6:43 AM Wednesday3 - December 2025
ಬ್ರೇಕಿಂಗ್ ನ್ಯೂಸ್
ಹುಣಸೂರು: ಜನರಿಗೆ ಹೆದರಿ ತಾಯಿ ಹುಲಿಯಿಂದ ಬೇರ್ಪಟ್ಟ 4 ಮರಿ ಹುಲಿಗಳು ಮತ್ತೆ… Shivamogga | ತೀರ್ಥಹಳ್ಳಿ: ಸ್ಕೂಟಿ – ಕಾರು ನಡುವೆ ಅಪಘಾತ; ಮಹಿಳೆಗೆ ಗಾಯ ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ…

ಇತ್ತೀಚಿನ ಸುದ್ದಿ

ಕಚ್ಚೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಮಹಾಸಭೆ: ಶೇ.20 ಡಿವಿಡೆಂಡ್ ಘೋಷಣೆ

20/09/2023, 15:42

ಮಂಗಳೂರು(reporterkarnataka.com): ಕಚ್ಚೂರು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 2022-23ನೇ ಸಾಲಿನ ವಾರ್ಷಿಕ ಮಹಾಸಭೆಯ ನಗರದ ಬೆಂದೂರಿನಲ್ಲಿರುವ ಸೆಬಾಸ್ಟಿಯನ್ ಕಮ್ಯೂನಿಟಿ ಹಾಲ್ ನಲ್ಲಿ ಜರುಗಿತು.
ಸೊಸೈಟಿಯ ಅಧ್ಯಕ್ಷರಾದ ಚಂದ್ರಶೇಖರ್ ಕೆ. ಸದಸ್ಯರನ್ನು ಸ್ವಾಗತಿಸಿದರು. 2022-23ನೇ ಸಾಲಿನ ವಾರ್ಷಿಕ ವರದಿಯನ್ನು ಹಾಗೂ ಲೆಕ್ಕಪತ್ರ ಹಾಗೂ ಬಜೆಟನ್ನು ಪ್ರಧಾನ ವ್ಯವಸ್ಥಾಪಕರಾದ ಪದ್ಮನಾಭ ಎಂ. ಮಂಡಿಸಿದರು, ನೋಟಿಸನ್ನು ನಿರ್ದೇಶಕರಾದ ಅಶೋಕ್ ಜಿ., ಲಾಭ ವಿಂಗಡಣೆಯನ್ನು ಭಾಸ್ಕರ್
ಕೆ. ಅಡ್ವಕೇಟ್, ಹಿಂದಿನ ಮಹಾಸಭೆಯ ನಿರ್ಣಯವನ್ನು ದಿವಾಕರ ಶಂಭೂರು, 2023-24 ರ ಕಾರ್ಯ ಚಟುವಟಿಕೆಯನ್ನು ಹರೀಶ್
ಪಿ. ಭಂಡಾರಿ ಸಭೆಗೆ ಮಂಡಿಸಿದ ಮೇರೆಗೆ ದಾಖಲಿಸಲ್ಪಟ್ಟವು. ಸೊಸೈಟಿಯ ಬೈಲಾಕ್ಕೆ ಸಂಬಂಧಪಟ್ಟಂತೆ ತಿದ್ದುಪಡಿಯ ವಿವರವನ್ನು ನಿರ್ದೇಶಕರಾರ ಕುಮಾರ್ ಭಂಡಾರಿ ಸಭೆಗೆ ಮಂಡಿಸಿದ ಮೇರೆಗೆ ಅಂಗೀಕರಿಸಲಾಯಿತು. ತಿದ್ದುಪಡಿಯ ಪ್ರಕಾರ ಹಾಲಿ ಕಾರ್ಯಕ್ಷೇತ್ರವನ್ನು ವಿಸ್ತರಿಸಿ ದ.ಕ. ಹಾಗೂ ಉಡುಪಿ ಜಿಲ್ಲೆಯ ಜೊತೆಗೆ ಚಿಕ್ಕಮಗಳೂರು, ಶಿವಮೊಗ್ಗ, ಬೆಂಗಳೂರು ನಗರ ವ್ಯಾಪ್ತಿಗೆ ವಿಸ್ತರಿಸಿ ಅನುಮೋದನೆಗೆ ಸರ್ಕಾರವನ್ನು ಕೋರಲು ತೀರ್ಮಾನಿಸಲಾಯಿತು. ಸೊಸೈಟಿಯು ಪ್ರತಿ ವರ್ಷ ಲಾಭಗಳಿಕೆ, ಸರ್ಕಾರದ ಆಡಿಟ್ ವರ್ಗಿಕರಣದಲ್ಲಿ “ಎ” ವರ್ಗ ಸತತ ಪಡೆದ ಸಾಧನೆ ಮಾಡಿರುವುದರ ಜೊತೆಗೆ ಕಳೆದ 3 ವರ್ಷಗಳಿಂದ ಎಸ್.ಸಿ.ಡಿ.ಸಿ.ಸಿ ಬ್ಯಾಂಕಿನ “ಸಾಧನ ಪ್ರಶಸ್ತಿ” ಪಡೆದಿರುವುದಲ್ಲದೆ ಮಂಗಳೂರು, ಉಡುಪಿ, ಸುರತ್ಕಲ್, ಬಂಟ್ವಾಳ ಇಲ್ಲಿನ ಎಲ್ಲಾ ಶಾಖೆಗಳು ಲಾಭ ಗಳಿಸಿರುವುದರೊಂದಿಗೆ ಎಲ್ಲಾ ಶಾಖೆಗಳು ಕಂಪ್ಯೂಟರೀಕೃತ ಲೆಕ್ಕಪತ್ರ ಅಳವಡಿಸಲಾಗಿರುತ್ತದೆ. ಸೊಸೈಟಿಯ ಅಭಿವೃದ್ಧಿ ಹಾಗೆಯೇ ಎಸ್.ಸಿ.ಡಿ.ಸಿ.ಸಿ ಬ್ಯಾಂಕಿನ “ಸಾಧನ ಪ್ರಶಸ್ತಿ” ಪಡೆದಿರುದನ್ನು ಹಾಗೂ ಸೊಸೈಟಿಯ ಉತ್ತಮ ಅಭಿವೃದ್ಧಿಯ ಬಗ್ಗೆ ಮಹಾಸಭೆಯಲ್ಲಿ ಸದಸ್ಯರು ಪ್ರಶಂಸಿದರು. ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿಯಲ್ಲಿ ಅಧಿಕ ಅಂಕ ಪಡೆದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು. ಲಾಭವನ್ನು ವಿಂಗಡಿಸಿ ಶೇ 20% ಡಿವಿಡೆಂಡ್ ಘೋಷಿಸಲಾಯಿತು. ಸಭೆಯಲ್ಲಿ ನಿರ್ದೇಶಕರಾದ ರಘುವೀರ ಭಂಡಾರಿ, ಭಾಸ್ಕರ ಭಂಡಾರಿ ಸುರತ್ಕಲ್, ಸುಂದರ ಭಂಡಾರಿ ರಾಯಿ, ರಾಜಾ ಬಂಟ್ವಾಳ, ರವೀಂದ್ರನಾಥ್ ಉಳ್ಳಾಲ, ಬಿ.ಎಸ್.ಭಂಡಾರಿ, ಶೇಖರ್.ಎಚ್. ಉಪಸ್ಥಿತರಿದ್ದರು,
ಶೃತಿ, ಸ್ವಾತಿ ಹಾಗೂ ಸೌಮ್ಯ ಪ್ರಾರ್ಥಿಸಿದರು. ನಿರ್ದೇಶಕ ಶಶಿಧರ್ ಕಾರ್ಕಳ ಕಾರ್ಯಕ್ರಮ ನಿರೂಪಿಸಿದರು, ಉಪಾಧ್ಯಕ್ಷರಾದ ರಾಮ ಭಂಡಾರಿ ಎಚ್ ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು