ಇತ್ತೀಚಿನ ಸುದ್ದಿ
ಕಳಸ ಜಾತ್ರೆ: ಪೊಲೀಸರೇ ಆಡಿಸಿದ್ರಾ ಜೂಜು?; ಖಾಕಿ ಕಾವಲಿನಲ್ಲೇ ನಡೆಯಿತಾ ಬೆಟ್ಟಿಂಗ್ ದಂಧೆ…?
21/02/2024, 11:00
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕಳಸೇಶ್ವರ ಸ್ವಾಮಿ ಜಾತ್ರೆಯಲ್ಲಿ ಜೂಜಾಟ ನಡೆದಿದೆ. ಜೂಜುಕೋರರು
ರಾಜಾರೋಷವಾಗಿ ಜೂಜು ನಡೆಸಿದರು. ಪೊಲೀಸರ ಕಾವಲಿನಲ್ಲೇ ನಡೆಯಿತಾ ಈ ಜೂಜು ದಂಧೆ ಎಂಬ ಸಂಶಯ ಸಾರ್ವಜನಿಕರಲ್ಲಿ ಕಾಡಲಾರಂಭಿಸಿದೆ.
ಪೊಲೀಸರ ಸಹಕಾರದಿಂದ ರಾಜಾರೋಷವಾಗಿ ಜೂಜಾಟ ನಡೆದಿದೆ ಎಂದು ಪೊಲೀಸರ ವಿರುದ್ಧ ಸ್ಥಳೀಯರು ಗಂಭೀರ ಆರೋಪ ಮಾಡಿದ್ದಾರೆ. ಜಾತ್ರೆಯಲ್ಲಿ ಪೊಲೀಸರೇ ಜೂಜು ಆಡಿಸಿದ್ದಾರೆಂದು ಸ್ಥಳೀಯರು ಆರೋಪಿಸಿದ್ದಾರೆ.
ಜೂಜು ನಡೆಯುವ ಸ್ಥಳದಲ್ಲೇ ಪೊಲೀಸರು ಓಡಾಡುತ್ತಿದ್ದರು.
ಜೂಜು ನಡೆಯುತ್ತಿದ್ರು ಪ್ರಶ್ನಿಸಿಲ್ಲ ಏಕೆ, ಜೂಜು ಕಾನೂನು ಬಾಹಿರ ಅಲ್ಲವೇ ಎಂದು ಪ್ರಶ್ನೆ…? ಎಳಲಾರಂಭಿಸಿದೆ. ದಕ್ಷಿಣಕಾಶಿ ಎಂದೇ ಕರೆಸಿಕೊಳ್ಳೋ ಕಳಶದ ಕಳಸೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಜಾತ್ರೆ ನಡೆದಿದೆ.