ಇತ್ತೀಚಿನ ಸುದ್ದಿ
Kalburgi | ರಾಘಪುರ ದರ್ಗಾ ಹುಂಡಿ ಕಳವು ಪ್ರಕರಣ: ಮುಧೋಳ್ ಪೊಲೀಸರಿಂದ ಓರ್ವ ಆರೋಪಿಯ ಬಂಧನ
28/10/2025, 19:50
ವೆಂಕಟಪ್ಪ ಕೆ. ಸುಗ್ಗಾಲ್ ಸೇಡಂ ಕಲಬುರ್ಗಿ
info.reporterkarnata@gmail.com
ಮುಧೋಳ್ ಪೊಲೀಸ್ ಠಾಣಾ ವ್ಯಾಪ್ತಿಯ ರಾಘಪುರ ದರ್ಗಾ ಹುಂಡಿ ಕಳವು ಮಾಡಿದ ಪ್ರಕರಣ ಸಂಬಂಧಿಸಿದಂತೆ
ಮುಧೋಳ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ರಾಘಪುರ ಗ್ರಾಮದಲ್ಲಿ ದರ್ಗಾ ಹುಂಡಿ ಒಡೆದು ಕಳ್ಳತನ ಕುರಿತು ಗುನ್ನೇ ನo 74/25 ಯು/ಎಸ್ 331(3)ರದಲ್ಲಿ ಪ್ರಕರಣ ದಾಖಲಾಗಿದ್ದು.
ಪ್ರಕರಣ ಕುರಿತು ಪೊಲೀಸ್ ಅಧೀಕ್ಷಕರು, ಅಪರ ಪೊಲೀಸ್ ಅಧೀಕ್ಷಕರು ಮತ್ತು ಚಿಂಚೋಳಿ ಉಪಾಧೀಕ್ಷಕರ ಮಾರ್ಗದರ್ಶನ ಮೇರೆಗೆ ಪಿಐ ದೌಲತ್ ಎನ್. ಕೆ. ನೇತೃತ್ವದಲ್ಲಿ
ಪಿಎಸ್ಐ ಚಂದ್ರಶೇಖರ್ ಮತ್ತು ಸಿಬ್ಬಂದಿಗಳಾದ ಶಂಕರಗೌಡ, ವೀರರೆಡ್ಡಿ ಭೀಮಣ್ಣ ಎಎಸ್ಐ, ಅಲ್ಲಾಭಕ್ಷ ಒಳಗೊಂಡಂತೆ ರಾಘಪುರ ಗ್ರಾಮದ ಮೌಲಾಲಿ ದರ್ಗಾದ ಹುಂಡಿಯನ್ನು ಒಡೆದು ಕಳ್ಳತನ ಮಾಡಿದ ಆರೋಪಿಯಾದ ನರಸಿಂಹಲು ರಾಘಪುರ ಎಂಬಾತನನ್ನು ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು,ನ್ಯಾಯಾಂಗ ಬಂಧನ ವಿಧಿಸಲಾಗಿದೆ.












