ಇತ್ತೀಚಿನ ಸುದ್ದಿ
ಕಲ್ಲಡ್ಕ ರಾಮನಗರದಲ್ಲಿ ಶ್ರೀ ವಿದ್ಯಾಗಣಪತಿ ದೇವರ ಗುಡಿಗೆ ಶಿಲಾನ್ಯಾಸ
31/01/2024, 21:52
ಬಂಟ್ವಾಳ(reporterkarnataka.com):ಮಂದಿರಗಳು ಪ್ರತಿಯೊಂದು ಊರಿನಲ್ಲಿಯೂ ಶ್ರದ್ಧಾಕೇಂದ್ರಗಳಾಗಿ ರೂಪುಗೊಳ್ಳಬೇಕು. ಅಯೋಧ್ಯೆಯಂತೆ ಬೆಳಗಬೇಕು. ಶ್ರೀ ರಾಮ ಎಲ್ಲರಿಗೂ ಆದರ್ಶವಾಗಬೇಕು. ಸಮಾಜದಲ್ಲಿ ಸಾಮರಸ್ಯವಾಗಿ ಸುಶಿಕ್ಷಿತರಾಗಬೇಕು ಎಂದು ವಿನಯ ಗುರೂಜಿ ಗೌರಿಗದ್ದೆ ಹೇಳಿದರು.
ಅವರು ಕಲ್ಲಡ್ಕ ಶ್ರೀರಾಮ ಮಂದಿರ ರಾಮನಗರದಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಶ್ರೀ ವಿದ್ಯಾಗಣಪತಿ ದೇವರ ಗುಡಿಗೆ ಶಿಲಾನ್ಯಾಸ ಸಂದರ್ಭದ ಧಾರ್ಮಿಕ ಸಭೆಯಲ್ಲಿ ಆಶೀರ್ಚನ ನೀಡಿದರು.
ಶ್ರೀ ರಾಮ ಕಾರುಣ್ಯ ಮೂರ್ತಿ. ಸದ್ಗುಣವಂತ, ಸೂರ್ಯವಂಶಜ. ಅವನ ಆದರ್ಶವನ್ನು ಮೈಗೂಡಿಸಿಕೊಂಡಿರುವ ಕಲ್ಲಡ್ಕ ಪ್ರಭಾಕರ ಭಟ್ಟರು ವಿದ್ಯಾಕೇಂದ್ರದ ಮೂಲಕ ಮಕ್ಕಳಲ್ಲಿ ಆದರ್ಶ ಸಂಸ್ಕೃತಿಯ ನ್ನು ಬೆಳೆಸುತ್ತಿದ್ದಾರೆ ಎಂದರು. ಕರಾವಳಿಯಲ್ಲಿ ದೈವಾರಾಧನಾ ಪದ್ಧತಿ ಕೌಟುಂಬಿಕ ಜೀವನವನ್ನು ಉಳಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅತಿಥಿಗಳಾಗಿ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀ ನಿವಾಸ ಪೂಜಾರಿ, ಬೆಂಗಳೂರಿನ ಎಂ.ಆರ್.ಜಿ.ಗ್ರೂಪ್ ಅಧ್ಯಕ್ಷ ಕೆ.ಪ್ರಕಾಶ್ ಶೆಟ್ಟಿ, ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್, ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ, ಉದ್ಯಮಿ ಸಂತೋಷ ಜಿ.ಶೆಟ್ಟಿ ದಲಂಬಿಲ ಮುಂಬಯಿ,ಅನಂತ ಮೂರ್ತಿ ಸಿರ್ಸಿ ಭಾಗವಹಿಸಿದ್ದರು. ವಿನಯ ಗುರೂಜಿ ಶಿಲಾನ್ಯಾಸ ನೆರವೇರಿಸಿ ಶುಭ ಹಾರೈಸಿದರು. ಕಶೆಕೋಡಿ ಸೂರ್ಯ ಭಟ್ ಶಿಲಾನ್ಯಾಸ ವಿಧಿವಿಧಾನ ನೆರವೇರಿಸಿ ಕ್ಷೀರಾಭಿಷೇಕ ಮಾಡಿದರು.
ಪ್ರಮುಖರಾದ ಪದ್ಮನಾಭ ಕೊಟ್ಟಾರಿ, ಶಂಭು ಶೆಟ್ಟಿ, ಟಿ.ಜಿ.ರಾಜಾರಾಮ ಭಟ್, ರಘುನಾಥ ಸೋಮಯಾಜಿ , ನಾರಾಯಣ ಸೋಮಯಾಜಿ, ಬೃಜೇಶ್ ಚೌಟ ಮೊದಲಾದವರು ಪಾಲ್ಗೊಂಡರು. ಆರಂಭದಲ್ಲಿ ವಿನಯ ಗುರೂಜಿಯವರು ಡಾ.ಕಮಲಾ ಪ್ರಭಾಕರ ಭಟ್ ಅವರನ್ನು ಶಾಲು ಹೊದಿಸಿ ಸನ್ಮಾನಿಸಿದರು.
ಮಂದಿರದ ಪದಾಧಿಕಾರಿಗಳಾದ ನಾಗೇಶ ಕಲ್ಲಡ್ಕ, ಚೆನ್ನಪ್ಪ ಕೋಟ್ಯಾನ್, ಕ.ಕೃಷ್ಣಪ್ಪ,, ಸುಜಿತ್ ಕೊಟ್ಟಾರಿ, ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ, ಪ್ರಾಂಶುಪಾಲ ಕೃಷ್ಣ ಕುಮಾರ್ ಕಾಯರ್ಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.