ಇತ್ತೀಚಿನ ಸುದ್ದಿ
ಕಾಗವಾಡ ಶಾಸಕ ಶ್ರೀಮಂತ ಪಾಟೀಲರಿಂದ ಕನ್ನಡಕ್ಕೆ ಅವಮಾನ: ಮರಾಠಿಗರ ಓಲೈಕೆಗೆ ಮರಾಠಿ ಭಾಷೆಯಲ್ಲಿ ಮತಯಾಚನೆ
04/05/2023, 21:27

ರಾಹುಲ್ ಅಥಣಿ ಬೆಳಗಾವಿ
info.reporterkarnataka@mail.com
ಕಾಗವಾಡ ತಾಲೂಕಿನ ಸಂಬರಗಿ ಗ್ರಾಮದಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಭಾಷಣ ಉದ್ದಕ್ಕೂ ಪಕ್ಕದ ರಾಜ್ಯವಾದ ಮಹಾರಾಷ್ಟ್ರದ ಮರಾಠಿ ಭಾಷೆಯಲ್ಲಿ ಮಾತನಾಡಿ ಕನ್ನಡ ಭಾಷೆಗೆ ಅವಮಾನಿಸಿದ ಘಟನೆ ಬೆಳಕಿಗೆ ಬಂದಿದೆ.
ನಾನು ಯಾವುದೇ ಕಾರಣಕ್ಕೂ ಕನ್ನಡಕ್ಕೆ ಅವಮಾನಿಸುವುದಿಲ್ಲ. ಕನ್ನಡದಲ್ಲಿ ಮಾತನಾಡುತ್ತೇನೆ ಎಂದು ಹೇಳಿದ ಶಾಸಕ ಈಗ ಮತ್ತೆ ಮರಾಠಿಯಲ್ಲಿ ಮಾತನಾಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಬಿಜೆಪಿ ಪಕ್ಷದ ಮತ ಓಲೈಕೆಗೆ ಕನ್ನಡ ಭಾಷೆಯನ್ನು ಮರೆತು ಮರಾಠಿಯಲ್ಲಿ ಮತ ಕೇಳುತ್ತಿರುವುದು ಕನ್ನಡಿಗರಿಗೆ ಮಾಡಿದ ಅವಮಾನ ಎಂದು ಸ್ಪಷ್ಟವಾಗಿ ಕಾಣುತ್ತದೆ.