ಇತ್ತೀಚಿನ ಸುದ್ದಿ
ಕಡೂರು: ಬೋರ್ ವೆಲ್ ಗೆ ವಿದ್ಯುತ್ ಲೈನ್ ಎಳೆಯುವ ವಿಚಾರದಲ್ಲಿ ಗಲಾಟೆ: ಕೊಲೆಯಲ್ಲಿ ಅಂತ್ಯ
02/02/2025, 13:39
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಬೋರ್ ವೆಲ್ ಗೆ ವಿದ್ಯುತ್ ಲೈನ್ ವಿಚಾರಕ್ಕೆ ಸಂಬಂಧ
ಗಲಾಟೆ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಕಡೂರು ತಾಲೂಕಿನ ವಡೇರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕೊಲೆಗೀಡಾದವರನ್ನು ಕಲ್ಲೇಶಪ್ಪ (55) ಎಂದು ಗುರುತಿಸಲಾಗಿದೆ. ಪ್ರಕರಣ ಕುರಿತು ವಡೇರಹಳ್ಳಿ ಪಕ್ಕದ ಆನಂದಪುರ ಗ್ರಾಮದ ಮೂವರ ಮೇಲೆ ದೂರು ದಾಖಲಿಸಲಾಗಿದೆ.
ಟಿಸಿಯಿಂದ ವಿದ್ಯುತ್ ಲೈನ್ ಎಳೆದುಕೊಂಡು ಬೋರ್ ಮೂಲಕ ತೋಟಕ್ಕೆ ನೀರಾಯಿಸ್ತಿದ್ರು. ಅದೇ ಟಿಸಿಯಿಂದ ಮತ್ತೊಂದು ಬೋರ್ ಗೆ ಕರೆಂಟ್ ಎಳೆದುಕೊಳ್ಳಲು ಯತ್ನ ನಡೆದಿತ್ತು. ಒಂದೇ ತೋಟದಲ್ಲಿ 2 ಬೋರ್ ಕಲ್ಲೇಶಪ್ಪ ತೆಗೆಸಿದ್ದರು. ಬೇಡ ಅಂದಾಗ ಮಾತಿಗೆ ಮಾತು ಬೆಳೆದು ಗಲಾಟೆ, ಕೊಲೆಯಲ್ಲಿ ಅಂತ್ಯಗೊಂಡಿದೆ.
ತೀವ್ರವಾಗಿ ಗಾಯಗೊಂಡಿದ್ದ ಕಲ್ಲೇಸಪ್ಪ ಅವರನ್ನು
ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆ ದಾಖಲಿಸಲಾಗಿತ್ತು. ಆದರೆ
ಚಿಕಿತ್ಸೆ ಫಲಕಾರಿಯಾಗದೆ ಕಲ್ಲೇಶಪ್ಪ ನಿನ್ನೆ ರಾತ್ರಿ ಸಾವನ್ನಪ್ಪಿದ್ದಾರೆ.
ಅನಂತಪುರ ಗ್ರಾಮದ ನಾಗರಾಜಪ್ಪ, ಲೋಹಿತ್ ಹಾಗೂ ಗಂಗಾಧರಪ್ಪ ಮೇಲೆ
ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.