ಇತ್ತೀಚಿನ ಸುದ್ದಿ
ಕನ್ಯಾಕುಮಾರಿ ಟು ಕಾಶ್ಮೀರ: ಕಾಂಗ್ರೆಸ್ ‘ಭಾರತ್ ಜೋಡೋ’ ಯಾತ್ರೆಗೆ ರಾಹುಲ್ ಗಾಂಧಿ ಚಾಲನೆ
08/09/2022, 19:06
ಚೆನ್ನೈ(reporterkarnataka.com): ಮುಂಬರುವ ಸಂಸತ್ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪಕ್ಷದ ಬೃಹತ್ ಜನಸಂಪರ್ಕ ಕಾರ್ಯಕ್ರಮ ‘ಭಾರತ್ ಜೋಡೋ ಯಾತ್ರೆ’ಗೆ ಗುರುವಾರ ಕನ್ಯಾಕುಮಾರಿಯಿಂದ ಚಾಲನೆ ನೀಡಿದರು. 150 ದಿನಗಳಲ್ಲಿ 3,500 ಕಿ.ಮೀ ದೂರ ಪಾದಯಾತ್ರೆ ಸಾಗಲಿದೆ.
ಯಾತ್ರೆಯ ಇಂದಿನ ಪ್ರಮುಖ ಅಂಶಗಳು
*ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿರುವ ತಮ್ಮ ತಂದೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಸ್ಮಾರಕಕ್ಕೆ ಭೇಟಿ ನೀಡುವ ಮೂಲಕ ರಾಹುಲ್ ಗಾಂಧಿ ತಮ್ಮ ಯಾತ್ರೆ ಪ್ರಾರಂಭಿಸಿದರು.
* ನಂತರ ಟ್ವೀಟ್ ಮಾಡಿದ ರಾಹುಲ್ ಗಾಂಧಿ, ದ್ವೇಷ ಮತ್ತು ವಿಭಜನೆಯ ರಾಜಕೀಯದಿಂದ ನಾನು ನನ್ನ ತಂದೆಯನ್ನು ಕಳೆದುಕೊಂಡೆ. ಆದರೆ ಇದಕ್ಕಾಗಿ ನಾನು ನನ್ನ ಪ್ರೀತಿಯ ದೇಶವನ್ನು ಕಳೆದುಕೊಳ್ಳುವುದಿಲ್ಲ. ಪ್ರೀತಿ ದ್ವೇಷವನ್ನು ಜಯಿಸುತ್ತದೆ, ಭರವಸೆಯು ಭಯವನ್ನು ಸೋಲಿಸುತ್ತದೆ, ನಾವು ಒಟ್ಟಾಗಿ ಜಯಿಸುತ್ತೇವೆ ಎಂದು ಹೇಳಿದರು.
* ಬಿಜೆಪಿ ಆಡಳಿತದಡಿಯಲ್ಲಿ ಸಾಮಾಜಿಕ ಧ್ರುವೀಕರಣ ಮತ್ತು ರಾಜಕೀಯ ಕೇಂದ್ರೀಕರಣವನ್ನು ಆರೋಪಿಸಿದ ರಾಹುಲ್ ಗಾಂಧಿ, ‘ಭಾರತ್ ಜೋಡೋ ಯಾತ್ರೆ’ ದೇಶವನ್ನು ಒಗ್ಗೂಡಿಸಲು ತನಗೆ ತಪಸ್ಸು ಇದ್ದಂತೆ ಎಂದು ಈ ಹಿಂದೆ ಹೇಳಿದರು
* ಯಾವುದೇ ರಾಜಕೀಯ ದೃಷ್ಟಿಕೋನವನ್ನು ನಿರಾಕರಿಸಿದರು. ಯಾತ್ರೆಯು ದೇಶವನ್ನು ಒಂದುಗೂಡಿಸುವ ಉದ್ದೇಶವನ್ನು ಹೊಂದಿದೆ ಎಂದು ಹೇಳಿದ್ದಾರೆ.