ಇತ್ತೀಚಿನ ಸುದ್ದಿ
ಕಡಲನಗರಿಯಲ್ಲಿ ಟ್ರಾಫಿಕ್ ಮತ್ತು ಡ್ರಗ್ಸ್ ಜಾಗೃತಿ ಅಭಿಯಾನ: ಖಾಕಿ ಜತೆ ಸಂತ ಅಲೋಶಿಯಸ್ ವಿದ್ಯಾರ್ಥಿಗಳ ಸಾಥ್
13/12/2023, 17:14

ಮಂಗಳೂರು(reporterkarnataka.com): ನಗರದ ಕದ್ರಿ ಠಾಣಾ ಇನ್ಸ್ಪೆಕ್ಟರ್ ಗೋಪಾಲ್ ಕೃಷ್ಣ ಭಟ್ ಹಾಗೂ ಸಿಬ್ಬಂದಿ ನೇತೃತ್ವದಲ್ಲಿ ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ಟ್ರಾಫಿಕ್ ಮತ್ತು ಡ್ರಗ್ಸ್ ಜಾಗೃತಿ ಅಭಿಯಾನ ನಗರದ ಆಯಕಟ್ಟಿ ಸ್ಥಳಗಳಲ್ಲಿ ಬುಧವಾರ ನಡೆಯಿತು.
ಅಪಘಾತದಿಂದ ಜೀವ ರಕ್ಷಣೆ, ಸಂಚಾರಿ ನಿಯಮ ಪಾಲನೆ ಕುರಿತು ವಿನೂತನ ಪ್ರಯತ್ನ ಇದಾಗಿತ್ತು. ನಗರದ ಕಂಕನಾಡಿ ಜಂಕ್ಷನ್, ಬಂಟ್ಸ್ ಹಾಸ್ಟೆಲ್, ಅಂಬೇಡ್ಕರ್ ಸರ್ಕಲ್ ಮುಂತಾದ ಕಡೆಗಳಲ್ಲಿ ವಿದ್ಯಾರ್ಥಿಗಳು ಪ್ಲೇ ಕಾರ್ಡ್ ಹಿಡಿದು ಪ್ರದರ್ಶನ ನಡೆಸಿದರು.
ಮೈ ಶೋ, ಸ್ಕಿಟ್ ಮೂಲಕ ಮಧ್ಯಾಹ್ನ 2.30ರಿಂದ 4.00 ಗಂಟೆಯ ಬ್ಯುಸಿ ಸಮಯದಲ್ಲಿ ಟ್ರಾಫಿಕ್ ನಿರ್ವಹಣೆ ಜತೆಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಾಯಿತು. ಜನರ ಜೀವದ ಮಹತ್ವ ಬಗ್ಗೆ ಸಣ್ಣ ಸ್ಕಿಟ್ ಅನ್ನು ಪ್ರದರ್ಶಿಸುವ ಮೂಲಕ ಪ್ರಯಾಣಿಕರಿಗೆ ಮನದಟ್ಟು ಮಾಡುವ ಪ್ರಯತ್ನ ನಡೆಯಿತು.