ಇತ್ತೀಚಿನ ಸುದ್ದಿ
ಕಲ್ಲರಕೋಡಿಯ ಕನ್ನಡ ಭಾಷಾ ಶಿಕ್ಷಕಿ ಜಯಲಕ್ಷ್ಮೀ ಜಿ. ಅವರಿಗೆ ರಾಷ್ಟ್ರ ನಿರ್ಮಾತ್ರ ವಾರ್ಷಿಕ ಪ್ರಶಸ್ತಿ ಪ್ರದಾನ
26/09/2023, 00:13

ಮಂಗಳೂರು(reporterkarnataka.com):ಅಂತಾರಾಷ್ಟ್ರೀಯ ರೋಟರಿ ಸಂಸ್ಥೆಯ ವಾರ್ಷಿಕ ರಾಷ್ಟ್ರ ನಿರ್ಮಾತ್ರ (NATION BUILDER)ವಾರ್ಷಿಕ ಪ್ರಶಸ್ತಿಯನ್ನು ಸರಕಾರಿ ಪ್ರೌಢಶಾಲಾ ಕಲ್ಲರಕೋಡಿಯ ಕನ್ನಡ ಭಾಷಾ ಶಿಕ್ಷಕಿ ಜಯಲಕ್ಷ್ಮೀ ಜಿ. ಅವರಿಗೆ ಪ್ರದಾನ ಮಾಡಲಾಯಿತು.
ರೋಟರಿ ಕ್ಲಬ್ ದೇರಳಕಟ್ಟೆ ಸಂಸ್ಥೆಯ ಆಶ್ರಯದಲ್ಲಿ ಸೆ.24 ರಂದು ಹೋಟೇಲ್ ಕಂಪರ್ಟ್ಇನ್ ಸಭಾಂಗಣದಲ್ಲಿ ಜರಗಿದ “ಶಿಕ್ಷಕರ ದಿನಾ ಚರಣೆ” ಯ ಸಮಾರಂಭದಲ್ಲಿ ರೋಟರಿ ಸಂಸ್ಥೆಯ ವೃತ್ತಿಪರ ಸೇವೆಯ ಅಂಗವಾಗಿ ಹಾಗೂ ಅಂತಾರಾಷ್ಟ್ರೀಯ ರೋಟರಿ ಸಂಸ್ಥೆಯ ವಾರ್ಷಿಕ ರಾಷ್ಟ್ರ ನಿರ್ಮಾತ್ರ (NATION BUILDER)ವಾರ್ಷಿಕ ಪ್ರಶಸ್ತಿಯನ್ನು ಸರಕಾರಿ ಪ್ರೌಢಶಾಲಾ ಕಲ್ಲರಕೋಡಿಯ ಕನ್ನಡ ಭಾಷಾ ಶಿಕ್ಷಕಿ ಜಯಲಕ್ಷ್ಮೀ ಜಿ. ಅವರು ಸಲ್ಲಿಸಿದ ಅನುಪಮ ಸೇವೆ ಮತ್ತು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಅಮೂಲ್ಯ ಕೊಡುಗೆಯನ್ನು ಪರಿಗಣಿಸಿ ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರಾದ| ಕೆ.ರವೀಂದ್ರ ಶೆಟ್ಟಿ, ಮಾಜಿ ಗವರ್ನರ್ ಡಾ ದೇವದಾಸ್ ರೈ, ಸಹಾಯಕ ಗವರ್ನರ್‌ರಾರದ ಪಿ.ಡಿ. ಶೆಟ್ಟಿಯವರು,.ಸಂಸ್ಥೆಯ ಅಧ್ಯಕ್ಷೆ ಲತಾ ವಿಕ್ರಮ್, ಕಾರ್ಯದರ್ಶಿ ಸುಜಾತ ಶೆಟ್ಟಿಯವರು, ಚುನಾಯಿತ ಗವರ್ನರ್ ವಿಕ್ರಮ್‌ದತ್ತ ಹಾಗೂ ಮಾಜಿ ಅಧ್ಯಕ್ಷರಾದ| ಜೆ.ಪಿ.ರೈಯವರು, ಡಾ l ಅನಂತನ್ ಉಪಸ್ಥಿತರಿದ್ದರು.