ಇತ್ತೀಚಿನ ಸುದ್ದಿ
ಕಳಸ: ಗುಡ್ಡ ಕುಸಿತ ಆಯ್ತು, ಇದೀಗ ಭತ್ತದ ಗದ್ದೆ ಕುಸಿತ!: 60 ಅಡಿಯಷ್ಟು ಕಂದಕ!; ರೈತರಲ್ಲಿ ಆತಂಕ
06/08/2022, 17:07
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಮಲೆನಾಡಲ್ಲಿ ಮಳೆಯ ಅಬ್ಬರ ಮುಂದುವರಿಸಿದ್ದು,ಭತ್ತದ ಗದ್ದೆಯಲ್ಲಿ ಭೂ ಕುಸಿತ ಉಂಟಾದ ಘಟನೆ ಜಿಲ್ಲೆಯ ಕಳಸ ತಾಲೂಕಿನ ನೆಲ್ಲಿಬೀಡು ಗ್ರಾಮದಲ್ಲಿ ನಡೆದಿದೆ.
ನಾಟಿಗೆ ಸಜ್ಜಾಗಿದ್ದ ಭತ್ತದ ಗದ್ದೆಯಲ್ಲಿ ಭೂಕುಸಿತ ಉಂಟಾಗಿದೆ. ಭತ್ತದ ಗದ್ದೆಯಲ್ಲಿ ಭೂ ಕುಸಿತವಾದ ಹಿನ್ನೆಲೆ ಕೃಷಿಕರು ಆತಂಕಗೊಂಡಿದ್ದಾರೆ. ಮನೋಜ್ ಎಂಬುವರಿಗೆ ಸೇರಿದ ಭತ್ತದ ಗದ್ದೆಯಲ್ಲಿ ಭೂ ಕುಸಿತ ಉಂಟಾಗಿದೆ. ಭತ್ತದ ಗದ್ದೆ ಮಧ್ಯೆಭಾಗದಲ್ಲಿ 60ರಿಂದ 70 ಅಡಿ ಭೂಕುಸಿತವಾಗಿದೆ.