2:27 PM Thursday18 - September 2025
ಬ್ರೇಕಿಂಗ್ ನ್ಯೂಸ್
ಕೃಷ್ಣಾ ಮೇಲ್ದಂಡೆ ಯೋಜನೆ: ಮುಳುಗಡೆ ರೈತರ ನೀರಾವರಿ ಜಮೀನಿಗೆ 40 ಲಕ್ಷ, ಒಣಭೂಮಿಗೆ… Belagavi | ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿಗೆ ಬಡ್ತಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೂ ಸ್ವಾಧೀನ ಪ್ರಕ್ರಿಯೆ ಅಕ್ರಮ ಕೂಡಲೇ ಕೈಬಿಡಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಗ್ರಹ ಪಾಲಿಕೆಯೇ ಪಾಪರ್‌ ಆಗಿರುವಾಗ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ: ಪ್ರತಿಪಕ್ಷದ ನಾಯಕ ಆರ್.… ಮತಗಳ್ಳತನಕ್ಕೆ ಅವಕಾಶ ನೀಡಬೇಡಿ: ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಪರಿಹಾರದಾಸೆಗೆ ಪತಿಯ ಕೊಲೆಗೈದು ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ಸಿಕ್ಕಿಬಿದ್ದ ಪತ್ನಿ;… Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ 2026ರ ಮಾರ್ಚ್‌ಗೆ PM KUSUM 2ನೇ ಹಂತ ಅನುಷ್ಠಾನ: ಕೇಂದ್ರ ಸಚಿವ ಪ್ರಹ್ಲಾದ್… ವಿಧಾನ ಪರಿಷತ್ ಸದಸ್ಯರಾಗಿ ಡಾ. ಆರತಿಕೃಷ್ಣ, ರಮೇಶ್ ಬಾಬು ಸಹಿತ ನಾಲ್ವರು ಪ್ರಮಾಣ… ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು…

ಇತ್ತೀಚಿನ ಸುದ್ದಿ

ಕಾಗವಾಡ ನದಿ ಪಾತ್ರದ ರೈತರ ಬಹುದಿನಗಳ ಕನಸು ನನಸು: ಕೊನೆಗೂ ದಿನಕ್ಕೆ 20 ತಾಸು ವಿದ್ಯುತ್ ಪೂರೈಕೆ ಆರಂಭ

16/06/2021, 10:42

ರಾಹುಲ್ ಅಥಣಿ ಬೆಳಗಾವಿ

info.reporterkarnataka@gmail.com

ಕಾಗವಾಡ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ನದಿ ತೀರದ ಸುಮಾರು 20 ಗ್ರಾಮಗಳಿಗೆ ದಿನದ 20 ತಾಸು ವಿದ್ಯುತ್ ಪೂರೈಕೆ ಆರಂಭವಾಗಿದೆ. ಡೆಲ್ಟಾ ಮಾದರಿಯಲ್ಲಿ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಇದರೊಂದಿಗೆ ಇಲ್ಲಿನ ರೈತರ ಬಹುದಿನಗಳ ಬೇಡಿಕೆ ಪೂರೈಸಿದಂತಾಗಿದೆ.

ಈ ಮುನ್ನ ನದಿ ಪಾತ್ರದ ರೈತರಿಗೆ ದಿನಕ್ಕೆ ಬರೇ 8 ತಾಸು ವಿದ್ಯುತ್ ಪೂರೈಸಲಾಗುತ್ತಿತ್ತು. ಇದರಿಂದ ರೈತರಿಗೆ ಕೃಷಿ ಚಟುವಟಿಕೆಗಳಲ್ಲಿ ತೊಡಗಲು ಬಹಳಷ್ಟು ತೊಂದರೆಯಾಗುತ್ತಿತ್ತು. ರೈತರು ಈ ವಿಷಯನ್ನು ಸಚಿವ ಶ್ರೀಮಂತ ಪಾಟೀಲ್  ಗಮನಕ್ಕೆ ತಂದಿದ್ದರು.

ವಿದ್ಯುತ್ ಇಲಾಖೆಯ ಅಧಿಕಾರಿಗಳನ್ನು ಕಚೇರಿಗೆ ಕರೆದು ಜನಪ್ರತಿನಿಧಿಗಳು ಅಧಿಕಾರಿಗಳೊಂದಿಗೆ

ಚರ್ಚಿಸಿ ದಿನದ 20 ತಾಸು ಕಾಲ ವಿದ್ಯುತ್ ನೀಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಇದರ ಪರಿಣಾಮ ಇದೀಗ

ದಿನದ 20 ಗಂಟೆಗಳ ಕಾಲ ಡೆಲ್ಟಾ ರೀತಿಯಲ್ಲಿ ವಿದ್ಯುತ್ ಪ್ರಾರಂಭಿಸಲಾಗಿದೆ. ಇದರಿಂದ

ಈಗಾಗಲೇ ಹಲವಾರು ರೈತರು ಕೃಷಿ ಚಟುವಟಿಕೆ ಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ಖುಷಿಯಲ್ಲಿ

ವಿವಿಧ ನೀರಾವರಿ ಸಂಘಗಳ ಸದಸ್ಯರು, ಸಮಸ್ತ ರೈತರು  ಕಾಗವಾಡದ ಪ್ರವಾಸಿ ಮಂದಿರದಲ್ಲಿ 

ಕೈಮಗ್ಗ ಮತ್ತು ಜವಳಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ  ಶ್ರೀಮಂತ ಪಾಟೀಲ್ ಅವರನ್ನು ಅಭಿನಂದಿಸಿದರು.

ಈ ಸಂದರ್ಭದಲ್ಲಿ  ಸಚಿವರು ಮಾತನಾಡಿ, ನಮ್ಮ ಕ್ಷೇತ್ರದ ರೈತರಿಗೆ ಕೃಷಿ ಚಟುವಟಿಕೆ ಮಾಡಲು ತೊಂದರೆಯಾಗಿತ್ತು, ಇದನ್ನು ಮನಗಂಡು ರೈತರಿಗೆ ಅನುಕೂಲವಾಗಲಿ ಎಂದು ಡೆಲ್ಟಾ ರೀತಿಯಲ್ಲಿ ದಿನದ 20 ಗಂಟೆಗಳ ಕಾಲ ಹೆಚ್ಚಿನ ವಿದ್ಯುತ್ ನೀಡಲಾಗಿದೆ. ಎಲ್ಲ ರೈತರು ಇದರ ಉಪಯೋಗ ಪಡೆದು ಉತ್ತಮವಾಗಿ ಬೆಳೆ ಬೆಳೆಯಿರಿ ಎಂದು ರೈತರು ಹಾಗೂ ಗ್ರಾಮಸ್ಥರಲ್ಲಿ ಸಚಿವರು ಮನವಿ ಮಾಡಿದರು.

ಸ್ಥಳೀಯ ಮುಖಂಡರು, ವಿವಿಧ ಗ್ರಾಮದ ರೈತರು, ಹಲವಾರು ನೀರಾವರಿ ಸಂಘಗಳ ಸದಸ್ಯರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು