಇಬ್ರಾಹಿಂ ನವಾಝ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಂತಿ ಪೂಜಾರಿ, ಕೊಳ್ನಾಡು ವಲಯಾಧ್ಯಕ್ಷ ಪವಿತ್ರ ಪೂಂಜ, ವಿಟ್ಲಪಡ್ನೂರು ವಲಯ ಕಾಂಗ್ರೆಸ್ ಅಧ್ಯಕ್ಷ ಸಂದೇಶ್ ಶೆಟ್ಟಿ ಬಿಕ್ನಾಜೆ, ಪ್ರಮುಖರಾದ ಐಡಾ ಸುರೇಶ್, ಲೋಲಾಕ್ಷಿ ಶೆಟ್ಟಿ, ಪದ್ಮನಾಭ ರೈ, ಹರ್ಷದ್ ಸರವು, ಚಿತ್ತರಂಜನ್ ಶೆಟ್ಟಿ, ಮೋಹನದಾಸ್, ಬ್ಲಾಕ್ ಕಾರ್ಯದರ್ಶಿ ಪ್ರಶಾಂತ್ ಪಕ್ಕಳ, ಸಿದ್ಧಿಕ್ ಸರವು, ಸಾಲೆತ್ತೂರು, ಕನ್ಯಾನ, ಕರೋಪಾಡಿ ಗ್ರಾಪಂ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು