ಇತ್ತೀಚಿನ ಸುದ್ದಿ
ಖಂಡಗ್ರಾಸ ಸೂರ್ಯಗ್ರಹಣ: ಕಡಲ ನಗರಿಯಲ್ಲಿ ಜನರ ಓಡಾಟ ಇಳಿಮುಖ; ಸಿಟಿ ಬಸ್ ಗಳಲ್ಲಿ ಪ್ರಯಾಣಿಕರು ವಿರಳ
25/10/2022, 20:06

ಮಂಗಳೂರು,(reporterkarnataka.com): ದೀಪಾವಳಿ ಹಬ್ಬದ ಎರಡನೇ ದಿನವಾದ ಇಂದು ಖಂಡಗ್ರಾಸ ಸೂರ್ಯಗ್ರಹಣ ಸಂಭವಿಸಿದ್ದು, ಮಂಗಳೂರು ನಗರ ಸೇರಿದಂತೆ ಕರಾವಳಿ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಜನರ ಓಡಾಟ, ವಾಹನಗಳ ಸಂಚಾರ ವಿರಳಗೊಂಡಿತ್ತು.
ಜ್ಯೋತಿಷ್ಯ ಲೆಕ್ಕಾಚಾರ ಪ ್ರಕಾರ ಸುಮಾರು 27 ವರ್ಷಗಳ ಬಳಿಕ ಇದೀಗ ಕೇತುಗ್ರಸ್ತ ಸೂರ್ಯಗ್ರಹಣ ಸಂಭವಿಸಲಿದೆ. ಈ ಸೂರ್ಯಗ್ರಹಣವನ್ನು ಕೇತು ಖಗ್ರಾಸ ಸೂರ್ಯಗ್ರಹಣ, ಖಂಡಗ್ರಾಸ ಸೂರ್ಯಗ್ರಹಣ ಎಂದು ಕೂಡ ಕರೆಯಲಾಗುತ್ತದೆ.
ಸೂರ್ಯ ಗ್ರಹಣ ಆರಂಭವಾಗುತ್ತಿದ್ದಂತೆ ಮಂಗಳೂರು ನಗರದಲ್ಲಿ ಜನರ ಓಡಾಟ ಹಾಗೂ ಖಾಸಗಿ ವಾಹನಗಳ ಸಂಚಾರ ಕಡಿಮೆ ಆಯಿತು. ಸಿಟಿ, ಸರ್ವಿಸ್ ಬಸ್ ಗಳಲ್ಲಿ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿತ್ರು. ಮಾಲ್,ಅಂಗಡಿ ಮುಂಗಟ್ಟುಗಳಲ್ಲಿ ಕೂಡ ಗ್ರಾಹಕರ ಸಂಖ್ಯೆ ಕಡಿಮೆ ಇತ್ತು.
ಗ್ರಹಣ ಭಾರತದ ಹಲವು ಭಾಗಗಳಲ್ಲಿಯೂ ಗೋಚರವಾಗಲಿದೆ. ಬೆಂಗಳೂರು, ದೆಹಲಿ, ಕೊಲ್ಕತ್ತಾ, ಚೆನ್ನೈ, ವಾರಾಣಸಿ, ಮಥುರಾದಲ್ಲಿ ಈ ಗ್ರಹಣವನ್ನು ಕಾಣಬಹುದು.