4:35 AM Friday9 - May 2025
ಬ್ರೇಕಿಂಗ್ ನ್ಯೂಸ್
Vatican City | ನೂತನ ಪೋಪ್‌ ಆಗಿ ಅಮೆರಿಕದ ರಾಬರ್ಟ್ ಫ್ರಾನ್ಸಿಸ್‌ ಪ್ರಿವೊಸ್ಟ್‌… Indo- Pak | ಯುದ್ಧ ಕಾರ್ಮೋಡ: ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದಿಂದ ಭಾರತೀಯ ಸೇನೆಗೆ… ಮಾರಣಾಂತಿಕ ಹೀಮೋಫೀಲಿಯಾ ಬಾಧಿತ ಗರ್ಭಿಣಿ ಮಹಿಳೆಗೆ ಯಶಸ್ವೀ ಶಸ್ತ್ರಚಿಕಿತ್ಸೆ: ತಾಯಿ – ಮಗುವಿಗೆ… Airport | ಕಲಬುರಗಿ ವಿಮಾನ ನಿಲ್ದಾಣ: ಭದ್ರತಾ ತಪಾಸಣೆ; ನಿಗದಿತ ಸಮಯಕ್ಕೆ ಪ್ರಯಾಣಿಕರು… J&K | ಆಪರೇಶನ್ ಸಿಂಧೂರ್: ಕರ್ನಲ್ ಸೋಫಿಯಾ ಖುರೇಷಿ: ಕರ್ನಾಟಕದ ಸೊಸೆ ರೀ..!! Karnataka CM | ಮೈಶುಗರ್ ಕಾರ್ಖಾನೆಗೆ 50 ಕೋಟಿ ಕೊಟ್ಟಿದ್ದಷ್ಟೆ ಅಲ್ಲ, ವಿದ್ಯುತ್… ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಸ್ವಾಗತಿಸಿದ ಮಾಜಿ… ಬೆಂಗಳೂರು ಜ್ಞಾನಭಾರತಿ ವಿಶ್ವವಿದ್ಯಾಲಯದಲ್ಲಿ ರಿಜಿಸ್ಟ್ರಾರ್ ಹುದ್ದೆಗೆ 35 ಲಕ್ಷ ರೂ. ವಂಚನೆ: ಎಫ್… Doddaballapura | ಘಾಟಿ ಸುಬ್ರಹ್ಮಣ್ಯ ಕ್ಷೇತ್ರ: ಸರಳ ಸಾಮೂಹಿಕ ವಿವಾಹದಲ್ಲಿ 66 ಜೋಡಿಗಳಿಗೆ… Ex CM | ಸಿಂಧೂರ ಕಳೆದುಕೊಂಡ ಹೆಣ್ಣು ಮಕ್ಕಳ ಪ್ರತೀಕಾರ: ಮಾಜಿ ಮುಖ್ಯಮಂತ್ರಿ…

ಇತ್ತೀಚಿನ ಸುದ್ದಿ

ಕದ್ರಿ ಸಂಗೀತ ಸೌರಭ 2022 ಜೀವಮಾನ ಶ್ರೇಷ್ಠ ರಾಷ್ಟ್ರ ಪ್ರಶಸ್ತಿಗೆ ಸಂಗೀತ ವಿದ್ವಾನ್ ಎಂ. ನಾರಾಯಣ ಆಯ್ಜೆ

04/12/2022, 14:49

ಮಂಗಳೂರು(reporterkarnataka.com): ಡಾ. ಕದ್ರಿ ಗೋಪಾಲನಾಥ್ ಅಕಾಡೆಮಿ ಫಾರ್ ಆರ್ಟ್ಸ್ ಆಶ್ರಯದಲ್ಲಿ ಡಿಸೆಂಬರ್ 6ರಂದು ಪದ್ಮಶ್ರೀ ಡಾ. ಕದ್ರಿ ಗೋಪಾಲನಾಥ್ ಅವರ 73ನೇ ಜನುಮ ಜಯಂತಿಯ ಪ್ರಯುಕ್ತ
ಕದ್ರಿ ಸಂಗೀತ ಸೌರಭ 2022 ಹಮ್ಮಿಕೊಳ್ಳಲಾಗಿದ್ದು, ಈ ಬಾರಿಯ ಕದ್ರಿ ಸಂಗೀತ ಸೌರಭ ಜೀವಮಾನ ಶ್ರೇಷ್ಠ ರಾಷ್ಟ್ರ ಪ್ರಶಸ್ತಿಗೆ ಸಂಗೀತ ವಿದ್ವಾನ್ ಎಂ. ನಾರಾಯಣ ಅವರನ್ನು ಆಯ್ಕೆ ಮಾಡಲಾಗಿದೆ.

ಮೂಡಬಿದ್ರೆಯಲ್ಲಿ ಜನಿಸಿದ ಎಂ. ನಾರಾಯಣ ಅವರು ಒಬ್ಬ ಅಪ್ರತಿಮ ಕಲಾವಿದರು. ಪ್ರಸ್ತುತ ಸುರತ್ಕಲ್ ನ ಶ್ರೀಗಣೇಶ್ ಸಂಗೀತ ಮತ್ತು ನೃತ್ಯ ಕಲಾ ಶಾಲೆಯಲ್ಲಿ ಕಳೆದ 25 ವರ್ಷಗಳಿಂದ ಸಂಗೀತ ಪ್ರಾದ್ಯಾಪಕರಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಸಂಗೀತ ಶಿಕ್ಷಣವನ್ನು ನೀಡುತ್ತಿದ್ದಾರೆ.

ಓರ್ವ ಖ್ಯಾತ ಸಂಗೀತ ರಚನಕಾರರಾಗಿರುವ ಇವರು ನಾರಾಯಣದಾಸ ನಾಮಾಂಕಿತದಲ್ಲಿ ಈವರೆಗೆ ವಿವಿಧ ರಾಗ ತಾಳಗಳಲ್ಲಿ 25 ಜತಿ ಸ್ವರಗಳು, 75 ತಾಣ ವರ್ಣಗಳು, 4 ಸ್ವರ ಜತಿಗಳು, 200 ಕೃತಿಗಳು ಹಾಗು 15 ತಿಲ್ಲಾನಗಳನ್ನು ಕನ್ನಡ ತೆಲುಗು ಹಾಗೂ ಸಂಸ್ಕೃತದಲ್ಲಿ ರಚಿಸಿದ್ದಾರೆ.
ಅಂತೆಯೇ 72 ಮೇಳಕರ್ತ ರಾಗಗಳಲ್ಲೂ ಕೂಡ ಕೃತಿ ರಚನೆ ಮಾಡಿರುವ ಕರ್ನಾಟಕದ ಕೆಲವೇ ಕೆಲವು ರಚನಕಾರರಲ್ಲಿ ಇವರು ಒಬ್ಬರು.

ಅವರು ಶ್ರೀಮಹಾಗಣಪತಿಯ ಮೇಲೆ 47 ಕೃತಿಗಳ ರಚನೆ ಮಾಡಿದ್ದಾರೆ. ಅವರ ಅಪರಿಮಿತ ಸಾಧನೆಯನ್ನು ಗುರುತಿಸಿ ಡಾ. ಕದ್ರಿ ಗೋಪಾಲನಾಥ್ ಅಕಾಡೆಮಿ ಫಾರ್ ಆರ್ಟ್ಸ್ ವತಿಯಿಂದ ಕದ್ರಿ ಸಂಗೀತ ಸೌರಭ 2022 ರ ಜೀವಮಾನ ಶ್ರೇಷ್ಠ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಲಾಗುವುದು. ಪ್ರಶಸ್ತಿಯು 50,000 ರೂ‌ ನಗದು ಹಾಗೂ ಬೆಳ್ಳಿಯ ಫಲಕ ಹೊಂದಿದೆ.
ಡಿಸೆಂಬರ್ 6 2022 ರಂದು ಸಂಜೆ 530 ಕ್ಕೆ ಮಂಗಳೂರು ಉರ್ವ ಸ್ಟೋರ್ ಹತ್ತಿರ ಇರುವ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಇತ್ತೀಚಿನ ಸುದ್ದಿ

ಜಾಹೀರಾತು