ಇತ್ತೀಚಿನ ಸುದ್ದಿ
ಕಂದಾವರ: 1000 ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್ ಹಾಗೂ ವಿಶೇಷ ಚೇತನರಿಗೆ ಪೋತ್ಸಾಹ ಧನ ವಿತರಣೆ
04/03/2024, 12:23
ಸುರತ್ಕಲ್(reporterkarnataka.com): ಕಂದಾವರ ಗ್ರಾಮ ಪಂಚಾಯತ್ ವತಿಯಿಂದ ಪರಿಶಿಷ್ಟ ಜಾತಿ ಹಾಗೂ ಪಂಗಡದ 30 ಫಲಾನುಭವಿಗಳಿಗೆ 1000 ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್ ವಿತರಣೆ ಹಾಗೂ ವಿಶೇಷ ಚೇತನರಿಗೆ ಪೋತ್ಸಾಹ ಧನ ವಿತರಣೆ ಕಾರ್ಯಕ್ರಮ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ ವೈ ಭರತ್ ಶೆಟ್ಟಿ ಅವರ ನೇತೃತ್ವದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷರಾದ ಶಾಲಿನಿ ಎಸ್. , ಉಪಾಧ್ಯಕ್ಷರಾದ ಉದಯ್ ಭಟ್ , ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾವರದ ಸೌಮ್ಯ ಡಿ. ಹಾಗೂ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.