ಇತ್ತೀಚಿನ ಸುದ್ದಿ
ಕಳಸೇಶ್ವರ ದೇವಾಲಯದ ಹುಂಡಿಯಲ್ಲಿ 2 ಸಾವಿರ ರೂ. ಮುಖಬೆಲೆಯ ಜೆರಾಕ್ಸ್ ನೋಟು ಪತ್ತೆ: ಭಕ್ತರೋ? ಅಥವಾ ಕಿಡಿಗೇಡಿಗಳ ಕೆಲಸವೋ?
04/08/2023, 15:59

ಚಿಕ್ಕಮಗಳೂರು(reporterkarnataka.com): ದಕ್ಷಿಣದ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕಳಸೇಶ್ವರ ದೇವಾಲಯದ ಹುಂಡಿಯಲ್ಲಿ 2 ಸಾವಿರ ರೂ. ಮುಖಬೆಲೆಯ ಜೆರಾಕ್ಸ್ ನೋಟು ಪತ್ತೆಯಾಗಿದೆ. ಇದು ಭಕ್ತರ ಕೆಲಸವೋ? ಕಿಡಿಗೇಡಿ ಕೃತ್ಯವೋ ಎನ್ನುವುದು ಗೊತ್ತಾಗಿಲ್ಲ.
ಹುಂಡಿಗೆ ಜೆರಾಕ್ಸ್ ನೋಟ್ ಹಾಕಿ ಯಾರೋ ಭಕ್ತರು ಇಷ್ಟಾರ್ಥ ಸಾಧನೆಗೆ ಬೇಡಿಕೊಂಡಿರಬೇಕು. ಇಲ್ಲವೇ ಕಿಡಿಗೇಡಿಗಳು ತಮಾಷೆಗೆ ಮಾಡಿರಬಹುದು ಎನ್ನಲಾಗಿದೆ.
ಕಾಣಿಕೆ ಹುಂಡಿಯಲ್ಲಿ 2000 ಮುಖ ಬೆಲೆಯ ಕಲರ್ ಜೆರಾಕ್ಸ್ ನೋಟು ಪತ್ತೆಯಾಗಿದೆ.
ಕಲರ್ ಜೆರಾಕ್ಸ್ ನೋಟು ನೋಡಿ ದೇವಾಲಯದ ಆಡಳಿತ ಮಂಡಳಿ ಸದಸ್ಯರಿಗೆ ಶಾಕ್ ಆಗಿದೆ. ಹುಂಡಿಯ ಹಣ ಎಣಿಕೆ ಕಾರ್ಯದ ವೇಳೆ ನಕಲಿ ನೋಟು ಪತ್ತೆಯಾಗಿದೆ.
ಬಳಿಕ ಜೆರಾಕ್ಸ್ ನೋಟ್ ನ್ನು ಆಡಳಿತ ಮಂಡಳಿ ಹರಿದು ಹಾಕಿದೆ.