2:04 PM Wednesday23 - April 2025
ಬ್ರೇಕಿಂಗ್ ನ್ಯೂಸ್
Terror Attack | ಕಾಶ್ಮೀರ: ಭಾರತೀಯ ಸೇನಾ ಕಾರ್ಯಾಚರಣೆಗೆ ಹತರಾದ ಉಗ್ರಗಾಮಿಗಳು: ಕಣಿವೆಯಲ್ಲಿ… ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ದಾಳಿ ನಡೆಸಿದ ಉಗ್ರಗಾಮಿಗಳ ವಿರುದ್ಧ ಸೇನಾ ಕಾರ್ಯಾಚರಣೆ: ಇಬ್ಬರು… ಕಾಶ್ಮೀರದಲ್ಲಿ ಕನ್ನಡಿಗರ ಮೇಲೆ ಉಗ್ರರ ದಾಳಿಗೆ ಶಿವಮೊಗ್ಗದ ಉದ್ಯಮಿ ಸಾವು: ಮುಖ್ಯಮಂತ್ರಿ ತುರ್ತುಸಭೆ;… Terrorist Attack | ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ: ಭೀಕರ ನರಮೇಧಕ್ಕೆ ಸಾವಿನ… Mandya | ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ವರದಿ ಸರಿಯಿಲ್ಲವೆನ್ನಲು ಬಿಜೆಪಿಗೆ ನೈತಿಕ… ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿ: ಶಿವಮೊಗ್ಗದ ಉದ್ಯಮಿ ಸಹಿತ 5ಕ್ಕೂ ಹೆಚ್ಚು… Karnataka BJP | ಹಾವೇರಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ಸರಕಾರದ ವಿರುದ್ಧ… DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ…

ಇತ್ತೀಚಿನ ಸುದ್ದಿ

ಕಳೆದ ಬಾರಿ ಅರ್ಧಂಬರ್ಧ ಸುಣ್ಣಬಣ್ಣ ಕಂಡ ತುಂಗಾ ಕಮಾನು ಸೇತುವೆಗೆ ಈ ಬಾರಿ ಸಂಪೂರ್ಣ ಬಣ್ಣ ಹಚ್ಚುತ್ತಾರ?

26/11/2024, 12:15

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ

info.reporterkarnataka@gmail.com

ಕೊಪ್ಪ ರಸ್ತೆಯಲ್ಲಿರುವ ತುಂಗಾ ನದಿಗೆ ಸರ್. ಎಂ. ವಿಶ್ವೇಶ್ವರಯ್ಯ ಅವರ ತಂತ್ರಜ್ಞಾನದಲ್ಲಿ ಕಟ್ಟಿರುವ ಶ್ರೀ ಜಯಚಾಮರಾಜೇಂದ್ರ ಕಮಾನು ಸೇತುವೆಯು ಕಳೆದ ಎಳ್ಳಮಾವಾಸ್ಯೆ ಜಾತ್ರೆಯ ವೇಳೆ ಅರ್ಧಂಬರ್ದ ಸುಣ್ಣ ಬಣ್ಣ ಕಂಡಿದ್ದು ಕೇವಲ ಸೇತುವೆಯ ತಡೆಗೋಡೆ ಹಾಗೂ ಅರ್ಧ ಕಾಮಾನಿಗೆ ಮಾತ್ರ ಸುಣ್ಣ ಬಣ್ಣ ಬಳಿಯಲಾಗಿತ್ತು.
ಪ್ರತಿ ವರ್ಷ ಎಳ್ಳಮವಾಸ್ಯೆಯ ಸಮಯದಲ್ಲಿ ತುಂಗಾ ಕಮಾನು ಸೇತುವೆಗೆ ಪೂರ್ಣ ಪ್ರಮಾಣದಲ್ಲಿ ಸುಣ್ಣಬಣ್ಣ ಬಳಿದು ಸಂಬಂಧ ಪಟ್ಟ ಅಧಿಕಾರಿಗಳು ಸೇತುವೆಗೆ ಮೆರಗು ನೀಡುತ್ತಿದ್ದರು. ತೆಪ್ಪೋತ್ಸವ ಸಮಿತಿಯವರು ಈ ಸೇತುವೆಗೆ ವಿಶೇಷ ರೀತಿಯ ದೀಪಾಲಂಕಾರ ಮಾಡುತ್ತಿದ್ದರು. ಎಳ್ಳಮವಾಸ್ಯೆ ಜಾತ್ರೆಯಲ್ಲಿ ಈ ದೀಪಾಲಂಕಾರ ಮಾಡಿರುವ ಸೇತುವೆಯನ್ನು ನೋಡಲೆಂದೇ ಸಾವಿರಾರು ಜನರು ಬಂದು ಪೋಟೋಗಳನ್ನು ತೆಗೆಯುತ್ತಿದ್ದರು. ಆದರೆ ಇತ್ತೀಚೆಗೆ ಎರಡು ಮೂರು ವರ್ಷಗಳಿಂದ ಕಮಾನು ಸೇತುವೆಗೆ ಸುಣ್ಣಬಣ್ಣ ಬಳಿಯದೆ ಕೇವಲ ತಡೆ ಗೋಡೆಗಳಿಗೆ ಮಾತ್ರ ಸುಣ್ಣ ಬಳಿದು ಅಧಿಕಾರಿಗಳು ಸುಮ್ಮನಾಗಿದ್ದು ಈ ಬಾರಿ ಪುರಾಣ ಪ್ರಸಿದ್ಧ ರಾಮೇಶ್ವರ ಜಾತ್ರೆ ಡಿಸೆಂಬರ್ .30, 31 ಹಾಗೂ ಜನವರಿ 1ರಂದು ಜಾತ್ರೆ ನಡೆಯಲಿದ್ದು ಜಾತ್ರೆಗೆ ದಿನಗಣನೆ ಆರಂಭವಾಗಿದೆ.
ತೆಪ್ಪೋತ್ಸವದ ದಿನ ಪ್ರೇಕ್ಷಕರ ಕೇಂದ್ರ ಬಿಂದುವಾಗಿರುವ ತುಂಗಾ ನದಿಯ ಕಮಾನು ಸೇತುವೆ ಅರ್ಧಂಬರ್ಧ ಸುಣ್ಣ ಬಣ್ಣ ಬಳಿಯುವ ಬದಲು ಈ ಬಾರಿಯಾದರೂ ಸಂಪೂರ್ಣ ಬಣ್ಣ ಬಳಿದು ಐತಿಹಾಸಿಕ ತೀರ್ಥಹಳ್ಳಿಯ ಜಯಚಾಮರಾಜೇಂದ್ರ ಸೇತುವೆಗೆ ಮೆರಗು ನೀಡಲಿ ಎನ್ನುವುದು ಪಟ್ಟಣದ ಸಾರ್ವಜನಿಕರ ಅಭಿಪ್ರಾಯವಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು