ಇತ್ತೀಚಿನ ಸುದ್ದಿ
ಕಡಲನಗರಿಯಲ್ಲಿ ಮತ್ತೆ ತಲೆ ಎತ್ತಿದ ಗ್ಯಾಂಗ್ ವಾರ್; ಮಾರಕಾಸ್ತ್ರದಿಂದ ದಾಳಿ; ಓರ್ವ ಗಂಭೀರ
30/11/2021, 13:55
ಮಂಗಳೂರು(reporterkarnataka.com): ಕಡಲನಗರಿಯಲ್ಲಿ ಮತ್ತೆ ಗ್ಯಾಂಗ್ ವಾರ್ ತಲೆ ಎತ್ತಿದೆ. ಹಳೆಯ ಕೊಲೆಯೊಂದರ ವೈಷಮ್ಯದ ಹಿನ್ನೆಲೆಯಲ್ಲಿ ನಗರದಲ್ಲಿ ಮತ್ತೆ ರೌಡಿಗಳ ಗ್ಯಾಂಗ್ ವಾರ್ ನಡೆದಿದೆ. ಓರ್ವ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಾರಕಾಸ್ತ್ರಗಳಿಂದ ತಂಡವೊಂದು ದಾಳಿ ನಡೆಸಿದ ಪರಿಣಾಮ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ದಾಳಿಗೊಳಗಾದ ಯುವಕನನ್ನು ಶ್ರವಣ್ ಎಂದು ಗುರುತಿಸಲಾಗಿದೆ.
ಅಳಕೆ ಗ್ಯಾಂಗ್ ತಂಡದ 8 ಮಂದಿ ಶ್ರವಣ್ ಮೇಲೆ ಮಾರಕಾಯುಧದಿಂದ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಗಂಭೀರ ಗಾಯಗೊಂಡ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವಕನ ಪರಿಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.
2020ರಲ್ಲಿ ಬರ್ಕೆಯಲ್ಲಿ ನಡೆದ ಇಂದ್ರಜಿತ್ ಕೊಲೆ ಪ್ರಕರಣ ನಡೆದಿತ್ತು. ಗಾಯಗೊಂಡ ಶ್ರವಣ್ ಇಂದ್ರಜಿತ್ ಕೊಲೆ ಪ್ರಕರಣದ ಇಬ್ಬರು ಆರೋಪಿಗಳ ಸಹೋದರ. ಇಂದ್ರಜಿತ್ ಕೊಲೆಗೆ ಪ್ರತೀಕಾರವಾಗಿ ಈ ಕೊಲೆಯತ್ನ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.