12:47 AM Wednesday1 - April 2026
ಬ್ರೇಕಿಂಗ್ ನ್ಯೂಸ್
ದಾವಣಗೆರೆ ಉಪ ಚುನಾವಣೆ: ಕೆಂಡ ತುಳಿದು ಭಕ್ತಿ ಸಮರ್ಪಿಸಿದ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್‌ ಸಿದ್ದಗಂಗಾ ಮಠಕ್ಕೆ ಬಂದಿದ್ದು ನನ್ನ ಜೀವನದ ಸೌಭಾಗ್ಯ: ರಾಷ್ಟ್ರಪತಿ ದ್ರೌಪದಿ ಮುರ್ಮು ದಾವಣಗೆರೆ, ಬಾಗಲಕೋಟೆಯಲ್ಲಿ ಸಚಿವ ಜಮೀರ್ ಪ್ರಚಾರ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ತಮಿಳುನಾಡಿನಿಂದ ರೈಲಿನಲ್ಲಿ ಬಂದು ಕೆಂಜಾರು ದೇಗುಲದ ಹುಂಡಿ ಕಳ್ಳತನ: ಅಂತಾರಾಜ್ಯ ಕಳ್ಳನ ಬಂಧನ ಯಡಿಯೂರಪ್ಪ, ಬೊಮ್ಮಾಯಿ ಸರ್ಕಾರ ಬರೀ ಲೂಟಿ ಮಾಡಿದ್ದು ಬಿಟ್ಟರೆ ಅಭಿವೃದ್ಧಿ ಮಾಡಲಿಲ್ಲ: ಸಿಎಂ… ಸಿದ್ದರಾಮಯ್ಯ ಕಳ್ಳಮತಗಳಿಂದ ನನ್ನ ವಿರುದ್ಧ ಬಾದಾಮಿಯಲ್ಲಿ ಗೆದ್ದರು: ಶ್ರೀರಾಮುಲು ಆರೋಪ ಯತ್ನಾಳ್‌ ಬಂದರೆ ಸ್ವಾಗತ: ರಾಜ್ಯ ಬಿಜೆಪಿಯಲ್ಲಿ ಕುತೂಹಲ ಮೂಡಿಸಿದ ಮಾಜಿ ಸಿಎಂ ಯಡಿಯೂರಪ್ಪ… ಉಪ ಚುನಾವಣೆ | ಸಿಎಂ ಸಭೆಯಲ್ಲಿ ಭಾಗಿಯಾಗಿದ್ದ ಸರಕಾರಿ ಶಿಕ್ಷಕ ಕಬ್ಬಿನ ಗದ್ದೆಯೊಳಗೆ… ಬಾಗಲಕೋಟೆ ಉಪ ಚುನಾವಣೆ: ಆಲಮಟ್ಟಿ ಬಳಿ ರಾತೋರಾತ್ರಿ ಸಿಎಂ ಭೇಟಿಯಾದ ಮುಸ್ಲಿಂ​ ಮುಖಂಡರು;… ಉಪ ಚುನಾವಣೆ | ಸಿಎಂ ಸಭೆಯಲ್ಲಿ ಭಾಗಿಯಾಗಿದ್ದ ಸರಕಾರಿ ಶಿಕ್ಷಕ ಕಬ್ಬಿನ ಗದ್ದೆಯೊಳಗೆ…

ಇತ್ತೀಚಿನ ಸುದ್ದಿ

ಕಾಣಿಯೂರು ಘಟನೆ ಸರಕಾರ, ಪೊಲೀಸರ ವೈಫಲ್ಯಕ್ಕೆ ನಿದರ್ಶನ: ಮಾಜಿ ಶಾಸಕ ಜೆ.ಆರ್. ಲೋಬೋ

25/10/2022, 11:26

ಮಂಗಳೂರು(reporterkarnataka.com): ಕಾಣಿಯೂರು ಬಳಿ ಹೊಟ್ಟೆ ಪಾಡಿಗೆ ಬಟ್ಟೆ ವ್ಯಾಪಾರ ಮಾಡುವ ಇಬ್ಬರು ಮುಸ್ಲಿಮ್ ಯುವಕರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು, ಸರಕಾರ ಹಾಗೂ ಪೊಲೀಸ್ ಇಲಾಖೆಯ ವೈಫಲ್ಯಕ್ಕೆ ಸ್ಪಷ್ಟ ಉದಾಹರಣೆ. ಪೊಲೀಸರು ಜನರನ್ನು ಕಾಪಾಡಲು ಇರುವವರು. ಅವರು ಕಾನೂನು ಪಾಲನೆಗಿಂತ ಆಳುವವರ ಕೈಗೊಂಬೆ ಆಗಿರುವುದು ಸರಿಯಲ್ಲ ಎಂದು ಮಾಜಿ ಶಾಸಕ ಜೆ. ಆರ್. ಲೋಬೋ ಟೀಕಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ನಿನ್ನೆ ಆಸ್ಪತ್ರೆಗೆ ಭೇಟಿ ನೀಡಿ ಹಲ್ಲೆಗೊಳಗಾದವರನ್ನು ಭೇಟಿ ಮಾಡಿ, ಆರೋಗ್ಯ ವಿಚಾರಿಸಿದ್ದೇನೆ. ಇದು ಅನೈತಿಕ, ಕಾನೂನು ಬಾಹಿರ ಎಂದು ಹೇಳಿದರು.

ಇತ್ತೀಚೆಗೆ ಮಾಜಿ ಕಾರ್ಪೊರೇಟರ್ ಪ್ರತಿಭಾ ಕುಳಾಯಿ ಅವರು ಟೋಲ್ ವಿರೋಧಿ ಹೋರಾಟದಲ್ಲಿ ಭಾಗಿಯಾಗಿದ್ದರು. ಇದಕ್ಕಾಗಿ ಅವರನ್ನು ಗುರಿಯಾಗಿಸಿ ಅವರ ವಿರುದ್ಧ ಅಸಹ್ಯ ಪ್ರಚಾರ ಮಾಡಲಾಗಿದೆ. ಚಾನೆಲ್ ಗಳೂ ಈ ಅಸಹ್ಯ ಕೆಲಸ ಮಾಡಿವೆ. ಕಾಣಿಯೂರು ಬಳಿ ಹಲ್ಲೆ ಮತ್ತು ಪ್ರತಿಭಾ ಕುಳಾಯಿ ಮೇಲೆ ನಡೆದ ಅನೈತಿಕ ಪ್ರಚಾರಕ್ಕೆ ಕೆಲವರ ದ್ವೇಷ ಭಾಷಣಗಳೇ ಕಾರಣ.ಎಂದು ಲೋಬೋ ನುಡಿದರು.

ಚಿರತೆ ಬಸಿರಾದಂತಹ ಕಾರ್ಟೂನ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ್ದಕ್ಕೆ ಹೋರಾಟಗಾರರೊಬ್ಬರನ್ನು ಬಂಧಿಸಿರುವುದು ಏನನ್ನು ಸೂಚಿಸುತ್ತದೆ. ಕಾನೂನು ಮುರಿಯುವ ಎಲ್ಲರ ಮೇಲೆ ಕೆಲಸ ಕ್ರಮ ತೆಗೆದುಕೊಳ್ಳಿ. ಪೊಲೀಸರು ಜನರಿಗೆ ನ್ಯಾಯ ದೊರಕಿಸಲಿ. ಸಂವಿಧಾನದ ಪ್ರಕಾರ ದೇಶ ನಡೆಯಲಿ ಎಂದು ಲೋಬೋ ತಿಳಿಸಿದರು.


ಪತ್ರಿಕಾಗೋಷ್ಠಿಯಲ್ಲಿ ಶಶಿಧರ ಹೆಗ್ಡೆ ಪ್ರಕಾಶ್ ಸಾಲಿಯಾನ್, ಚಂದ್ರಕಲಾ, ಶಾಂತಲಾ ಗಟ್ಟಿ, ಹಮೀದ್, ಅಶ್ರಫ್, ಟಿ. ಕೆ. ಸುಧೀರ್ ಮೊದಲಾದವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು