ಇತ್ತೀಚಿನ ಸುದ್ದಿ
ಕಳ್ಳಭಟ್ಟಿ ಅಡ್ಡೆಯ ಮೇಲೆ ಅಬಕಾರಿ ಪೊಲೀಸರ ದಾಳಿ: 4 ಲೀಟರ್ ಬಟ್ಟಿ ಸಾರಾಯಿ ಪತ್ತೆ; ಆರೋಪಿ ಪರಾರಿ
17/03/2023, 21:48

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.ಕಾಂ
ಮೂಡಿಗೆರೆ ತಾಲ್ಲೂಕಿನ ಕನ್ನಾಪುರ ಗ್ರಾಮದ ಮಂಜಯ್ಯ ಎಂಬುವವರ ಮನೆಯ ಮೇಲೆ ಅಬಕಾರಿ ಪೊಲೀಸರು ದಾಳಿ ನಡೆಸಿದ್ದು 30 ಲೀ ಬೆಲ್ಲದ ಕೊಳೆ ಹಾಗೂ 4ಲೀ ಬಟ್ಟಿ ಸಾರಾಯಿ ಪತ್ತೆಯಾಗಿದೆ. ಆರೋಪಿಯು ಪರಾರಿ ಆಗಿದ್ದು ಮೊಕ್ಕದಮೆ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ಇನ್ಸ್ಪೆಕ್ಟರ್ ಅಪೂರ್ವ, ಕಾನ್ಸ್ಟೇಬಲ್ ಮಲ್ಲಪ್ಪ ಹೆಗ್ಗಣವರ್ ಮತ್ತು ರಮೇಶ್, ವಾಹನ ಚಾಲಕ ಸತೀಶ್ ಕುಮಾರ್ ಇದ್ದರು.