ಇತ್ತೀಚಿನ ಸುದ್ದಿ
ಕಬಕ: ಕೆಂಪಮ್ಮ ರಾಜ್ಯಪ್ರಶಸ್ತಿ ವಿಜೇತೆ ಶಾಂತಾ ಪುತ್ತೂರುಗೆ ಸನ್ಮಾನ
02/12/2022, 11:00

ಪುತ್ತೂರು(reporterkarnataka.com): ಕಬಕ ಸರಕಾರಿ ಪದವಿಪೂರ್ವ ಕಾಲೇಜು ನಡೆದ ವಾರ್ಷಿಕೋತ್ಸವ ದಲ್ಲಿ ಕೆಂಪೇಗೌಡರ ತಾಯಿಯ ಹೆಸರಿನಲ್ಲಿ ಮಹಿಳಾ ಸಾಧಕರಿಗೆ ಕೊಡಮಾಡುವ ಕೆಂಪಮ್ಮ ರಾಜ್ಯಪ್ರಶಸ್ತಿ,ಕಥಾಬಿಂದು ರಾಜ್ಯೋತ್ಸವ ಪುರಸ್ಕಾರ ಪಡೆದ ಸರಕಾರಿ ಪ್ರೌಢಶಾಲಾ ಶಿಕ್ಷಕಿ ಶಾಂತಾ ಪುತ್ತೂರು ಅವರನ್ನು ಸಾಧಕರ ನೆಲೆಯಲ್ಲಿ ಅಭಿನಂದಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪ್ರೇಮಲತಾ ಎಂ.(ಪ್ರಾಂಶುಪಾಲರು),ಟಿ.ಎಸ್.ಭಟ್ (ಕಾರ್ಯಾಧ್ಯಕ್ಷ ರು ಕಾಲೇಜು ಅಭಿವೃದ್ಧಿ ಸಮಿತಿ),ಸತ್ಯನಾರಾಯಣ ಭಟ್ (ಮಾಜಿ ಯೋಧರು),ದಿನೇಶ್ ಸಾಲಿಯಾನ್ (ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು),ವೆಂಕಟರಮಣ ಭಟ್ (ಇತಿಹಾಸ ಉಪನ್ಯಾಸಕರು), ಕೃಷ್ಣಯ್ಯ ಕೆ.(ದೈಹಿಕ ಶಿಕ್ಷಣ ಶಿಕ್ಷಕರು ಕಬಕ ಪ್ರೌಢಶಾಲೆ),ಪದ್ಮಾವತಿ (ಪೋಷಕ ಸದಸ್ಯ ರು),ಲಿಖಿತ್ (ಪಿ.ಸಿ.ಪಿ.ಎಲ್) ಉಪಸ್ಥಿತರಿದ್ದರು. ಬಯಾಲಜಿ ಉಪನ್ಯಾಸಕಿ ವನಿತಾ ಸನ್ಮಾನಿತರ ಪರಿಚಯ ವಾಚಿಸಿದರು.