ಇತ್ತೀಚಿನ ಸುದ್ದಿ
ಕಲ್ಲರಕೋಡಿ ಸರಕಾರಿ ಪ್ರೌಢಶಾಲೆ 68ನೇ ಕನ್ನಡ ರಾಜ್ಯೋತ್ಸವ, ಕರ್ನಾಟಕ ಸುವರ್ಣ ಸಂಭ್ರಮ
02/11/2023, 22:54

ಬಂಟ್ವಾಳ(reporterkarnataka.com): ಮಂಜನಾಡಿ ಸಮೀಪದ ಕಲ್ಲರಕೋಡಿ ಸರಕಾರಿ ಪ್ರೌಢಶಾಲೆ 68ನೇ ಕನ್ನಡ ರಾಜ್ಯೋತ್ಸವ, ಕರ್ನಾಟಕ 50 ಸುವರ್ಣ ಸಂಭ್ರಮವನ್ನು ಆಚರಿಸಲಾಯಿತು.
ಲಯನ್ಸ್ ಜೋನ್ ಚೇರ್ ಪರ್ಸನ್ ಆಶಾ ನಾಗರಾಜ್ ಮತ್ತು ಜೆಸಿಐ ಮಂಗಳಗಂಗೋತ್ರಿ ಕೋಣಾಜಿ ಘಟಕದ ಪೂರ್ವ ಅಧ್ಯಕ್ಷರಾದ ಫ್ರಾಂಕಿ ಫ್ರಾನ್ಸಿಸ್ ಕುಟಿನ ಅವರು ಭಾಗವಹಿಸಿದ್ದರು. ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆಯ ಮೂಲಕ ಚಾಲನೆ ನೀಡಲಾಯಿತು. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದಿಸಲಾಯಿತು ರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯರಾದ ಸೀಮಾ ಮರಿಯಾ ಡಿಸೋಜ ರವರು ವಹಿಸಿದ್ದರು ಕನ್ನಡ ಭಾಷಾ ಶಿಕ್ಷಕಿ ಜಯಲಕ್ಷ್ಮಿ ಸ್ವಾಗತಿಸಿದರು. ಕನ್ನಡ ನಾಡು ನುಡಿ ಭಾಷೆಯ ಬಗ್ಗೆ ಸಂತೋಷ್ ಪಮ್ಮರ್ ಅವರು ಭಾಷಣ ಮಾಡಿದರು .ಶಿಕ್ಷಕಿ ಪುಷ್ಪಾ ಧನ್ಯವಾದಗೈದರು. ಮುಫಿದಾ ಮತ್ತು ಶಹನಾ ಕಾರ್ಯಕ್ರಮ ನಿರೂಪಿಸಿದರು ಕಾರ್ಯಕ್ರಮದಲ್ಲಿ. ಶಿಕ್ಷಕರಾದ ವಿನಿತಾ, ಯಶಲತಾ ಪ್ರಭಾಕರ್, ವಿದ್ಯಾರ್ಥಿಗಳು, ಹಾಗೂ ಶಾಲಾ ಮಕ್ಕಳು ಭಾಗವಹಿಸಿದ್ದರು.