ಇತ್ತೀಚಿನ ಸುದ್ದಿ
ಕಳಸ: ಕಂದಕಕ್ಕೆ ಬಿದ್ದ ಜೀಪ್; ಯುವತಿ ಸ್ಥಳದಲ್ಲೇ ಸಾವು; ಹೊರನಾಡಿಗೆ ತೆರಳುತ್ತಿದ್ದಾಗ ದುರ್ಘಟನೆ
23/11/2022, 10:09

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.con
ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಹೊಸಗದ್ದೆ ಗ್ರಾಮದಲ್ಲಿ
ಚಾಲಕಿಯ ನಿಯಂತ್ರಣ ತಪ್ಪಿ ಜೀಪ್ ಕಂದಕಕ್ಕೆ ಬಿದ್ದ ಪರಿಣಾಮ ಯುವತಿಯೊಬ್ಬಳು ಸ್ಥಳದಲ್ಲೇ ಸಾವನ್ಬಪ್ಪಿದ್ದಾಳೆ.
ಮೃತಪಟ್ಟವರನ್ನು ಅಕ್ಷತಾ (35) ಎಂದು ಗುರುತಿಸಲಾಗಿದೆ.
ಕಳಸ ತಾಲೂಕಿನ ಹೊಸಗದ್ದೆ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಹೊಸಗದ್ದೆಯಿಂದ ಹೊರನಾಡಿಗೆ ಹೋಗುತ್ತಿದ್ದ ಜೀಪ್ ಕಂದಕಕ್ಕೆ ಬಿದ್ದಿದೆ.
ಕಳಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.