ಇತ್ತೀಚಿನ ಸುದ್ದಿ
ಖಾತೆ ವರ್ಗಾವಣೆಗೆ 15 ಸಾವಿರ ಲಂಚ: ರೆವಿನ್ಯೂ ಇನ್ ಸ್ಪೆಕ್ಟರ್ ಸಿದ್ದರಾಜು ಎಸಿಬಿ ಬಲೆಗೆ
05/08/2022, 11:38
ಸಾಂದರ್ಭಿಕ ಚಿತ್ರ
ಮೈಸೂರು(reporterkarnataka.com): ಆಸ್ತಿಯ ಖಾತೆ ವರ್ಗಾವಣೆ ಮಾಡಲು ವ್ಯಕ್ತಿಯೊಬ್ಬರ ಬಳಿ 15 ಸಾವಿರ ಲಂಚ ಪಡೆಯುತ್ತಿದ್ದ ಮೈಸೂರು ಮಹಾನಗರ ಪಾಲಿಕೆ ವಲಯ ಕಚೇರಿ 8 ರ ಪ್ರಭಾರ ರೆವಿನ್ಯೂ ಇನ್ ಸ್ಪೆಕ್ಟರ್ ಎಸಿಬಿ ಬಲೆಗೆ ಬಿದ್ದಿದ್ದಾರೆ.
ರೆವಿನ್ಯೂ ಇನ್ ಸ್ಪೆಕ್ಟರ್ ಸಿದ್ದರಾಜು ಎಸಿಬಿ ಬಲೆಗೆ ಬಿದ್ದ ಅಧಿಕಾರಿ
ಗಾಯಿತ್ರಿಪುರಂನ ನಿವಾಸಿಯೊಬ್ಬರು ತಮ್ಮ ಆಸ್ತಿ ಖಾತೆ ವರ್ಗಾವಣೆ ಮಾಡಲು ವಲಯ ಕಚೇರಿ 8 ರಲ್ಲಿ ಅರ್ಜಿ ಸಲ್ಲಿಸಿದ್ದರು.ರೆವಿನ್ಯೂ ಇನ್ ಸ್ಪೆಕ್ಟರ್ ಸಿದ್ದರಾಜುರನ್ನು ಸಂಪರ್ಕಿಸಿದಾಗ ವರ್ಗಾವಣೆಗಾಗಿ 15 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇದರಿಂದ ಬೇಸತ್ತ ಅವರು ಮೈಸೂರು ಎಸಿಬಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಎಸಿಬಿ ಅಧಿಕಾರಿಗಳು
ಇಂದು ಎಫ್.ಟಿ.ಎಸ್.ಸರ್ಕಲ್ ಬಳಿ ಇರುವ ವಲಯ ಕಚೇರಿ 7 ರಲ್ಲಿ 15 ಸಾವಿರ ಲಂಚದ ಹಣ ಪಡೆಯುವಾಗ ದಾಳಿ ನಡೆಸಿ ಆರೋಪಿ ಸಿದ್ದರಾಜು ಅವರನ್ನ ಲಂಚದ ಹಣದ ಸಮೇತ ವಶಕ್ಕೆ ಪಡೆದಿದ್ದಾರೆ.