ಇತ್ತೀಚಿನ ಸುದ್ದಿ
ಕಡಲನಗರಿಯಲ್ಲಿ ಸ್ಟ್ರೀಟ್ ಫುಡ್ ಫೆಸ್ಟಿವಲ್ ಗೆ ಭಾರಿ ಜನಸಾಗರ: ಸ್ಟಾಲ್ ಗಳಿಗೆ ಮುಗಿಬಿದ್ದ ಜನರು; ಟ್ರಾಫಿಕ್ ಜಾಮ್ ಕಿರಿಕಿರಿ
24/03/2023, 00:05
ಮಂಗಳೂರು(reporterkarnataka.com):
ಕಡಲನಗರಿ ಮಂಗಳೂರಿನಲ್ಲಿ ಹೊಸ ಪರಿಕಲ್ಪನೆಯೊಂದಿಗೆ ಆರಂಭಿಸಿದ ಪ್ರಥಮ ಸ್ಟ್ರೀಟ್ ಫುಡ್ ಫೆಸ್ಟಿವಲ್ ಗೆ ಭರ್ಜರಿ ಪ್ರತಿಕ್ರಿಯೆ ದೊರಕಿದ್ದು, ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದಾರೆ. ಜನಸಾಗರದಿಂದ ಟ್ರಾಫಿಕ್ ಜಾಮ್ ಉಂಟಾಯಿತು.
ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುತ್ತಿರುವ ಪ್ರಥಮ ರಸ್ತೆ ಬದಿ ಆಹಾರ ಉತ್ಸವಕ್ಕೆ ಎರಡನೇ ದಿನವಾದ ಇಂದು ಕೂಡ ಭಾರಿ ಸಂಖ್ಯೆ ಯಲ್ಲಿ ಜನರು ಹರಿದು ಬಂದಿದ್ದಾರೆ.
ಆಹಾರ ಉತ್ಸವ ಮಾರ್ಚ್ 26ರವರೆಗೆ ನಡೆಯಲಿದೆ. ಮಂಗಳೂರ ಕರಾವಳಿ ಉತ್ಸವ ಮೈದಾನದಿಂದ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದ ಮುಖಾಂತರ ಮಣ್ಣಗುಡ್ಡೆ ಗುರ್ಜಿ ವೃತ್ತದವರೆಗೆ ಸ್ಟಾಲ್ ಹಾಕಲಾಗಿದೆ. ಸುಮಾರು 150 ಸ್ಟಾಲ್ ಗಳನ್ನು ತೆರೆಯಲಾಗಿದೆ. ಕರಾವಳಿ, ಬಂಗಾಳಿ, ಗುಜರಾತಿ ಸೇರಿದಂತೆ ಉತ್ತರ ಭಾರತದ ಶೈಲಿಯ ಖಾದ್ಯಗಳು ಇಲ್ಲಿ ಲಭ್ಯವಿದೆ. ಫುಡ್‌ಫೆಸ್ಟಿವಲ್‌ನಲ್ಲಿ ಪುಟ್ಟ ಮಕ್ಕಳಿಂದ ಆರಂಭಗೊಂಡು ವೃದ್ಧರ ವರೆಗೆ ಭಾಗವಹಿಸುತ್ತಿದ್ದಾರೆ














