ಇತ್ತೀಚಿನ ಸುದ್ದಿ
ಕಡಲನಗರಿಗೆ ಪ್ರಧಾನಿ: ಅತ್ತಾವರ ವಾರ್ಡ್ ನಿಂದ 1500ಕ್ಕೂ ಹೆಚ್ಚು ಕಾರ್ಯಕರ್ತರು ಭಾಗಿ: ಶಾಸಕ ವೇದವ್ಯಾಸ ಕಾಮತ್
27/08/2022, 20:15

ಮಂಗಳೂರು(reporterkarnataka.com): ಪ್ರಧಾನಿ ನರೇಂದ್ರ ಮೋದಿ ಮಂಗಳೂರು ಆಗಮನದ ಹಿನ್ನೆಲೆಯಲ್ಲಿ ಶಾಸಕ ವೇದವ್ಯಾಸ್ ಕಾಮತ್ ಅವರು ಬಿಜೆಪಿ ಅತ್ತಾವರ ವಾರ್ಡಿನ ಕಾರ್ಯಕರ್ತರ ಸಭೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕಾಮತ್, ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಲಕ್ಷಾಂತರ ಜನರ ಭಾಗವಹಿಸಲಿದ್ದಾರೆ. ಪ್ರಪಂಚದ ಅಗ್ರ ನಾಯಕರಲ್ಲೊಬ್ಬರಾದ ನಮ್ಮ ಪ್ರಧಾನ ಮಂತ್ರಿಯವರನ್ನು ಅದ್ಧೂರಿಯಾಗಿ ಸ್ನಾಗತಿಸಲು ಕಾರ್ಯಕರ್ತರು ಸಜ್ಜಾಗಬೇಕು ಎಂದು ಹೇಳಿದ್ದಾರೆ.
ಅತ್ತಾವರ ವಾರ್ಡಿನಿಂದ ಒಂದುವರೆ ಸಾವಿರಕ್ಕೂ ಅಧಿಕ ಕಾರ್ಯಕರ್ತರು ಭಾಗವಹಿಸುತ್ತಿದ್ದು ಪ್ರತಿ ವಾರ್ಡಿನಿಂದ ಒಂದೆರಡು ಸಾವಿರ ಜನರು ಆಗಮಿಸಲಿದ್ದಾರೆ ಎಂದು ಹೇಳಿದ್ದಾರೆ.
ಸ್ಥಳೀಯ ಕಾರ್ಪೊರೇಟರ್ ಶೈಲೇಶ್ ಬಿ ಶೆಟ್ಟಿ, ಮಂಡಲದ ಎಸ್ಸಿ ಮೋರ್ಚಾದ ಅಧ್ಯಕ್ಷರಾದ ರಘುವೀರ್ ಬಾಬು ಗುಡ್ಡೆ, ಮಂಡಲದ ಮಹಿಳಾ ಮೋರ್ಚಾದ ಪದಾಧಿಕಾರಿಗಳಾದ ರೂಪ ಕೆಎಸ್, ಲಲಿತಾ, ಶಕ್ತಿ ಪ್ರಮುಖರಾದ ಪುಷ್ಪರಾಜ್ ಶೆಟ್ಟಿ ಹಾಗೂ ಧರ್ಮೇಂದ್ರ ಅಮೀನ್, ವಾರ್ಡ್ ಕಮಿಟಿ ಸದಸ್ಯರು, ಬೂತ್, ಅಧ್ಯಕ್ಷರುಗಳಾದ ಪ್ರಮೋದ್ ಕೊಟ್ಟಾರಿ, ಜನಾರ್ಧನ್, ಧನಂಜಯ್, ಬಿಂದಿಯಾ, ಅರ್ಚನಾ ರೈ, ಕಾರ್ಯದರ್ಶಿಗಳು, ಹಿರಿಯ ಹಾಗೂ ಪ್ರಮುಖ ಕಾರ್ಯಕರ್ತರಾದ ನಾರಾಯಣಶೆಟ್ಟಿ, ರಾಜಗೋಪಾಲ್, ಗಣೇಶ್ ಕೊಟ್ಟಾರಿ, ಗಣೇಶ್ ಕುಲಾಲ್, ನವೀನ್ ವಾಸ್, ವಾಸುದೇವ ಶ್ರೀಯಾನ್, ಲೋಲಾಕ್ಷಿ, ಅನಿತಾ, ನವೀನ್ ಶೆಟ್ಟಿ, ಸತೀಶ್, ಆಕಾಶ್, ಹಿತೈಷಿಗಳು, ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.