9:11 PM Wednesday27 - November 2024
ಬ್ರೇಕಿಂಗ್ ನ್ಯೂಸ್
ಡಿ.8ರಂದು ಉರ್ವ ಪೊಂಪೈ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಹಬ್ಬ: ಬಿಷಪ್ ಡಾ. ಪೀಟರ್… ಕರ್ತವ್ಯಲೋಪ: ಚಿಕ್ಕಮಗಳೂರು ನಗರ ಠಾಣೆ ಇನ್ಸ್ ಪೆಕ್ಟರ್ ರೇಣುಕಾ ಪ್ರಸಾದ್ ಅಮಾನತು ರಾಜ್ಯ ಸರಕಾರದ ಜನಪರ ಕೆಲಸಕ್ಕೆ ಮತದಾರರ ಜೈ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್… ತೀರ್ಥಹಳ್ಳಿ ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ: ತನಿಖೆ ಆರಂಭ ಕಳೆದ ಬಾರಿ ಅರ್ಧಂಬರ್ಧ ಸುಣ್ಣಬಣ್ಣ ಕಂಡ ತುಂಗಾ ಕಮಾನು ಸೇತುವೆಗೆ ಈ ಬಾರಿ… ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಲ್ಲಿ ಕೋಲಾರ ಪ್ರಥಮ: ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ… ಚನ್ನಪಟ್ಟಣದಲ್ಲಿ ಸೋಲು: ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದು ಧೈರ್ಯ ತುಂಬಿದ ಕಾರ್ಯಕರ್ತ! ಮೂಡಿಗೆರೆ: ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸಂಪೂರ್ಣ ಭಸ್ಮ; ಬೀದಿಗೆ ಬಿದ್ದ ಬಡ ಕುಟುಂಬ ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳ ಉಪ ಚುನಾವಣೆ; ಕಾಂಗ್ರೆಸ್ ಭರ್ಜರಿ ಜಯ; ಕೇಸರಿ… ಸಂಡೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣಗೆ ಜಯ: ಬಿಜೆಪಿ ಮೈತ್ರಿಕೂಟಕ್ಕೆ ತೀವ್ರ ಮುಖಭಂಗ ​

ಇತ್ತೀಚಿನ ಸುದ್ದಿ

ಕದ್ರಿ ಹಿಂದೂ ರುದ್ರಭೂಮಿಗೆ 1 ಕೋಟಿ ವೆಚ್ಚದಲ್ಲಿ ತಡೆಗೋಡೆ ಕಾಮಗಾರಿ: ಶಾಸಕ ಕಾಮತ್‌ ಚಾಲನೆ

30/01/2023, 13:56

ಮಂಗಳೂರು(reporterkarnataka.com): ಮಂಗಳೂರು ಮಹಾನಗರಪಾಲಿಕೆಯ ಕದ್ರಿ ವಾರ್ಡಿನ ಕದ್ರಿ ಹಿಂದೂ ರುದ್ರಭೂಮಿಗೆ 1 ಕೋಟಿ ರೂ ವೆಚ್ಚದಲ್ಲಿ ತಡೆಗೋಡೆ ನಿರ್ಮಿಸುವ ಕಾಮಗಾರಿಗೆ ಶಾಸಕ ಡಿ. ವೇದವ್ಯಾಸ ಕಾಮತ್‌ ಚಾಲನೆ ನೀಡಿದರು.

ರುದ್ರಭೂಮಿಯ ಮೇಲ್ಭಾಗದಲ್ಲಿರುವ ಶ್ರೀ ಮಲರಾಯ ದೇವಸ್ಥಾನದ ದರೆ ಕುಸಿಯುವ ಆತಂಕವಿದ್ದು, ಅದನ್ನು ರಕ್ಷಿಸಲು ಈ ತಡೆಗೋಡೆ ನಿರ್ಮಾಣ ಮಾಡಲಾಗುತ್ತಿದೆ. ಈ ಕಾಮಗಾರಿ ಪೂರ್ಣಗೊಂಡ ಬಳಿಕ ಮಲರಾಯ ದೇವಸ್ಥಾನದ ಭೂಭಾಗ ಸುಭದ್ರವಾಗಲಿದ್ದು, ರುದ್ರಭೂಮಿಯ ಜಾಗವೂ ಸುರಕ್ಷಿತವಾಗಲಿದೆ ಎಂದು ಶಾಸಕರು ಈ ಸಂದರ್ಭದಲ್ಲಿ ಹೇಳಿದರು.
ಈ ಸಂದರ್ಭದಲ್ಲಿ ಮಂಗಳೂರು ಮೇಯರ್ ಜಯಾನಂದ ಅಂಚನ್, ಉಪಮೇಯರ್ ಪೂರ್ಣಿಮಾ, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶಕಿಲಾ ಕಾವಾ, ಕಿಶೋರ್ ಕೊಟ್ಟಾರಿ, ಸ್ಥಳೀಯ ಕಾರ್ಪೋರೇಟರ್ ಕದ್ರಿ ಮನೋಹರ್ ಶೆಟ್ಟಿ, ಪ್ರಮುಖರಾದ ಎ.ಜೆ. ಶೆಟ್ಟಿ, ಎಚ್.ಕೆ. ಪುರುಷೋತ್ತಮ, ರಾಜೇಶ್, ಮನೋಹರ್ ಸುವರ್ಣ, ರವೀಂದ್ರನಾಥ್ ಶೆಟ್ಟಿ, ತಾರಾನಾಥ್ ಶೆಟ್ಟಿ, ದಿನೇಶ್ ದೇವಾಡಿಗ, ನಿರಂಜನ್ ಸಾಲ್ಯಾನ್, ವೆಂಕಟೇಶ್, ಸುರೇಶ್ ದೇವಾಡಿಗ ಕಂಬ್ಳ, ವಸಂತ್ ಜೆ ಪೂಜಾರಿ, ನಾಗೇಶ್ ಕದ್ರಿ, ಗಾಡ್ವಿನ್, ವಸಂತ್, ಮಹೇಶ್ ಪಾಂಡ್ಯ, ಹೇಮಚಂದ್ರ, ರಾಘವೇಂದ್ರ, ಭರತ್, ನರೇಶ್ ರಾವ್, ಪ್ರದೀಪ್ ಆಚಾರ್ಯ, ಹರೀಶ್ ರಾವ್, ರವಿ ಕೀರ್ತಿ, ಅನಿಲ್ ಕದ್ರಿ, ಸಚಿನ್ ಕದ್ರಿ, ಸಹನ್ ಕದ್ರಿ, ಜಗದೀಶ್ ಕದ್ರಿ, ಅವಿನಾಶ್ ರೈ, ಕುಶಾಲ್ ನಾಥ್ ಶೆಟ್ಟಿ, ನಾಥು ಜೋಗಿ ಮುಂತಾದವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು