ಇತ್ತೀಚಿನ ಸುದ್ದಿ
ಕಡೂರು: ಮಳೆ ಇಲ್ಲದೆ ಈರುಳ್ಳಿ ಬೆಳೆ ನಾಶ; ಸಾಲಬಾಧೆ ತಾಳಲಾಗದೆ ರೈತ ನೇಣಿಗೆ ಶರಣು
31/08/2023, 11:03

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka.com
ಕಡೂರು ತಾಲೂಕಿನ ಗಿರಿಯಾಪುರ ಗ್ರಾಮದಲ್ಲಿ ಕೃಷಿಕರೊಬ್ಬರು ಸಾಲದ ಬಾಧೆ ತಾಳಲಾಗದೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸತೀಶ್ (48) ಆತ್ಮಹತ್ಯೆಗೆ ಶರಣಾದ ರೈತ ಎಂದು ತಿಳಿದು ಬಂದಿದೆ.
ಈರುಳ್ಳಿ ಬೆಳೆ ನಾಶವಾಗಿ ಸಾಲಬಾಧೆ ತಾಳಲಾಗದೆ ಸತೀಶ್ ಅವರು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಳೆ ಕೊರತೆಯಿಂದ ಈರುಳ್ಳಿ ಬೆಲೆ ಸಂಪೂರ್ಣ ನಾಶವಾಗಿತ್ತು. ಇದರಿಂದ ಮನನೊಂದ ಸತೀಶ್ ಅವರು ಹುಣಸೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಅವರು ಸಹಕಾರ ಸಂಘದಲ್ಲಿ 1.30 ಲಕ್ಷ ಹಾಗೂ ತಾಯಿ ಹೆಸರಲ್ಲಿ 1 ಲಕ್ಷ ಸಾಲ ಪಡೆದಿದ್ದರು. ಈರುಳ್ಳಿ ಬೆಳೆಗಾಗಿ ಕೈ ಸಾಲವನ್ನೂ ಮಾಡಿದ್ದರು ಎಂದು ತಿಳಿದು ಬಂದಿದೆ.
ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.