6:22 PM Thursday6 - March 2025
ಬ್ರೇಕಿಂಗ್ ನ್ಯೂಸ್
Womens Day | ಮಹಿಳಾಸ್ನೇಹಿ ಗ್ರಾಪಂ ಅಭಿಯಾನ, ಮಹಿಳಾ ಗ್ರಾಮಸಭೆ: ಮಾರ್ಚ್‌ 8… Protest | ಹಕ್ಕುಪತ್ರಕ್ಕಾಗಿ ಪಾದಯಾತ್ರೆ: ಗ್ರಾಮದ ನ್ಯಾಯಕ್ಕಾಗಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷನ ಏಕಾಂಗಿ… Budget Session | 26 ಲಕ್ಷ ನಕಲಿ ಕಾರ್ಡ್ ಗಳ ರದ್ದು: ಸದನದಲ್ಲಿ… Budget Session | ದೇವಾಲಯಗಳ ಅರ್ಚಕರು/ ನೌಕರರ ವೇತನ ತಾರತಮ್ಯ ಸರಿಪಡಿಸಲು ಸಮಿತಿ… Forest Minister | ವಾಯುಪಡೆ ಸ್ವಾಧೀನದ ಪೀಣ್ಯ, ಜಾರಕಬಂಡೆ ಅರಣ್ಯಭೂಮಿ ಮರುವಶಕ್ಕೆ: ಸಚಿವ… Budget Session | ರಾಜ್ಯದ ಗ್ರಾಮ ಆಡಳಿತ ಅಧಿಕಾರಿಗಳಿಗೆ ಕರ್ತವ್ಯ ನಿರ್ವಹಿಸಲು ಎಲ್ಲ… Yakshagana | ಯಕ್ಷಗಾನ ಪ್ರದರ್ಶನಕ್ಕೆ ಧ್ವನಿವರ್ಧಕ ಅನುಮತಿ ಸರಳಗೊಳಿಸಲಾಗುವುದು: ಡಿಸಿಎಂ ಡಿ.ಕೆ.ಶಿವಕುಮಾರ್ Budget Session | ಅನಿಲ ವಿತರಣೆ ಯೋಜನೆಯನ್ನು ಅನುಷ್ಠಾನಗೊಳಿಸಲು ಅಗತ್ಯ ಕ್ರಮ: ಸಚಿವ… Budget Session | ಸ್ಮಾರ್ಟ್ ಸಿಟಿ ಯೋಜನೆ ಅವ್ಯವಹಾರಗಳ ಬಗ್ಗೆ ಅಗತ್ಯ ಕ್ರಮ:… Legislative Assembly | ಕರಾವಳಿ ಕರ್ನಾಟಕದ ಪ್ರವಾಸೋದ್ಯಮಕ್ಕೆ ವಿಶೇಷ ಒತ್ತು: ಬೈಂದೂರು ಶಾಸಕರ…

ಇತ್ತೀಚಿನ ಸುದ್ದಿ

Kannada Literature | ಕನ್ನಡ ಚುಟುಕು ಸಾಹಿತ್ಯ ಪರಿಷತ್ ದ.ಕ. ಜಿಲ್ಲಾಧ್ಯಕ್ಷರಾಗಿ ಡಾ.ಕೊಲಚಪ್ಪೆ ಗೋವಿಂದ ಭಟ್ ಆಯ್ಕೆ

06/03/2025, 10:36

ಜಯಾನಂದ ಪೆರಾಜೆ ಬಂಟ್ವಾಳ

info.reporterkarnataka@gmail.com

ಕಾಸರಗೋಡು ಕನ್ನಡ ಭವನ ಗ್ರಂಥಾಲಯ ರೂವಾರಿಗಳಾದ ಡಾ. ವಾಮನ್ ರಾವ್ -ಸಂಧ್ಯಾರಾಣಿ ದಂಪತಿ ಸ್ಥಾಪಿಸಿದ ಕೇರಳ ರಾಜ್ಯ -ಕನ್ನಡ ಚುಟುಕು ಸಾಹಿತ್ಯ ಪರಿಷತ್ತು, ಕಾಸರಗೋಡು ಜಿಲ್ಲಾ ಘಟಕದ “ಕೀರಿಕಾಡು ಮಾಸ್ಟರ್ ವಿಷ್ಣು ಭಟ್ “ಸಂಸ್ಮರಣೆ ಹಾಗೂ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾಗಿ ಲೇಖಕ ಡಾ. ಕೊಲಚಪ್ಪೆ ಗೋವಿಂದ ಭಟ್ , ಕಾರ್ಯದರ್ಶಿಯಾಗಿ ಅಪೂರ್ವ ಕಾರಂತ್ ಪುತ್ತೂರು ಅವರನ್ನು ಆಯ್ಕೆ ಮಾಡಲಾಗಿದೆ.
ಕನ್ನಡ ಚು. ಸಾ. ಪ. ಕರ್ನಾಟಕ ರಾಜ್ಯ ಸಂಚಾಲಕರಾದ ಜಯಾನಂದ ಪೆರಾಜೆ ನಾಮನಿರ್ದೇಶನ ಮಾಡಿದರು. ಇನ್ನೊರ್ವ ಸಂಚಾಲಕರಾದ ಡಾ. ಶಾಂತ ಪುತ್ತೂರು ಅವರು ಅನುಮೋದಿಸಿದರು. ಸರ್ವಾನುಮತಿಯಿಂದ ಆಯ್ಕೆಯಾದ ಡಾ. ಕೆ. ಗೋವಿಂದ ಭಟ್ ಮತ್ತು ಅಪೂರ್ವ ಕಾರಂತ್ ಇವರಿಗೆ ಸಂಸ್ಥೆಯ ಸ್ಥಾಪಕರಾದ ಡಾ. ವಾಮನ್ ರಾವ್ ಬೇಕಲ್ -ಸಂಧ್ಯಾರಾಣಿ ಟೀಚರ್ ಹಾಗೂ ಗೌರವಾಧ್ಯಕ್ಷರಾದ ಶಿಕ್ಷಣ ತಜ್ಞ, ಸಾಹಿತಿ ವಿ. ಬಿ. ಕುಳಮರ್ವ ಕನ್ನಡ ಧ್ವಜ ನೀಡಿ ಅಧಿಕಾರ ಹಸ್ತಾಂತರಿಸಿದರು. ಅಧಿಕಾರ ಸ್ವೀಕರಿಸಿದ ಡಾ. ಕೊಲಚಪ್ಪೆ ಗೋವಿಂದ ಭಟ್, ಅಪೂರ್ವ ಕಾರಂತ್ ಅವರಿಗೆ ಶಾಲು ಹೊದಿಸಿ, ಅಧಿಕಾರ ಪತ್ರ, ಕಾರ್ಯಸೂಚಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕಾಸರಗೋಡು ಜಿಲ್ಲಾಧ್ಯಕ್ಷರಾದ ವಿರಾಜ್ ಅಡೂರ್, ಕೋಶಾಧಿಕಾರಿ ಸಂಧ್ಯಾರಾಣಿ, ಸಂಘಟನಾ ಕಾರ್ಯದರ್ಶಿ ಶಾರದಾ ಮೊಳೆಯಾರ್, ಕರ್ನಾಟಕ ರಾಜ್ಯ ಸಂಚಾಲಕರಾದ ಜಯಾನಂದ ಪೆರಾಜೆ, ಕರ್ನಾಟಕ ರಾಜ್ಯ ಸಂಚಾಲಕಿ ಡಾ ಶಾಂತ ಪುತ್ತೂರು ಜತೆಗಿದ್ದರು. ಅಧ್ಯಕ್ಷ ಸ್ಥಾನ ಸ್ವೀಕರಿಸಿದ ಡಾ. ಕೊಲಚಪ್ಪೆ ಗೋವಿಂದ ಭಟ್ ತನ್ನ ಕೃತಜ್ಞತಾ ಭಾಷಣದಲ್ಲಿ “ದಕ್ಷಿಣ ಕನ್ನಡ ಜಿಲ್ಲಾ ಘಟಕವನ್ನು ಶೀಘ್ರದಲ್ಲಿ ವಿಸ್ತರಿಸಿ ಬರುವ ಏಪ್ರಿಲ್ ತಿಂಗಳಲ್ಲಿ 100ಮಂದಿ ಚುಟುಕು ಕವಿಗಳ ಕವಿಗೋಷ್ಠಿಯೊಂದಿಗೆ ಮಂಗಳೂರಿನಲ್ಲಿ ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ತಿಳಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು