ಇತ್ತೀಚಿನ ಸುದ್ದಿ
ಕಲಿಯುಗದ ಕರ್ಣ ಪಮ್ಮಿ ಕೊಡಿಯಾಲ್ ಬೈಲ್ ಗೆ ವಿದ್ಯಾಗಣಪತಿ ಆಟೋ ಚಾಲಕ ಮಾಲಕರ ಸಂಘ ಸನ್ಮಾನ
05/09/2022, 22:47

ಮಂಗಳೂರು(reporterkarnataka.com):ಸಾಮಾಜಿಕ, ರಾಜಕೀಯ, ಧಾರ್ಮಿಕ ಕ್ಷೇತ್ರದಲ್ಲಿ, ತನ್ನನ್ನು ತಾನು ತೊಡಗಿಸಿಕೊಂಡು ಸ್ವಾರ್ಥವಿಲ್ಲದೆ ಅಹಂ ಪಡೆಯದೇ ಹೆಸರು ಬಿರುದು ಬಯಸದೆ ಉತ್ತಮ ಸಮಾಜಕ್ಕಾಗಿ ಸೇವೆ ಸಲ್ಲಿಸುತ್ತಿರುವ ಜನ ಮೆಚ್ಚಿದ ನಾಯಕ ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್ ಅವರಿಗೆ ಬಿಜೈ ಕೆಎಸ್ಸಾರ್ಟಿಸಿ ವಿದ್ಯಾಗಣಪತಿ ಆಟೋ ಚಾಲಕ ಮಾಲಕರ ಸಂಘ ವತಿಯಿಂದ ಸನ್ಮಾನಿಸಲಾಯಿತು.
ಪ್ರತಿಷ್ಠಿತ ಮಂಗಳೂರು ವಿಶ್ವವಿದ್ಯಾನಿಲಯ ತುಳು ಅಧ್ಯಯನ ಪೀಠದ ಸದಸ್ಯರಾಗಿ ದಕ್ಷಿಣ ಕನ್ನಡ ಜಿಲ್ಲಾ ಕರ್ನಾಟಕ ಜಾನಪದ ಪರಿಷತ್ ಇದರ ಅಧ್ಯಕ್ಷ ರಾಗಿರುವ ಇವರು ಕೊರೋನಾ ಸಂದರ್ಭದಲ್ಲಿ ಅದೆಷ್ಟು ಮಂದಿ ಬಡವರಿಗೆ ಅಕ್ಕಿ ದವಸ ಧಾನ್ಯದ ಕಿಟ್ಟಗಳನ್ನು ವಿತರಿಸಿದ ದೇವತಾ ಮನುಷ್ಯ. ಒಂದು ಕೈಯಲ್ಲಿ ಕೊಟ್ಟದು ಇನೊಂದು ಕೈಗೆ ಗೊತ್ತಾಗ ಬಾರದು ಎನ್ನುವ ಮನೋಭಾವ ಇವರದ್ದು, ಬಡವರ ಸೇವೆಯೇ ದೇವರ ಸೇವೆ ಎನ್ನುವ ಇವರು ರಿಕ್ಷಾ ಚಾಲಕರಿಗೆ ಅನ್ಯಾಯವಾದಾಗ ಎದುರು ಬಂದು ಅವರ ಕಷ್ಟಕ್ಕೆ ಸ್ಪಂದಿಸುವ ವ್ಯಕ್ತಿ. ನನಗೆ ಯಾವುದೇ ಸನ್ಮಾನ ಬೇಡ ನಾನು ನನ್ನಿದಾದ ಉಪಕಾರವನ್ನು ಯಾವತ್ತು ಮಾಡುತೇನೆ. ನಿಮ್ಮ ಒಟ್ಟಿಗೆ ಇರುತ್ತೇನೆ.
ಎನ್ನುವ ಕಲಿಯುಗದ ಕರ್ಣನಿಗೆ ವಿದ್ಯಾಗಣಪತಿ ಆಟೋ ಚಾಲಕ ಮಾಲಕರ ಸಂಘದವರು ಒತ್ತಾಯಪೂರ್ವಕವಾಗಿ ಸನ್ಮಾನ ಮಾಡಿದರು.