ಇತ್ತೀಚಿನ ಸುದ್ದಿ
ಕಣ್ಣೀರು ಬರುವ ದೃಶ್ಯ: ಜನರ ಕಣ್ಣೆದುರೇ ಭದ್ರೆಯ ಒಡಲಲ್ಲಿ ಕೊಚ್ಚಿ ಹೋದ ರಾಸು; ಹೆಬ್ಬಾಳೆ ಸೇತುವೆ ಮೇಲೆ ನಡೆದ ದುರ್ಘಟನೆ
18/07/2024, 18:37
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಈ ದೃಶ್ಯ ನೋಡುದ್ರೆ ನಿಮ್ಮ ಕಣ್ಣಲ್ಲಿ ನೀರು ಬರುತ್ತೆ. ಮಲೆನಾಡ ರಣ ಮಳೆಯ ಭೀಕರತೆಗೆ ಈ ದೃಶ್ಯವೇ ಸಾಕ್ಷಿ.ಭದ್ರಾ ನದಿಯ ಹೆಬ್ಬಾಳೆ ಸೇತುವೆ ಮೇಲಿಂದ ದನವೊಂದು ನೀರಿನಲ್ಲಿ
ಕೊಚ್ಚಿ ಹೋಗಿದೆ.
ಮಲೆನಾಡಲ್ಲಿ ಮಳೆಯ ರುದ್ರನರ್ತನಕ್ಕೆ ಜನರ ಜೊತೆ ಜಾನುವಾರುಗಳಿಗೆ ಬಹಳಷ್ಟು ತೊಂದರೆಯಾಗಿದೆ.
ಭದ್ರಾ ನದಿಯ ಹೆಬ್ಬಾಳೆ ಸೇತುವೆ ಮೇಲೆ ಒಂದು ದಡದಿಂದ ಮತ್ತೊಂದು ದಡಕ್ಕೆ ದನ ಹೋಗುವಾಗ ಈ ದುರಂತ ನಡೆದಿದೆ.
ದಡ ತುಸು ದೂರದಲ್ಲೇ ಇದ್ದಾಗ ದನ ನದಿಗೆ ಬಿದ್ದು ಕೊಚ್ಚಿ ಹೋಗಿದೆ. ಹೆಬ್ಬಾಳೆ ಸೇತುವೆ ಮೇಲೆ 2-3 ಅಡಿ ಎತ್ತರದಲ್ಲಿ ನೀರು ಹರಿಯುತ್ತಿದೆ. ಕಳಸ ತಾಲೂಕಿನಿಂದ ಹೊರನಾಡು ಸಂಪರ್ಕದ ಹೆಬ್ಬಾಳೆ ಸೇತುವೆ ಇದುವಾಗಿದೆ. ಜನರ ಕಣ್ಣೆದುರೇ ಭದ್ರೆಯ ಒಡಲಲ್ಲಿ ದನ ಕೊಚ್ಚಿ ಹೋಗಿದೆ.