ಇತ್ತೀಚಿನ ಸುದ್ದಿ
ಕಡಲನಗರಿಯಲ್ಲಿ ಸಂಕ್ರಾಂತಿ ಕಾವ್ಯಧಾರೆ ಸಾಹಿತ್ಯ ಗೋಷ್ಠಿ; ಕೃತಿ ಲೋಕಾರ್ಪಣೆ
15/01/2024, 15:35
ಮಂಗಳೂರು(reporterkarnataka.com): ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ವತಿಯಿಂದ ತೊಕ್ಕೊಟ್ಟು ಸಮೀಪದ ಕಲ್ಲಾಪುವಿನಲ್ಲಿರುವ ಯುನಿಟಿ ಮಿನಿ ಹಾಲ್ ನಲ್ಲಿ ಸಂಕ್ರಾಂತಿ ಕಾವ್ಯಧಾರೆ ಸಾಹಿತ್ಯ ಗೋಷ್ಠಿ ಮತ್ತು ಕಡಲಹನಿ ಒಡಲ ಧ್ವನಿ ( ರತ್ನಾ ಭಟ್ ,ಹಾ .ಮ ಸತೀಶ, ಡಾ ಸುರೇಶ್ ನೆಗಳಗುಳಿ) ಗಜಲ್ ಸಂಕಲನದ ಲೋಕಾರ್ಪಣಾ ಸಮಾರಂಭ ನಡೆಯಿತು.
ಇದೇ ವೇಳೆ ಇತ್ತೀಚೆಗೆ ದಿವಂಗತರಾದ ಸಾಹಿತಿ ಅಮೃತ ಸೋಮೇಶ್ವರರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು. ಸಮಾರಂಭದ ಉದ್ಘಾಟನೆ ಯನ್ನು ಕೊಟ್ರೇಶ ಉಪ್ಪಾರ ( ಕೇ.ಕ.ಸಾ.ವೇ ಸ್ಥಾಪಕಾಧ್ಯಕ್ಷರು ಬೆಂಗಳೂರು) ಹಾಗೂ ಖ್ಯಾತ ಗಜಲ್ ಕವಿ ಮಹಮ್ಮದ್ ಬಡ್ಡೂರು ಇವರು ಪುಸ್ತಕ ಅರಳಿಸುವ ಮುಖಾಂತರ ಹಾಗೂ ಕಡಲಹನಿ ಒಡಲಧ್ವನಿ ಗಜಲ್ ಪುಸ್ತಕ ಲೋಕಾರ್ಪಣೆ ಸಹಿತವಾಗಿ ಮಾಡಿದರು.
ಕೊಟ್ರೇಶ ಉಪ್ಪಾರರು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಧ್ಯೇಯೋದ್ದೇಶ ಹಾಗೂ ಜಿಲ್ಲಾವಾರು ಶಾಖೆಗಳ ಸುಗಮ ಕಾರ್ಯಕ್ರಮಗಳನ್ನು ಶ್ಲಾಘಿಸಿದರು.
ಮಹಮ್ಮದ್ ಬಡ್ಡೂರರು ಪುಸ್ತಕ ಲೋಕಾರ್ಪಣೆ ಗೈಯುತ್ತಾ ಕತೃಗಳಾದ ರತ್ನಾ ಭಟ್, ಹಾ.ಮ ಸತೀಶ ಮತ್ತು ಡಾ ಸುರೇಶ ನೆಗಳಗುಳಿಯವರ ಬರೆಹಗಳ ಬಗ್ಗೆ ಶ್ಲಾಘಿಸುತ್ತಾ ಗಜಲ್ ಹಾಗೂ ಇತರ ಕಾವ್ಯ ರಚನೆಯ ಸೂಕ್ಷ್ಮಗಳನ್ನು ವಿಶ್ಲೇಷಿಸಿದರು.
ಮತ್ತೋರ್ವ ಮುಖ್ಯ ಅತಿಥಿಗಳಾಗಿದ್ದ ಇರಾ ನೇಮು ಪೂಜಾರಿಯವರು ಹಲವಾರು ಸಂಘಟನೆಗಳು ಕನ್ನಡದ ಶ್ರೇಯಸ್ಸಿಗಾಗಿ ದುಡಿಯುವುದು ಶ್ಲಾಘನೀಯ ಎಂದರು.
ಆಶಯ ಭಾಷಣ ಮಾಡುತ್ತಾ ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ವಾಸು ಸಮುದ್ರವಲ್ಲಿಯವರು ಕನ್ನಡ ಭಾಷೆಯ ಬೆಳವಣಿಗೆಗೆ ಇಂತಹ ಕಾರ್ಯಕ್ರಮಗಳು ಪ್ರೇರಕ ಎಂದು ನುಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವೇದಿಕೆಯ ಅಧ್ಯಕ್ಷ ಡಾ ಸುರೇಶ ನೆಗಳಗುಳಿಯವರು ಹಲವರ ಸಹಕಾರ ಕನ್ನಡ ಪ್ರೇಮ ಇದ್ದಾಗ ಇಂತಹ ಸಮಾರಂಭ ಯಶಸ್ಸು ಕಾಣುತ್ತದೆ ಎಂದರು.
ಉಡುಪಿಯ ಗಿರಿಜಾ ಎಂಟರ್ ಪ್ರೈಸಸ್ ನ ಶ್ರೀನಾಥ್ ,
ಚಾಲನಾ ಕವಿ ವೆಂಕಟ್ ಭಟ್ ಎಡನೀರು, ಕವಿಗೋಷ್ಠಿ ಅಧ್ಯಕ್ಷೆ ರತ್ನಾ ಕೆ ಭಟ್, ರಾಣಿ ಪುಷ್ಪಲತಾ ದೇವಿ, ಗಂಗಾಧರ ಗಾಂಧಿ, ರಘು ಇಡ್ಕಿದು ಉಪಸ್ಥಿತರಿದ್ದರು.
ರಶ್ಮಿ ಸನಿಲ್ ನಿರೂಪಣೆ, ರೇಖಾ ಸುದೇಶ ರಾವ್ ಸ್ವರಚಿತ ಪ್ರಾರ್ಥನಾ ಗೀತೆ , ರೇಮಂಡ್ ಡಿ ಕುನ್ಹಾ ಸ್ವಾಗತ ಹಾಗೂ ಮನ್ಸೂರ್ ಮುಲ್ಕಿ ಸಹಿತವಾಗಿ ಊರ ಪರ ಊರ ಮೂವತ್ತು ಕವಿಗಳು ಸ್ವರಚಿತ ಕಥೆ ಕವನ ಚುಟುಕು ಗಜಲ್ ಗಳನ್ನು ವಾಚಿಸಿದರು.
ಇದೇ ವೇಳೆ ವಿಶ್ರಾಂತ ಶಿಕ್ಷಕಿ ರತ್ನಾ ಕೆ. ಭಟ್ ಅವರನ್ನು ಹಾರ, ಪೇಟ,ಶಾಲು ಸಹಿತವಾಗಿ ರತ್ನ ಪ್ರಕಾಶ ಎಂಬ ಪ್ರಶಸ್ತಿ ಫಲಕ ಸಹಿತವಾಗಿ ಸನ್ಮಾನಿಸಲಾಯಿತು.
ಕವಿಗೋಷ್ಢಿಯ ಅಧ್ಯಕ್ಷ ಭಾಷಣ ಮಾಡುತ್ತಾ ಅವರು ತನ್ನ ಭಾಷಾ ಪ್ರೇಮ ಹಾಗೂ ಅದರಿಂದ ಸಿಗುವ ತೃಪ್ತಿಯನ್ನು ನೆನಪಿಸುತ್ತಾ ಎಲ್ಲಾ ಕವಿಗಳ ಕವನದ ಬಗ್ಗೆ ಮಾತನಾಡಿದರು.
ಕವಿಗಳಾದ ವೆಂಕಟ್ ಭಟ್ ಎಡನೀರ್ ( ಚಾಲನೆ) ಶ್ಯಾಮ ಪ್ರಸಾದ್ ಭಟ್ ಕಾರ್ಕಳ , ವಿಘ್ನೇಶ್ ಭಿಡೆ , ಜಯಾನಂದ ಪೆರಾಜೆ, ಎನ್. ಗಣೇಶ್ ಪ್ರಸಾದ್ ಕೊಳಚಪ್ಪು, ಸತ್ಯವತಿ ಭಟ್, ಗೋಪಾಲಕೃಷ್ಣ ಶಾಸ್ತ್ರಿ ಸೌಮ್ಯಾ ಗೋಪಾಲ್ , ಕೊಳ್ಚಪ್ಪೆ ಗೋವಿಂದ ಭಟ್ , ಅನಾರ್ಕಲಿ ಸಲೀಮ್ , ಉಮೇಶ್ ಶಿರಿಯಾ , ವೆಂಕಟೇಶ ಗಟ್ಟಿ , ಅನುರಾಧಾ ರಾಜೀವ್ ಸುರತ್ಕಲ್ . ಮನ್ಸೂರ್ ಮುಲ್ಕಿ, ಜೂಲಿಯೆಟ್ ಫೆರ್ನಾಂಡಿಸ್ , ರೇಮಂಡ್ ಡಿಕುನ್ಹಾ ತಾಕೊಡೆ, ಪ್ರಶಾಂತ್ ಕಡ್ಯ , ಶಿವಪ್ರಸಾದ್ ಕೊಕ್ಕಡ , ರೇಖಾ ಸುದೇಶ್ ರಾವ್ ರಶ್ಮಿ ಸನಿಲ್, ರಾಣಿ ಪುಷ್ಪಲತಾ ದೇವಿ, ಡಾ. ಸುರೇಶ ನೆಗಳಗುಳಿ ಮುಂತಾದವರು ಬಹು ಭಾಷಾ ಕತೆ,ಕವನಾದಿ ವಾಚನ ಮಾಡಿದರು.