ಇತ್ತೀಚಿನ ಸುದ್ದಿ
ಕನಕ ದಾಸರು ಮತ್ತು ವೀರ ವನಿತೆ ಓಬವ್ವ ಜಯಂತಿ: ಓಬವ್ವ ಬೃಹತ್ ವೃತ್ತ, ಉದ್ಯಾನವನ ನಿರ್ಮಾಣಕ್ಕೆ ಒತ್ತಾಯ
15/11/2022, 19:47
ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ
info.reporterkarnataka@gmail.com
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕು ಆಡಳಿತ, ತಾಲೂಕು ಕುರುಬ ಸಮುದಾಯ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶ್ರೀ ಕನಕದಾಸರ ಜಯಂತಿ ಹಾಗೂ ವೀರ ವನಿತೆ ಒನಕೆ ಓಬವ್ವ ಜಯಂತಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಶಾಸಕ
ಗೋಪಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ತಹಸಿಲ್ದಾರ್ ಟಿ.ಜಗದೀಶ್, ತಾಪಂ ಕಾರ್ಯನಿರ್ವಹಣಾಧಿಕಾರಿ ರವಿಕುಮಾರ ಹಾಗೂ ಕುರುಬ ಜನಾಂಗದ ತಾಲೂಕು ಅಧ್ಯಕ್ಷ ಬಸವರಾಜ, ಚಲವಾದಿ ಮಹಾಸಭಾ ಕೂಡ್ಲಿಗಿ ತಾಲೂಕು ಅಧ್ಯಕ್ಷ ಸಿ.ಎ.ಮೋಹನ್ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆಗಳಿಂದ ಸೇರಿದಂತೆ ಕುರಬ ಹಾಗೂ ಚಲವಾದಿ ಜನಾಂಗದ ಪ್ರಮುಖರು ಆಗಮಿಸಿದ್ದರು. ಪಪಂ ಅಧ್ಯಕ್ಷೆ ಎಮ್.ಶಾರದಾಬಾಯಿ ಹಾಗೂ ಸದಸ್ಯರು ಸೇರಿದಂತೆ ವಿವಿಧ ಜನಪ್ರತಿನಿಧಿಗಳು, ವಿವಿಧ ಸಮುದಾಯಗಳ ಮುಖಂಡರು ಮತ್ತು ಸಂಘಟನೆಗಳ ಪ್ರಮುಖರು, ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಭಾಗವಹಿಸಿದ್ದರು.
ಸಾಧಕರಿಗೆ ಸನ್ಮಾನ: ವೇದಿಕೆಯಲ್ಲಿ ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲೂಕಿನ ಹಲವೆಡೆಯ ವಿವಿಧ ಕ್ಷೇತ್ರಗಳಲ್ಲಿ, ವಿಶಿಷ್ಟ ಸೇವೆ ಸಲ್ಲಿಸಿದ್ದ ಸಾಧಕರಿಗೆ ಸನ್ಮಾಸಿ ಗೌರವಿಸಲಾಯಿತು.
ಕೂಡ್ಲಿಗಿ ಗುಡೇಕೋಟೆಯಲ್ಲಿ ವೀರ ವನಿತೆ ಓಬವ್ವ ಬೃಹತ್ ವೃತ್ತ ಉದ್ಯಾನವನ ನಿರ್ಮಿಸುವಂತೆ ಒತ್ತಾಯ -ಕೂಡ್ಲಿಗಿ ತಾಲೂಕು ಗುಡೇಕೋಟೆ ಗ್ರಾಮ, ವೀರ ವನಿತೆ ಓಬವ್ವಳ ತವರಾಗಿದ್ದು. ಅವಳ ಸ್ಮರಣಾರ್ಥ ಗುಡೇಕೋಟೆ ಗ್ರಾಮದ ಹೃದಯ ಭಾಗದಲ್ಲಿ, ಕೂಡ್ಲಿಗಿ ಪಟ್ಟಣದ ಆಯ್ದಭಾಗದಲ್ಲಿ. ನಾಡಕಂಡ ವೀರ ವನಿತೆಯ ಓಬವ್ವಳ ಬೃಹತ್ ಮೂರ್ತಿಯನ್ನೊಳಗೊಂಡ ವೃತ್ತ ನಿರ್ಮಿಸಬೇಕು, ಗುಡೇಕೋಟೆ ಕರಡಿ ದಾಮದಲ್ಲಿ ವೀರವನಿತೆ ಓಬವ್ವಳ ಉದ್ಯಾನವನ ನಿರ್ಮಿಸಬೇಕೆಂದು. ಸಮುದಾಯದ ಪ್ರಮುಖರು ಕೂಡ್ಲಿಗಿ ತಾಲೂಕಾಡಳಿತಕ್ಕೆ , ಮತ್ತು ಸ್ಥಳೀಯ ಆಡಳಿತಕ್ಕೆ. ಹಾಗೂ ಶಾಸಕ ಎನ್.ವೈ.ಗೋಪಾಲಕೃಷ್ಣರವರಲ್ಲಿ, ಕೂಡ್ಲಿಗಿ ಚಲವಾದಿ ಮಹಾಸಭಾ ಅಧ್ಯಕ್ಷ ಮೋಹನ್ ನೇತೃತ್ವದಲ್ಲಿ ಚಲವಾದಿ ಮುಖಂಡರು ಮನವಿ ಮಾಡಿದ್ದಾರೆ. ಸಂಬಂಧಿಸಿದಂತೆ ಚಲವಾದಿ ಮಹಾಸಭಾದ ಅಧ್ಯಕ್ಷ ಮೋಹನ್ ಮಾತನಾಡಿದ್ದಾರೆ, ಏಷ್ಯಾದ ಖಂಡದಲ್ಲಿಯೇ ಅತಿ ದೊಡ್ಡ ಎರಡನೇ ಕರಡಿ ದಾಮ ಗುಡೇಕೋಟೆಯಲ್ಲಿರುವುದು ನಮ್ಮೆಲ್ಲರ ಹೆಮ್ಮೆಯ ಸಂಗತಿಯಾಗಿದೆ. ಅಂತೆಯೇ ನಾಡ ಕಂಡ ವೀರವನಿತೆ ಒನಕೆ ಓಬವ್ವಳ ಉದ್ಯಾನವನ, ಹಾಗೂ ಬೃಹತ್ ವೃತ್ತವನ್ನು ನಿರ್ಮಿಸಿದ್ದಲ್ಲಿ. ಸರ್ಕಾರ ಹಾಗೂ ತಾಲೂಕಾಡಳಿತದಿಂದ ಓಬವ್ವಳನ್ನ ಜಗತ್ತಿಗೆ ಪರಿಚಯಿಸುವಂತಾಗುತ್ತದೆ, ಮತ್ತು ಗುಡೇಕೊಟೆ ಗ್ರಾಮವನ್ನು ಪ್ರವಾಸಿತಾಣವಾಗಿ ಅಭಿವೃದ್ಧಿ ಪಡಿಸಬಹುದಾಗಿದೆ ಎಂದರು. ಅದಕ್ಕಾಗಿ ತಾವೆಲ್ಲರೂ ಕ್ಷೇತ್ರದ ಶಾಸಕರಿಗೆ, ತಹಶಿಲ್ದಾರರಿಗೆ ಹಾಗೂ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಗೆ, ಅಗತ್ಯ ಸ್ಥಳವನ್ನು ನಿಗದಿಗೊಳಿಸಿ ಕ್ರಮ ಜರುಗಿಸುವಂತೆ ಹಕ್ಕೊತ್ತಾಯ ಮಾಡಿರುವುದಾಗಿ ಅವರು ತಿಳಿಸಿದ್ದಾರೆ.
ಓಬವ್ವಳ ಸ್ವಂತ ಊರು ಕೂಡ್ಲಿಗಿ ತಾಲೂಕು ಗುಡೆಕೋಟೆ ಹೋಬಳಿ ಕುದುರೆಡು ಗ್ರಾಮ ಆಗಿದ್ದು, ಕಾರಣ ತಾಯಿ ಒನಕೆ ಓಬವ್ವನವರ ಉದ್ಯಾನವನ ಮತ್ತು ಬೃಹತ್ ಮೂರ್ತಿಯನ್ನೊಳಗೊಂಡ ವೃತ್ತ ನಿರ್ಮಿಸಬೇಕೆಂದು. ಸರ್ಕಾರಕ್ಕೆ ಈ ಮೂಲಕ ಒತ್ತಾಯಿಸಿರುವುದಾಗಿ, ಚಲುವಾದಿ ಮಹಾಸಭಾ ಅಧ್ಯಕ್ಷ ಸಿ.ಎ.ಮೊಹನ್ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಚಲುವಾದಿ ಮಹಾಸಭಾದ ಪದಾಧಿಕಾರಿಗಳು, ಹಾಗೂ ಚಲವಾದಿ ಸಮುದಾಯದ ಮುಖಂಡರು ಇದ್ದರು.