ಇತ್ತೀಚಿನ ಸುದ್ದಿ
ಕೈಕೊಟ್ಟ ಏರ್ ಇಂಡಿಯಾ ವಿಮಾನ!: ದುಬೈಗೆ ತೆರಳಬೇಕಿದ್ದ ಪ್ರಯಾಣಿಕರು ಮಂಗಳೂರು ವಿಮಾನ ನಿಲ್ದಾಣದಲ್ಲೇ ಬಾಕಿ!
11/07/2023, 13:43

ಮಂಗಳೂರು(reporterkarnataka.com): ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದ ಕಾರಣ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ತೆರಳಬೇಕಿದ್ದ ವಿಮಾನ ಏರ್ ಪೋರ್ಟ್ ನಲ್ಲೇ ಉಳಿದ ಕಾರಣ ಪ್ರಯಾಣಿಕರು ರಾತ್ರಿ ಯಿಡೀ ವಿಮಾನ ನಿಲ್ದಾಣದಲ್ಲೇ ಬಾಕಿಯಾಗಿದ್ದು, ಪ್ರಯಾಣಿಕರು ಹಾಗೂ ಅಧಿಕಾರಿಗಳ ಜತೆ ವಾಗ್ವಾದ ನಡೆಯಿತು.
ಮಂಗಳೂರು ವಿಮಾನ ನಿಲ್ದಾಣದಿಂದ ಭಾನುವಾರ ರಾತ್ರಿ 11.15ಕ್ಕೆ ತೆರಳಬೇಕಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದಿತ್ತು. ಸರಿಪಡಿಸಲು ತಂತ್ರಜ್ಞರು ತಿರುವನಂತಪುರ ವಿಮಾನ ನಿಲ್ದಾಣದಿಂದ ಆಗಮಿಸಬೇಕಿತ್ತು. ಇದರ ಪರಿಣಾಮ ದುಬೈ ತೆರಳಬೇಕಿದ್ದ ಸುಮಾರು 180 ಪ್ರಯಾಣಿಕರು ವಿಮಾನ ನಿಲ್ದಾಣದಲ್ಲೇ ಉಳಿಯ ಬೇಕಾಯಿತು. ಈ ನಡುವೆ ಇಂದು ಬೆಳಗ್ಗೆ 9 ಗಂಟೆಗೆ ದುಬೈಗೆ ಪ್ರಯಾಣ ಬೆಳೆಸುವುದಾಗಿ ಅಧಿಕಾರಿಗಳು ತಿಳಿಸಿದ್ದರು. ಆದರೆ ಬೆಳಗ್ಗೆ 10 ಗಂಟೆ ಕಳೆದ ಬಳಿಕವೂ ವ್ಯವಸ್ಥೆ ಮಾಡದಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರು ಹಾಗೂ ಅಧಿಕಾರಿಗಳ ನಡುವೆ ವಾಗ್ವಾದ ನಡೆಯಿತು.