ಇತ್ತೀಚಿನ ಸುದ್ದಿ
ಕಡೂರು: ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಮಹಿಳೆಯ ಶವ ಪತ್ತೆ: ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಗೆ ಮೃತರ ಸಂಖ್ಯೆ 3ಕ್ಕೇರಿಕೆ
26/07/2023, 21:16

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಜಿಲ್ಲೆಯ ಕಡೂರು ತಾಲೂಕಿನಲ್ಲಿ ಅಡಿಕೆ ತೋಟಕ್ಕೆ ತೆರಳಿದ್ದ ವೃದ್ಧೆಯೊಬ್ಬರು ಹಳ್ಳದಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಮಳೆಗೆ ಒಟ್ಟು ಮೂವರು ಬಲಿಯಾಗಿದ್ದಾರೆ.ಸಖರಾಯಪಟ್ಟಣ ಸಮೀಪದ ಹೊಸ ಸಿದ್ರಳ್ಳಿ ಗ್ರಾಮದ ರೇವಮ್ಮ (62) ಸಾವನ್ನಪ್ಪಿದ ಮಹಿಳೆ. ತೋಟಕ್ಕೆ ತೆರಳಿದ್ದ ಅವರು ಮಂಗಳವಾರ ಸಂಜೆ ಹಳ್ಳದಲ್ಲಿ ಕೊಚ್ಚಿ ಹೋಗಿದ್ದರು.
ಇಂದು ಅವರ ಮೃತದೇಹ ತಾಯಹಳ್ಳದಲ್ಲಿ
ದೊರೆತಿದೆ. ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆ ಹಳ್ಳ- ಕೊಳ್ಳ, ನದಿ ಎಲ್ಲ
ತುಂಬಿ ಹರಿಯುತ್ತಿದೆ.